Home ಕ್ರೈಂ ನ್ಯೂಸ್ ಕೊಲೆ ಮಾಡುವುದು ಹೇಗೆಂದು 6 ತಿಂಗಳು AI ಕೇಳಿ ಕಲಿತರು:ಆಸ್ತಿಗಾಗಿ ಹೆತ್ತ ತಂದೆ-ತಾಯಿ, ತಂಗಿಯನ್ನೇ ಮುಗಿಸಿದ ಪಾಪಿ ಮಗಳು ಮತ್ತು ಪ್ರೇಮಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಕೊಲೆ ಮಾಡುವುದು ಹೇಗೆಂದು 6 ತಿಂಗಳು AI ಕೇಳಿ ಕಲಿತರು:ಆಸ್ತಿಗಾಗಿ ಹೆತ್ತ ತಂದೆ-ತಾಯಿ, ತಂಗಿಯನ್ನೇ ಮುಗಿಸಿದ ಪಾಪಿ ಮಗಳು ಮತ್ತು ಪ್ರೇಮಿ!

Share
ಪ್ರೇಮಿ
Share

ಬೆಂಗಳೂರು: ಐಷಾರಾಮಿ ಜೀವನ ಮತ್ತು ಕೋಟ್ಯಂತರ ರೂಪಾಯಿ ಆಸ್ತಿಯ ಆಸೆಗಾಗಿ ಹೆತ್ತ ತಂದೆ-ತಾಯಿ ಹಾಗೂ ಸ್ವಂತ ತಂಗಿಯನ್ನೇ ಯುವತಿಯೊಬ್ಬಳು ತನ್ನ ಪ್ರೇಮಿಯೊಂದಿಗೆ ಸೇರಿ ಅತಿ ಕ್ರೂರವಾಗಿ ಹತ್ಯೆ ಮಾಡಿರುವ ಬೆಚ್ಚಿಬೀಳಿಸುವ ಘಟನೆ ಬೆಂಗಳೂರಿನ ಸಿಗಹಳ್ಳಿ ಪ್ರದೇಶದ ಸೌಮ್ಯ ನೆಸ್ಟ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿತ್ತು. ಪ್ರಕರಣ ಸಂಬಂಧ ಪುತ್ರಿ ಹಾಗೂ ಆಕೆ ಪ್ರಿಯಕರನನ್ನು ಬಂಧಿಸಲಾಗಿದೆ.

ಕೃತ್ಯ ಎಸಗಲು ಕಳೆದ ಆರು ತಿಂಗಳಿನಿಂದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಮೊರೆ ಹೋಗಿದ್ದ ಆರೋಪಿಗಳು, ಕೊನೆಗೆ ಅದೇ ತಂತ್ರಜ್ಞಾನದ ಸುಳಿವಿನಿಂದಾಗಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

2026ರ ಜೂನ್ 22ರ ರಾತ್ರಿ ನಡೆದ ಈ ಘಟನೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಸೋಮಸುಂದರ್ (52), ಅವರ ಪತ್ನಿ ಮುತ್ತುಲಕ್ಷ್ಮಿ (50) ಮತ್ತು ಕಿರಿಯ ಮಗಳು ಸುಪ್ರಿಯಾ (19) ಬರ್ಬರವಾಗಿ ಹತ್ಯೆಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಹಿರಿಯ ಮಗಳು ಶ್ವೇತಾ (24) ಮತ್ತು ಆಕೆಯ ಪ್ರೇಮಿ ಕೆನ್ನೆತ್ ಅರುಣ್ ಕುಮಾರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆಯ ಹಿನ್ನೆಲೆ ಹಾಗೂ ಸಂಚು:

ಕಾಲೇಜು ದಿನಗಳಿಂದಲೇ ಪ್ರೀತಿಸುತ್ತಿದ್ದ ಶ್ವೇತಾ ಮತ್ತು ಕೆನ್ನೆತ್, ಐಟಿ ಕಂಪನಿಯಲ್ಲಿ ಕೆಲಸ ಬಿಟ್ಟು ‘ಕ್ಲೌಡ್ ಕಿಚನ್’  ಆರಂಭಿಸಲು ತಾಯಿಯಿಂದ 25 ಲಕ್ಷ ರೂ. ಪಡೆದಿದ್ದರು. ವ್ಯಾಪಾರದಲ್ಲಿ ನಷ್ಟವಾದ ಬಳಿಕ, ಪೋಷಕರ ಗುರುತಿನ ಚೀಟಿ ಬಳಸಿ ವಿವಿಧ ಬ್ಯಾಂಕ್‌ಗಳಿಂದ 30 ಲಕ್ಷ ರೂ. ಸಾಲ ಪಡೆದಿದ್ದರು. ಬ್ಯಾಂಕ್ ನೋಟೀಸ್ ಬಂದಾಗ ಪೋಷಕರು ತರಾಟೆಗೆ ತೆಗೆದುಕೊಂಡಿದ್ದು, ಆಸ್ತಿಯಲ್ಲಿ ಪಾಲು ನೀಡಲು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಶ್ವೇತಾ, ಇಡೀ ಕುಟುಂಬವನ್ನು ಮುಗಿಸಿದರೆ ಕೋಟ್ಯಂತರ ರೂ. ಆಸ್ತಿ ತನಗೆ ದಕ್ಕುತ್ತದೆ ಎಂದು ಸಂಚು ರೂಪಿಸಿದ್ದಳು.

ಎ.ಐ. ಬಳಸಿ 6 ತಿಂಗಳು ತಯಾರಿ: ಜನವರಿಯಿಂದ ಜೂನ್‌ವರೆಗೆ ಎ.ಐ. ಬಳಸಿ “ಮೂರು ಜನರನ್ನು ಕೊಲ್ಲುವುದು ಹೇಗೆ?”, “ಯಾವ ಆಯುಧ ಬಳಸಬೇಕು?”, “ರಕ್ತದ ಕಲೆ ಮತ್ತು ಶವ ನಾಶಪಡಿಸುವುದು ಹೇಗೆ?” ಎಂದು ಹುಡುಕಾಡಿ ಸಿದ್ಧತೆ ನಡೆಸಿದ್ದರು.

ನಾಟಕವಾಡಿ ಕರೆಸಿ 26 ಬಾರಿ ಇರಿತ: ಜೂನ್ 22ರಂದು ತಾಯಿಗೆ ಕರೆ ಮಾಡಿ ತಪ್ಪಾಯಿತೆಂದು ಅತ್ತು ತನ್ನ ಫ್ಲಾಟ್‌ಗೆ ಕರೆಸಿಕೊಂಡ ಶ್ವೇತಾ, ಪ್ರೇಮಿ ಕೆನ್ನೆತ್ ಮೂಲಕ ತಾಯಿಗೆ 26 ಬಾರಿ ಚಾಕುವಿನಿಂದ ಇರಿಸಿ ಹತ್ಯೆ ಮಾಡಿಸಿದ್ದಳು. ಬಳಿಕ ಹುಡುಕಿಕೊಂಡು ಬಂದ ತಂದೆ ಮತ್ತು ತಂಗಿಯ ಮೇಲೂ ದಾಳಿ ನಡೆಸಲಾಗಿತ್ತು.

ಸಾಯುವ ಮುನ್ನ ತಂದೆ ನೀಡಿದ ಸುಳಿವು: ರಕ್ತದ ಮಡುವಿನಲ್ಲಿ ಫ್ಲಾಟ್‌ನಿಂದ ತೆವಳಿಕೊಂಡು ಹೊರಬಂದ ತಂದೆ ಸೋಮಸುಂದರ್, ಆಸ್ಪತ್ರೆಗೆ ಸಾಗಿಸುವ ಮುನ್ನ ಸ್ವಂತ ಮಗಳೇ ಈ ಕೃತ್ಯ ಎಸಗಿದ್ದಾಳೆಂದು ಪೊಲೀಸರಿಗೆ ತಿಳಿಸಿ ಕೊನೆಯುಸಿರೆಳೆದಿದ್ದರು.

ಪಾಂಡಿಚೇರಿಯಲ್ಲಿ ಸಿನಿಮೀಯ ಬಂಧನ: ಕೃತ್ಯದ ಬಳಿಕ ಚಿನ್ನಾಭರಣ ಹಾಗೂ ಹಣದೊಂದಿಗೆ ಪಾಂಡಿಚೇರಿಗೆ ಪರಾರಿಯಾಗಿದ್ದ ಆರೋಪಿಗಳನ್ನು, ಅವರ ಗೂಗಲ್ ಸರ್ಚ್ ಹಿಸ್ಟರಿ ಆಧರಿಸಿ ಪತ್ತೆ ಹಚ್ಚಿದ ಸೈಬರ್ ಸೆಲ್ ಮತ್ತು ಆರ್.ಕೆ. ಪುರಂ ಪೊಲೀಸರು ಬಂಧಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles