Home ದಾವಣಗೆರೆ ಸಕ್ರೆಬೈಲು ಆನೆ ಬಿಡಾರದಲ್ಲಿದೆ ಉದ್ಯೋಗಾವಕಾಶ: ಪಶುವೈದ್ಯರ ಹುದ್ದೆಗೆ ಜುಲೈ 2ರೊಳಗೆ ಅರ್ಜಿ ಸಲ್ಲಿಸಿ
ದಾವಣಗೆರೆಉದ್ಯೋಗ ವಾರ್ತೆಬೆಂಗಳೂರು

ಸಕ್ರೆಬೈಲು ಆನೆ ಬಿಡಾರದಲ್ಲಿದೆ ಉದ್ಯೋಗಾವಕಾಶ: ಪಶುವೈದ್ಯರ ಹುದ್ದೆಗೆ ಜುಲೈ 2ರೊಳಗೆ ಅರ್ಜಿ ಸಲ್ಲಿಸಿ

Share
ಸಕ್ರೆಬೈಲು
Share

ಶಿವಮೊಗ್ಗ: ಜಿಲ್ಲೆಯ ಪ್ರಸಿದ್ಧ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡುವುದು ಸೇರಿದಂತೆ, ವನ್ಯಜೀವಿ ವಿಭಾಗದ ತುರ್ತು ಕಾರ್ಯಗಳಿಗಾಗಿ ಹೊರಗುತ್ತಿಗೆ ಆಧಾರದ ಮೇಲೆ 1 ಪಶುವೈದ್ಯರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಶಿವಮೊಗ್ಗ ವೃತ್ತ ವ್ಯಾಪ್ತಿಯಲ್ಲಿ ವನ್ಯಪ್ರಾಣಿಗಳ ಮರಣೋತ್ತರ ಪರೀಕ್ಷೆ, ಮಾನವ-ವನ್ಯಮೃಗ ಸಂಘರ್ಷದ ಸಂದರ್ಭದಲ್ಲಿ ರಕ್ಷಣೆ ಮತ್ತು ಸ್ಥಳಾಂತರ ಕಾರ್ಯಗಳನ್ನು ತ್ವರಿತವಾಗಿ ನಿಭಾಯಿಸಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ ಎಂದು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹುದ್ದೆಯ ವಿವರಗಳು:

ಹುದ್ದೆಯ ಹೆಸರು: ಪಶುವೈದ್ಯರು (Veterinarian – ಹೊರಗುತ್ತಿಗೆ ಆಧಾರ)

ಹುದ್ದೆಗಳ ಸಂಖ್ಯೆ: 01

ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು Bachelor of veterinary science & Animal husbandry (B.V.Sc & A.H) ಶಿಕ್ಷಣ ಹೊಂದಿರಬೇಕು. ವನ್ಯಜೀವಿ ವಿಷಯದಲ್ಲಿ ಸ್ನಾತಕೋತ್ತರ ಪಶುವೈದ್ಯಕೀಯ ಪದವಿ ಪಡೆದವರಿಗೆ ಆದ್ಯತೆ ಇರಲಿದೆ.

ಅನುಭವ: ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳ ವನ್ಯಜೀವಿ ಕ್ಷೇತ್ರ ಅಥವಾ ಮೃಗಾಲಯ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸಿದ ಅನುಭವ ಹೊಂದಿರಬೇಕು.

ಅರ್ಜಿ ಸಲ್ಲಿಕೆ ಮತ್ತು ಸಂದರ್ಶನದ ವಿವರ:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 02, 2026

ನೇರ ಸಂದರ್ಶನ ನಡೆಯುವ ದಿನಾಂಕ: ಜುಲೈ 06, 2026

ಅರ್ಜಿ ಸಲ್ಲಿಸುವ ವಿಧಾನ: ಆಸಕ್ತರು ತಮ್ಮ ಸ್ವಯಂ ವಿವರ (Resume) ಹಾಗೂ ಅಗತ್ಯ ಪೂರಕ ದಾಖಲಾತಿಗಳೊಂದಿಗೆ ಶಿವಮೊಗ್ಗದ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಅಂಚೆ ಮೂಲಕ ಅಥವಾ ಖುದ್ದಾಗಿ (ಮುದ್ದಾಂ) ಸಲ್ಲಿಸಬೇಕು.

  • ಅರ್ಜಿ ನಮೂನೆ ಪಡೆಯುವ ಸ್ಥಳ: ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, ವನ್ಯಜೀವಿ ವಿಭಾಗ, ಶಿವಮೊಗ್ಗ ಅಥವಾ ಅಧಿಕೃತ ವೆಬ್‌ಸೈಟ್ https://sakrebailuelephantcamp.org/ ಮೂಲಕ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

  • ಕಚೇರಿ ದೂರವಾಣಿ ಸಂಖ್ಯೆ: 08182-222983

  • ವಿಜಯ್‌ಕುಮಾರ್ ಕಾಳಪ್ಪನವರ್ (ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ ಉಪ ವಿಭಾಗ, ಶಿವಮೊಗ್ಗ) – 9481461553

  • ವಿನಯ್ ಜೆ ಆರ್ (ವಲಯ ಅರಣ್ಯಾಧಿಕಾರಿ, ಸಕ್ರೆಬೈಲು ವನ್ಯಜೀವಿ ವಲಯ, ಗಾಜನೂರು) – 9663121406

Share

Leave a comment

Leave a Reply

Your email address will not be published. Required fields are marked *