Home ದಾವಣಗೆರೆ ಯುವಕರಿಗೆ ಸಿಹಿ ಸುದ್ದಿ: UPSC, SSC, ಬ್ಯಾಂಕಿಂಗ್ ಪರೀಕ್ಷೆಗಳಿಗೆ ಸರ್ಕಾರದ ಉಚಿತ ಕೋಚಿಂಗ್, ಯಾವ ರಾಜ್ಯದಲ್ಲಿ?
ದಾವಣಗೆರೆನವದೆಹಲಿಬೆಂಗಳೂರು

ಯುವಕರಿಗೆ ಸಿಹಿ ಸುದ್ದಿ: UPSC, SSC, ಬ್ಯಾಂಕಿಂಗ್ ಪರೀಕ್ಷೆಗಳಿಗೆ ಸರ್ಕಾರದ ಉಚಿತ ಕೋಚಿಂಗ್, ಯಾವ ರಾಜ್ಯದಲ್ಲಿ?

Share
ಉಚಿತ
Share

ಉತ್ತರಾಖಂಡ: ಉತ್ತರಾಖಂಡ ಸರ್ಕಾರವು ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ತರಬೇತಿ ನೀಡುವ ಮಹತ್ವದ ಯೋಜನೆಯನ್ನು ಘೋಷಿಸಿದೆ. ‘ಮುಖ್ಯಮಂತ್ರಿ ಯುವ ಭವಿಷ್ಯ ನಿರ್ಮಾಣ ಯೋಜನೆ-2026’ ಹೆಸರಿನ ಈ ಯೋಜನೆಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

ಯಾರಿಗೆ ಲಭ್ಯ?

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು, ಸರ್ಕಾರಿ ಕಾಲೇಜುಗಳು ಹಾಗೂ ಸರ್ಕಾರಿ ಅನುದಾನಿತ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಯೋಜನೆಯ ನೇರ ಫಲಾನುಭವಿಗಳಾಗಲಿದ್ದಾರೆ.

ಯಾವೆಲ್ಲಾ ಪರೀಕ್ಷೆಗಳಿಗೆ ತರಬೇತಿ?

ಸ್ಪರ್ಧಾತ್ಮಕ ಪರೀಕ್ಷೆಗಳು: UPSC ಸಿವಿಲ್ ಸೇವೆಗಳು, ರಾಜ್ಯ ಸಾರ್ವಜನಿಕ ಸೇವಾ ಆಯೋಗ (PSC), ಸಿಡಿಎಸ್ (CDS), ಬ್ಯಾಂಕಿಂಗ್, ರೈಲ್ವೇಸ್ ಮತ್ತು ಎಸ್ಎಸ್ಸಿ (SSC).

ಪ್ರವೇಶ ಮತ್ತು ಅರ್ಹತಾ ಪರೀಕ್ಷೆಗಳು: CAT, MAT, GATE, NET ಹಾಗೂ CSIR-NET.

ವಿಶೇಷವಾಗಿ ಬೆಟ್ಟಗುಡ್ಡಗಳ ಗ್ರಾಮೀಣ ಹಾಗೂ ದೂರದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಮತ್ತು ಖಾಸಗಿ ಕೋಚಿಂಗ್ ಸೆಂಟರ್‌ಗಳ ದುಬಾರಿ ಶುಲ್ಕ ಭರಿಸಲಾಗದ ಬಡ ಅಭ್ಯರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಅಧ್ಯಯನ ಸಾಮಗ್ರಿಗಳನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಶೀಘ್ರದಲ್ಲೇ ತರಬೇತಿ ದಿನಾಂಕ ಹಾಗೂ ನೋಂದಣಿ ಪ್ರಕ್ರಿಯೆ ಪ್ರಕಟವಾಗಲಿದೆ.

Share

Leave a comment

Leave a Reply

Your email address will not be published. Required fields are marked *

Related Articles