ಅಹಮದಾಬಾದ್: ನೋಡಲು ಅತ್ಯಂತ ಶಾಂತ ಹಾಗೂ ಅಮಾಯಕಳಂತೆ ಕಾಣುವ ಹೆಣ್ಣಿನ ಹಿಂದೆ ಇಷ್ಟೊಂದು ಕ್ರೂರ ಮತ್ತು ವಿಕೃತ ಮನಸ್ಸಿರಲು ಸಾಧ್ಯವೇ? ಅಹಮದಾಬಾದ್‌ನ ಹೊರವಲಯದಲ್ಲಿ ನಡೆದ ಈ ಘಟನೆ ಯಾವುದೇ ಹಾಲೀವುಡ್ ಕ್ರೈಂ ಥ್ರಿಲ್ಲರ್ ಸಿನಿಮಾ ಕಥೆಗಿಂತ ಕಮ್ಮಿಯಿಲ್ಲ. ಕಾಮ ಮತ್ತು ಕ್ರೌರ್ಯದ ಬೆನ್ನುಬಿದ್ದು ಸರಣಿ ಕೊಲೆಗಳಿಗೆ ಸ್ಕೆಚ್ ಹಾಕಿದ್ದ ಜಾಗೃತಿ ಎಂಬಾಕೆಯ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಸೈಕೋಪಾತ್ ಮಹಿಳೆ ಭಯಾನಕ ಕೃತ್ಯಕ್ಕೆ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.
ಮಕ್ಕಳನ್ನು ನಡುರಸ್ತೆಯಲ್ಲೇ ಬಿಟ್ಟು ಮೈದುನನ ಜೊತೆ ಓಟ!
ಜಾಗೃತಿಗೆ ಸುಖದೇವ್‌ಗಿರಿ ಎಂಬಾತನೊಂದಿಗೆ ಮದುವೆಯಾಗಿ, ಇಬ್ಬರು ಮುದ್ದಾದ ಮಕ್ಕಳಿದ್ದರು. ಮೇಲ್ನೋಟಕ್ಕೆ ಅದು ಸುಖಿ ಸಂಸಾರವಾಗಿತ್ತು. ಆದರೆ ಜಾಗೃತಿಯ ಚಂಚಲ ಮನಸ್ಸಿಗೆ ಅದ್ಯಾವುದೂ ಸಾಲಲಿಲ್ಲ. ಮದುವೆಯಾದ ಕೆಲವೇ ದಿನಗಳಲ್ಲಿ ಆಕೆಗೆ ತನ್ನ ಸ್ವಂತ ಮೈದುನ (ಗಂಡನ ತಮ್ಮ) ಶಾಂತಗಿರಿ ಮೇಲೆಯೇ ಕಣ್ಣು ಬಿತ್ತು. ವರಸೆ, ಬಾಂಧವ್ಯ ಎಲ್ಲವನ್ನೂ ಮರೆತು ಆತನೊಂದಿಗೆ ಅಕ್ರಮ ಸಂಬಂಧ ಬೆಳೆಸಿದಳು. ಅಷ್ಟೇ ಅಲ್ಲ, ಒಂದು ದಿನ ಮಕ್ಕಳನ್ನು ನಡುರಸ್ತೆಯಲ್ಲೇ ಬಿಟ್ಟು ಮೈದುನನ ಕೈಹಿಡಿದು ಮನೆ ಬಿಟ್ಟು ಓಡಿಹೋದಳು. ಶಾಂತಗಿರಿಯನ್ನೇ ತನ್ನ ‘ಎರಡನೇ ಗಂಡ’ನನ್ನಾಗಿ ಮಾಡಿಕೊಂಡು ಬೇರೆ ಊರಿನಲ್ಲಿ ವಾಸಿಸತೊಡಗಿದಳು.
ಎರಡನೇ ಗಂಡ ಬೋರ್ ಆದಾಗ ಪಕ್ಕದ ಮನೆ ಯುವಕನಿಗೆ ಬಲೆ!
ಶಾಂತಗಿರಿ ಜೊತೆಗಿನ ಜೀವನವೂ ಜಾಗೃತಿಗೆ ಕೆಲವೇ ದಿನಗಳಲ್ಲಿ ಬೋರ್ ಎನಿಸಿತು! ಈ ಬಾರಿ ಆಕೆಯ ಕಣ್ಣು ಬಿದ್ದಿದ್ದು ಪಕ್ಕದ ಮನೆಯಲ್ಲಿದ್ದ ಭರತ್ ಎಂಬ ಯುವಕನ ಮೇಲೆ. ಎರಡನೇ ಗಂಡ ಶಾಂತಗಿರಿ ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು ಭರತ್ ಜೊತೆ ಸರಸವಾಡಲು ಶುರುಮಾಡಿದಳು. ಆದರೆ ಈ ಕಳ್ಳಾಟ ಎರಡನೇ ಗಂಡನಿಗೆ ಗೊತ್ತಾಗಿ, ಆತು ಜಾಗೃತಿಗೆ ತೀವ್ರವಾಗಿ ಬಯ್ದು ಬುದ್ಧಿ ಹೇಳಿದ್ದಾನೆ. ತನ್ನ ಸುಖಕ್ಕೆ ಅಡ್ಡಬಂದ ಗಂಡನನ್ನು ಮುಗಿಸಲು ನಿರ್ಧರಿಸಿದ ಜಾಗೃತಿ, ಪ್ರಿಯಕರ ಭರತ್ ಜೊತೆ ಸೇರಿ ಒಂದು ರಾತ್ರಿ ನಿದ್ರೆಯಲ್ಲಿದ್ದ ಶಾಂತಗಿರಿಯನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿ, ಹೆಣವನ್ನು ಯಾರಿಗೂ ತಿಳಿಯದಂತೆ ಮಾಯ ಮಾಡಿದಳು!
ಮೂರನೇ ಎಂಟ್ರಿ… ಹಳೇ ಪ್ರಿಯಕರನಿಗೂ ಮರಣ ಶಾಸನ!
ಮೊದಲ ಗಂಡನನ್ನು ಬಿಟ್ಟು, ಎರಡನೇ ಗಂಡನನ್ನು ಮುಗಿಸಿದ ಜಾಗೃತಿ, ಪ್ರಿಯಕರ ಭರತ್ ಜೊತೆ ಸೇರಿ ಬೇರೆ ಊರಿಗೆ ಪಾರಾರಿಯಾದಳು. ಆದರೆ ಆಕೆಯ ವಿಕೃತ ಬುದ್ಧಿ ಅಲ್ಲೂ ನಿಲ್ಲಲಿಲ್ಲ! ಶಾಂತಗಿರಿಯನ್ನು ಕೊಲೆ ಮಾಡಲು ಇವರಿಗೆ ದೀಪಕ್ ಎಂಬ ಸುಪಾರಿ ಕಿಲ್ಲರ್ (ರೌಡಿ) ಪರಿಚಯವಾಗಿದ್ದ. ಈಗ ಜಾಗೃತಿಯ ಕಣ್ಣು ಆ ದೀಪಕ್ ಮೇಲೆ ಬಿತ್ತು!
ಭರತ್‌ನನ್ನು ಸೈಡ್‌ಲೈನ್ ಮಾಡಿ ದೀಪಕ್ ಜೊತೆ ಹೊಸ ಲವ್ ಸ್ಟೋರಿ ಶುರುಮಾಡಿದಳು. ಕೆಲವು ದಿನಗಳ ನಂತರ ಭರತ್ ತಮಗೆ ಅಡ್ಡವಾಗುತ್ತಿದ್ದಾನೆ ಎಂದುಕೊಂಡ ಜಾಗೃತಿ, “ಮೊದಲ ಗಂಡನನ್ನೇ ಮುಗಿಸಿದ್ದೇನೆ, ಇನ್ನು ನೀನೆಷ್ಟು?” ಎಂದುಕೊಂಡು ಹೊಸ ಪ್ರಿಯಕರ ದೀಪಕ್ ಸಹಾಯದಿಂದ ಹಳೇ ಪ್ರಿಯಕರ ಭರತ್‌ನನ್ನು ಕೊಲೆ ಮಾಡಲು ಸ್ಕೆಚ್ ಹಾಕಿದಳು!
ಪೊಲೀಸರ ಎಂಟ್ರಿ ಮತ್ತು ಅಸಲಿ ಟ್ವಿಸ್ಟ್:
ಜಾಗೃತಿ ಮತ್ತು ದೀಪಕ್ ಸೇರಿ ಭರತ್‌ನನ್ನು ಮುಗಿಸಲು ಪ್ಲಾನ್ ಮಾಡುತ್ತಿದ್ದಾಗಲೇ ವಿಧಿ ಬೇರೆ ತರಹವೇ ಆಟವಾಡಿತು. ಅತ್ತ ಶಾಂತಗಿರಿಯ ನಾಪತ್ತೆ ಕೇಸ್ ಬೆನ್ನತ್ತಿದ್ದ ಪೊಲೀಸರಿಗೆ ಒಂದು ಅನಾಮಧೇಯ ಹೆಣ ಸಿಕ್ಕಿತ್ತು. ಅದರ ಜಾಡು ಹಿಡಿದು ಜಾಗೃತಿಯ ಕಾಲ್ ಡೇಟಾ ಹಾಗೂ ಮೂವ್‌ಮೆಂಟ್ಸ್ ಟ್ರ್ಯಾಕ್ ಮಾಡಿದ ಪೊಲೀಸರು, ಇಡೀ ಗ್ಯಾಂಗ್ ಅನ್ನು ರೆಡ್ ಹ್ಯಾಂಡ್ ಆಗಿ ಲಾಕ್ ಮಾಡಿದರು!
ಪೊಲೀಸರೇ ಬೆಚ್ಚಿಬಿದ್ದ ಸೈಕೋಪಾತ್ ಕಥೆ!
ಬಂಧನದ ಬಳಿಕ ಜಾಗೃತಿ ಬಾಯ್ಬಿಟ್ಟ ನಿಜಗಳನ್ನು ಕೇಳಿ ಪೊಲೀಸರ ಮೈಂಡ್ ಬ್ಲಾಂಕ್ ಆಗಿತ್ತು. ಒಂದು ಅಕ್ರಮ ಸಂಬಂಧಕ್ಕಾಗಿ ಗಂಡನನ್ನು ಬಿಟ್ಟಳು, ಎರಡನೇ ಅಕ್ರಮ ಸಂಬಂಧಕ್ಕಾಗಿ ಎರಡನೇ ಗಂಡನನ್ನು ಕೊಂದಳು, ಇನ್ನು ಮೂರನೇ ಸಂಬಂಧಕ್ಕಾಗಿ ಮೊದಲ ಪ್ರಿಯಕರನನ್ನೇ ಕೊಲ್ಲಲು ಮುಂದಾಗಿದ್ದ ಇವಳ ವಿಕೃತ ಮನಸ್ಥಿತಿ ಕಂಡು ಇಡೀ ಸಮಾಜವೇ ತಲ್ಲಣಿಸಿದೆ. ಸದ್ಯ ಈ ‘ಕಿಲ್ಲಿಂಗ್ ಲೇಡಿ’ ಜೈಲಿನ ಕತ್ತಲು ಕೋಣೆಯಲ್ಲಿ ತನ್ನ ಪಾಪದ ಶಿಕ್ಷೆ ಅನುಭವಿಸುತ್ತಿದ್ದಾಳೆ.





Leave a comment