Home ಕ್ರೈಂ ನ್ಯೂಸ್ ಚೆನ್ನೈ ರೈಲಿನಲ್ಲಿ ಮಹಿಳೆಯ ದೇಹದ ತುಂಡುಗಳು ಪತ್ತೆ ಪ್ರಕರಣ: ಗುಡುವಾಂಚೇರಿಯಲ್ಲಿ ಅಡುಗೆ ಪಾತ್ರೆಯಲ್ಲಿ ಮತ್ತಷ್ಟು ಶವದ ಭಾಗಗಳು ಪತ್ತೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಚೆನ್ನೈ ರೈಲಿನಲ್ಲಿ ಮಹಿಳೆಯ ದೇಹದ ತುಂಡುಗಳು ಪತ್ತೆ ಪ್ರಕರಣ: ಗುಡುವಾಂಚೇರಿಯಲ್ಲಿ ಅಡುಗೆ ಪಾತ್ರೆಯಲ್ಲಿ ಮತ್ತಷ್ಟು ಶವದ ಭಾಗಗಳು ಪತ್ತೆ!

Share
ಬಿರಿಯಾನಿ
Share

ಆಗ್ರಾ:  ರೈಲು ನಿಲ್ದಾಣದಲ್ಲಿ ರೈಲಿನಲ್ಲಿದ್ದ ಸೂಟ್‌ಕೇಸ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಮಾನವನ ದೇಹದ ಭಾಗಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ಮಹತ್ವದ ಸುಳಿವು ಪತ್ತೆಹಚ್ಚಿದ್ದಾರೆ. ಚೆನ್ನೈನ ಗುಡುವಾಂಚೇರಿ ಪ್ರದೇಶದ ಮನೆಯೊಂದನ್ನು ಶೋಧಿಸಿದ ಪೊಲೀಸರಿಗೆ ಅಡುಗೆ ಪಾತ್ರೆಯಲ್ಲಿ ಮತ್ತಷ್ಟು ಕೊಳೆತ ದೇಹದ ಭಾಗಗಳು ಸಿಕ್ಕಿವೆ.

ಒಡಿಶಾ ಮೂಲದ 38 ವರ್ಷದ ಹಯುತಾನ್ ನಿಶಾ ಎಂಬವರನ್ನು ಕೊಲೆ ಮಾಡಿ ದೇಹವನ್ನು ತುಂಡರಿಸಲಾಗಿದೆ ಎಂದು ಗುರುತಿಸಲಾಗಿದೆ. ಮಣಿಕ್ ಉದ್ದಿನ್ ಲಸ್ಕರ್ ಮತ್ತು ಭಗಬತಿ ಮಾಝಿ ಎಂಬ ಇಬ್ಬರು ಶಂಕಿತರು ತಲೆಮರೆಸಿಕೊಂಡಿದ್ದು, ಪೊಲೀಸರು ಬಲೆ ಬೀಸಿದ್ದಾರೆ.

ಘಟನೆ ಏನು?: ಆಗಸ್ಟ್ 5ರಂದು ಚೆನ್ನೈನಿಂದ ನವದೆಹಲಿಗೆ ಹೊರಟಿದ್ದ ತಮಿಳುನಾಡು ಎಕ್ಸ್‌ಪ್ರೆಸ್ ರೈಲಿನ ಟ್ರಾಲಿ ಬ್ಯಾಗ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ತ್ಯಾಜ್ಯ ದೇಹದ ಭಾಗಗಳು ಪತ್ತೆಯಾಗಿದ್ದವು.

ಮೃತ ಮಹಿಳೆ ಗುರುತು: ಒಡಿಶಾ ಮೂಲದ ಜಗತ್‌ಸಿಂಗ್‌ಪುರ ನಿವಾಸಿ, 38 ವರ್ಷದ ಹಯಾತುನ್ ನಿಶಾ ಎಂದು ಗುರುತಿಸಲಾಗಿದೆ.

ಸಿಸಿಟಿವಿ ಸುಳಿವು: ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಇಬ್ಬರು ಶಂಕಿತರು ಟ್ರಾಲಿ ಬ್ಯಾಗ್‌ನೊಂದಿಗೆ ರೈ ಹತ್ತುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಬೆಚ್ಚಿಬೀಳಿಸುವ ಅಂಶ: ಪೊಲೀಸರು ಚೆನ್ನೈನ ಗುಡುವಾಂಚೇರಿಯಲ್ಲಿರುವ ಶಂಕಿತರ ಬಾಡಿಗೆ ಮನೆಯನ್ನು ತಪಾಸಣೆ ನಡೆಸಿದಾಗ, ಅಲ್ಲಿನ ಅಡುಗೆ ಪಾತ್ರೆಯಲ್ಲಿ ಮತ್ತಷ್ಟು ಕೊಳೆತ ಶವದ ಭಾಗಗಳು ಪತ್ತೆಯಾಗಿವೆ.

ಪ್ರಮುಖ ಆರೋಪಿಗಳು ಪರಾರಿ: ಅಸ್ಸಾಂ ಮೂಲದ ಮಾಣಿಕ್ ಉದ್ದಿನ್ ಲಸ್ಕರ್ ಹಾಗೂ ಒಡಿಶಾದ ಭಗಬತಿ ಮಾಝಿ ಎಂಬುವವರಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles