Home ಕ್ರೈಂ ನ್ಯೂಸ್ ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್ ಪ್ರಿ ರಿಲೀಸ್ ವೇಳೆ ಅವಘಡ ಕೇಸ್: ಮಲ್ಲಾರೆಡ್ಡಿ ಯೂನಿವರ್ಸಿಟಿ ಮ್ಯಾನೇಜ್‌ಮೆಂಟ್ ಮೇಲೆ ಬಿತ್ತು ಕೇಸ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್ ಪ್ರಿ ರಿಲೀಸ್ ವೇಳೆ ಅವಘಡ ಕೇಸ್: ಮಲ್ಲಾರೆಡ್ಡಿ ಯೂನಿವರ್ಸಿಟಿ ಮ್ಯಾನೇಜ್‌ಮೆಂಟ್ ಮೇಲೆ ಬಿತ್ತು ಕೇಸ್!

Share
ಯಶ್
Share

ಹೈದರಾಬಾದ್: ನಟ ಯಶ್ ನಟನೆಯ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್ ಸಿನಿಮಾ ಬಿಡುಗಡೆ ಮುನ್ನವೇ ಆಘಾತ ಆಗಿದೆ.

ಟಾಕ್ಸಿಕ್ ಪ್ರಿ ರಿಲೀಸ್ ವೇಳೆ ಸಂಭವಿಸಿದ ಅನಾಹುತದಲ್ಲಿ ನಾಲ್ವರು ಗಾಯಗೊಂಡಿದ್ದು, ಆಯೋಜಕರ ವಿರುದ್ಧ ಕೇಸ್ ದಾಖಲಾಗಿದೆ. 

ಹೈದರಾಬಾದ್‌ನ ಮಲ್ಲಾರಡ್ಡಿ ಯೂನಿವರ್ಸಿಟಿಯಲ್ಲಿ ನಡೆದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಪೂರ್ವಭಾವಿ  ಕಾರ್ಯಕ್ರಮದಲ್ಲಿ ಭಾರೀ ಅನಾಹುತ ಸಂಭವಿಸಿದೆ. ವೇದಿಕೆ ಸಮೀಪದಲ್ಲಿದ್ದ ಸೌಂಡ್ ಬಾಕ್ಸ್ ಮತ್ತು ಸ್ಪೀಕರ್ ಸ್ಟ್ಯಾಂಡ್ ಕುಸಿದು ಬಿದ್ದು ನಾಲ್ವರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ.

ಕಾರ್ಯಕ್ರಮದಲ್ಲಿ ಯಶ್ ಮಾತನಾಡುತ್ತಿದ್ದ ವೇಳೆ ಕೆಲ ಅಭಿಮಾನಿಗಳು ಸ್ಪೀಕರ್ ಸ್ಟ್ಯಾಂಡ್‌ಗಳ ಮೇಲೆ ಹತ್ತಲು ಯತ್ನಿಸಿದ್ದರಿಂದ ಈ ಘಟನೆ ನಡೆದಿದೆ. ಘಟನೆ ತಿಳಿಯುತ್ತಿದ್ದಂತೆ ಎಚ್ಚೆತ್ತ ನಟ ಯಶ್ ತಮ್ಮ ಭಾಷಣವನ್ನು ಅರ್ಧದಲ್ಲೇ ನಿಲ್ಲಿಸಿ, ಗಾಯಾಳುಗಳಿಗೆ ಕೂಡಲೇ ಚಿಕಿತ್ಸೆ ಕೊಡಿಸುವಂತೆ ಆಯೋಜಕರಿಗೆ ಸೂಚಿಸಿದರು.

ಈ ನಿರ್ಲಕ್ಷ್ಯದ ಘಟನೆಗೆ ಸಂಬಂಧಿಸಿದಂತೆ ಸೈಬರಾಬಾದ್ ಪೊಲೀಸರು ಮಲ್ಲಾರೆಡ್ಡಿ ಯೂನಿವರ್ಸಿಟಿ ಆಡಳಿತ ಮಂಡಳಿ ಹಾಗೂ ಈವೆಂಟ್ ಮ್ಯಾನೇಜರ್‌ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles