Home ದಾವಣಗೆರೆ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುವುದೇಕೆ? ನನ್ನ ಬಳಿ ಎಲ್ಲಾ ಸಾಕ್ಷ್ಯಗಳಿವೆ, ಸೂಕ್ತ ಸಮಯದಲ್ಲಿ ದಾಖಲೆ ಬಿಡುಗಡೆ: ಡಿ.ಕೆ. ಶಿವಕುಮಾರ್ ಗುಡುಗು!
ದಾವಣಗೆರೆನವದೆಹಲಿಬೆಂಗಳೂರು

ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುವುದೇಕೆ? ನನ್ನ ಬಳಿ ಎಲ್ಲಾ ಸಾಕ್ಷ್ಯಗಳಿವೆ, ಸೂಕ್ತ ಸಮಯದಲ್ಲಿ ದಾಖಲೆ ಬಿಡುಗಡೆ: ಡಿ.ಕೆ. ಶಿವಕುಮಾರ್ ಗುಡುಗು!

Share
ಡಿ.ಕೆ. ಶಿವಕುಮಾರ್
Share

ನವದೆಹಲಿ: ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ನಂತರ ತಮ್ಮ ಹಾಗೂ ತಮ್ಮ ಸರ್ಕಾರದ ಪ್ರಮುಖ ಸಚಿವರ ವಿರುದ್ಧ ಸಂಘಟಿತ ‘ಸ್ಟಿಂಗ್ ಆಪರೇಷನ್’ ನಡೆಸಲು ದೊಡ್ಡ ಮಟ್ಟದ ಷಡ್ಯಂತ್ರ ನಡೆದಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಚಲನಕಾರಿ ಆರೋಪ ಮಾಡಿದ್ದಾರೆ. ಈ ಕುತಂತ್ರದ ಹಿಂದೆ ಇರುವ ‘ಪಿತಾಮಹ’ ಯಾರು, ಅವರಿಗೆ ಹಣಕಾಸಿನ ನೆರವು ನೀಡುತ್ತಿರುವುದು ಯಾರು ಹಾಗೂ ಇದನ್ನು ಹೇಗೆ ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂಬ ಸಂಪೂರ್ಣ ಬ್ಲೂಪ್ರಿಂಟ್ ತಮ್ಮ ಬಳಿ ಇದೆ ಎಂದು ಅವರು ಹೇಳಿದ್ದಾರೆ.

ನವದೆಹಲಿಯ ಕರ್ನಾಟಕ ಭವನದ ಬಳಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಗುರುವಾರ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಸಚಿವರ ಮೇಲೆ ನಡೆಯುತ್ತಿರುವ ಗುಪ್ತ ಕಾರ್ಯಾಚರಣೆಗಳ ಬಗ್ಗೆ ನೀಡಿರುವ ಎಚ್ಚರಿಕೆಯನ್ನು ಸಮರ್ಥಿಸಿಕೊಂಡರು. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಸೂಕ್ತ ಆಧಾರಗಳಿಲ್ಲದೆ ತಾವು ಯಾವುದೇ ಮಾತುಗಳನ್ನಾಡುವುದಿಲ್ಲ ಎಂದ ಅವರು, ಈ ಷಡ್ಯಂತ್ರಗಳನ್ನು ತಮಗೆ ಬಂದ ಕ್ಷಣದಲ್ಲೇ ಗುರುತಿಸಿ, ಸಾಕ್ಷ್ಯಾಧಾರಗಳನ್ನು ದಾಖಲಿಸಿಟ್ಟುಕೊಂಡಿರುವುದಾಗಿ ಬಹಿರಂಗಪಡಿಸಿದರು.

ನನ್ನ ಮೇಲೆಯೇ ಮೊದಲ ಯತ್ನ: ಸಿಎಂ ಆದ ಬಳಿಕ ಮಾರುವೇಷದ ಕಾರ್ಯಾಚರಣೆಗಳನ್ನು ಮೊದಲು ತಮ್ಮ ಮೇಲಿಂದಲೇ ಶುರು ಮಾಡಲು ಯತ್ನಿಸಲಾಗಿತ್ತು. ಈ ಬಗ್ಗೆ ಫೋಟೋ ಸೇರಿದಂತೆ ಎಲ್ಲಾ ಸಾಕ್ಷ್ಯಗಳು ಲಭ್ಯವಿವೆ.

ಖಾಸಗಿ ಏಜೆಂಟರ ನೇಮಕ: ರಾಜ್ಯದ ಕೆಲ ನಾಯಕರು ಸಚಿವರು ಮತ್ತು ಅಧಿಕಾರಿಗಳನ್ನು ಸಿಕ್ಕಿಹಾಕಿಸಲು ಖಾಸಗಿ ಏಜೆನ್ಸಿಗಳು ಹಾಗೂ ಏಜೆಂಟರನ್ನು ನೇಮಿಸಿಕೊಂಡಿದ್ದಾರೆ ಎಂಬ ಪಕ್ಕಾ ಮಾಹಿತಿ ಇದೆ.

ಅಧಿಕಾರಿಗಳು, ಸಚಿವರಿಗೆ ಎಚ್ಚರಿಕೆ: ಸರ್ಕಾರಿ ಅಧಿಕಾರಿಗಳು ಮತ್ತು ಸಚಿವರನ್ನು ಗುರಿಯಾಗಿಸಿಕೊಂಡು ಬಲೆ ಹೆಣೆಯಲಾಗುತ್ತಿದ್ದು, ಅಪರಿಚಿತರೊಂದಿಗೆ ವ್ಯವಹರಿಸುವಾಗ ಹುಷಾರಾಗಿರಲು ಸಂಪುಟ ಸಭೆಯಲ್ಲೂ ಸೂಚಿಸಲಾಗಿದೆ.

ಹೆಚ್‌ಡಿಕೆಗೆ ಟಾಂಗ್: “ನನ್ನ ವಿರುದ್ಧವೇ ಷಡ್ಯಂತ್ರ ನಡೆಯುತ್ತಿರುವಾಗ ಮಂತ್ರಿಗಳನ್ನು ಎಚ್ಚರಿಸುವುದು ನನ್ನ ಕರ್ತವ್ಯ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರುವುದೇಕೆ?” ಎಂದು ಎಚ್.ಡಿ. ಕುಮಾರಸ್ವಾಮಿ ಅವರ ಪ್ರಶ್ನೆಗೆ ತಿರುಗೇಟು ನೀಡಿದರು.

ವಿಪಕ್ಷಗಳು ಮತ್ತು ಖಾಸಗಿ ಏಜೆನ್ಸಿಗಳು ಸೇರಿ ಮಾಡುತ್ತಿರುವ ಈ ಕೆಲಸಗಳ ಕುರಿತು ಸೂಕ್ತ ಕಾಲ ಬಂದಾಗ ಸೂಕ್ತ ವೇದಿಕೆಯಲ್ಲಿಯೇ ಉತ್ತರ ನೀಡಲಾಗುವುದು. ಯಾರನ್ನು ಎಲ್ಲಿಗೆ ಕಳುಹಿಸಲಾಗಿದೆ ಮತ್ತು ಯಾರನ್ನು ಊರು ಬಿಟ್ಟು ಓಡಿಸಲಾಗಿದೆ ಎಂಬ ಸತ್ಯಾಸತ್ಯತೆಗಳ ದಾಖಲೆ ತಮ್ಮ ಬಳಿ ಭದ್ರವಾಗಿದೆ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles