ಗದಗ: “ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ” ಎಂಬ ಹಳೇ ಗಾದೆ ಮಾತು ಇಂದಿನ ಧಾವಂತದ ಜಗತ್ತಿನಲ್ಲಿ ಮರೆಯಾಗುತ್ತಿರುವಂತೆ ಕಾಣುತ್ತಿದೆ. ಸಣ್ಣಪುಟ್ಟ ವಿಚಾರಕ್ಕೆ ಶುರುವಾದ ದಂಪತಿಗಳ ಕಲಹವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಭೀಕರ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೆರನಾಗನೂರು ಗ್ರಾಮದಲ್ಲಿ ನಡೆದಿದೆ.
ಸಹೋದರಿಯ ಮದುವೆಗೆ ಬಂದಿದ್ದಳೇ ಕಾಲನಾದಳು!
ಮೃತ ವಿಶ್ವನಾಥ್ ಹಾಗೂ ಆರೋಪಿ ಕವಿತಾ 2022 ರ ಫೆಬ್ರವರಿಯಲ್ಲಿ ಪ್ರೀತಿಸಿ, ಹಿರಿಯರ ಒಪ್ಪಿಗೆ ಪಡೆದು ಮದುವೆಯಾಗಿದ್ದರು. ಇವರಿಗೆ ಮೂರು ವರ್ಷದ ಗಂಡು ಮಗುವಿದೆ. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ, ಕವಿತಾ ಕಳೆದ ಮೂರು ವರ್ಷಗಳಿಂದ ತವರು ಮನೆಯಲ್ಲೇ ವಾಸವಿದ್ದಳು. ಇತ್ತೀಚೆಗೆ ವಿಶ್ವನಾಥ್ ಸಹೋದರಿಯ ಮದುವೆ ಇದ್ದ ಕಾರಣ ಕವಿತಾ ಮರಳಿ ಗಂಡನ ಮನೆಗೆ ಬಂದಿದ್ದಳು.
ಬೆಡ್‌ರೂಮ್‌ನಲ್ಲಿ ನಡೆದ ಘೋರ ಕೃತ್ಯ:
ಮನೆಗೆ ಮರಳಿದ ಮೇಲೂ ದಂಪತಿಗಳ ನಡುವೆ ಮತ್ತೆ ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ತಿರುಗಿದಾಗ, ಬೆಡ್‌ರೂಮ್‌ನಲ್ಲಿದ್ದ ಕಬ್ಬಿಣದ ರಾಡ್ (ಹಾರಿ) ನಿಂದ ಕವಿತಾ ಪತಿ ವಿಶ್ವನಾಥ್ ತಲೆಗೆ ಬಲವಾಗಿ ಹೊಡೆದಿದ್ದಾಳೆ. ತೀವ್ರ ರಕ್ತಸ್ರಾವದಿಂದ ವಿಶ್ವನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಪೊಲೀಸ್ ತನಿಖೆ: ಘಟನೆಗೆ ಸಂಬಂಧಿಸಿದಂತೆ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಕವಿತಾ ಹಾದಿಮನಿಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶ್ವಾನದಳ ಹಾಗೂ ಸೋಕೋ (SOCO) ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಡ್ಡೆರನಾಗನೂರು ಗ್ರಾಮದಲ್ಲಿ ಸದ್ಯ ಆತಂಕದ ವಾತಾವರಣ ನಿರ್ಮಾಣವಾಗಿದೆ.
- domestic violence Gadag
- Gadag
- Gadag murder case
- iron rod murder
- Kavita Hadimani
- Nargund crime news
- Nargund police station
- Radderanaganur village
- Vishwanath murder
- Wife Kills Husband
- ಕಬ್ಬಿಣದ ರಾಡ್ನಿಂದ ಕೊಲೆ
- ಕವಿತಾ ಹಾದಿಮನಿ
- ಗಂಡನ ಕೊಲೆ ಮಾಡಿದ ಪತ್ನಿ
- ಗದಗ ಕೊಲೆ ಪ್ರಕರಣ
- ದಾಂಪತ್ಯ ಕಲಹ
- ನರಗುಂದ ಕ್ರೈಮ್ ನ್ಯೂಸ್
- ನರಗುಂದ ಪೊಲೀಸ್ ಠಾಣೆ
- ರಡ್ಡೆರನಾಗನೂರು





Leave a comment