Home ಜೂನ್ 20ರಂದು ನ್ಯಾಮತಿ, ಹೊನ್ನಾಳಿ ಸುತ್ತಮುತ್ತ ವಿದ್ಯುತ್ ನಿಲುಗಡೆ; ಇಲ್ಲಿದೆ ಪೂರ್ಣ ವಿವರ
Homeದಾವಣಗೆರೆಬೆಂಗಳೂರು

ಜೂನ್ 20ರಂದು ನ್ಯಾಮತಿ, ಹೊನ್ನಾಳಿ ಸುತ್ತಮುತ್ತ ವಿದ್ಯುತ್ ನಿಲುಗಡೆ; ಇಲ್ಲಿದೆ ಪೂರ್ಣ ವಿವರ

Share
ಹೊನ್ನಾಳಿ
Share

ನ್ಯಾಮತಿ: ತಾಲೂಕಿನ ಗ್ರಾಹಕರಿಗೆ ಪ್ರಮುಖ ಸೂಚನೆ. ಹೊನ್ನಾಳಿಯ 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂನ್ 20ರ ಶನಿವಾರದಂದು ನ್ಯಾಮತಿ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ನ್ಯಾಮತಿ ಬೆಸ್ಕಾಂ ಕಾರ್ಯ ಮತ್ತು ಪಾಲನೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶ್ರೀನಿವಾಸ ಬಿ.ಕೆ. ಅವರು ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸಬೇಕಾಗಿ ಕೋರಿದ್ದಾರೆ.

ವಿದ್ಯುತ್ ನಿಲುಗಡೆ ವಿವರಗಳು

  • ದಿನಾಂಕ: ಜೂನ್ 20, 2026 (ಶನಿವಾರ)

  • ಸಮಯ: ಬೆಳಗ್ಗೆ 10:30 ರಿಂದ ಸಂಜೆ 05:30 ರವರೆಗೆ

  • ಕಾರಣ: ಹೊನ್ನಾಳಿ 220 ಕೆವಿ ಸ್ವೀಕರಣಾ ಕೇಂದ್ರದಿಂದ ಹೊರಹೋಗುವ 66 ಕೆವಿ ಮತ್ತು 11 ಕೆವಿ ಮಾರ್ಗಗಳ ತ್ರೈಮಾಸಿಕ ನಿರ್ವಹಣೆ (Line Clearance) ಕೆಲಸ.

ಯಾವೆಲ್ಲಾ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ?

ಹೊನ್ನಾಳಿ ಕೇಂದ್ರದಿಂದ ಪ್ರಸರಣವಾಗುವ ಮಾರ್ಗಗಳಲ್ಲಿ ಕೆಲಸ ನಡೆಯುವುದರಿಂದ ಈ ಕೆಳಗಿನ ವಿದ್ಯುತ್ ವಿತರಣಾ ಕೇಂದ್ರಗಳು ಹಾಗೂ ಅವುಗಳ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ಪೂರೈಕೆ ಇರುವುದಿಲ್ಲ:

  • ನ್ಯಾಮತಿ ವಿದ್ಯುತ್ ವಿತರಣಾ ಕೇಂದ್ರ

  • ಸವಳಂಗ ವಿದ್ಯುತ್ ವಿತರಣಾ ಕೇಂದ್ರ

  • ಕತ್ತಿಗೆ ವಿದ್ಯುತ್ ವಿತರಣಾ ಕೇಂದ್ರ

  • ಚೀಲೂರು ವಿದ್ಯುತ್ ವಿತರಣಾ ಕೇಂದ್ರ (ಗಮನಿಸಿ: ಈ ಕೇಂದ್ರಗಳಿಂದ ಹೊರಡುವ ಎಲ್ಲಾ 11 ಕೆವಿ ಮಾರ್ಗಗಳು ಹಾಗೂ ಗ್ರಾಮೀಣ ಪ್ರದೇಶಗಳು).

ಮಧ್ಯಾಹ್ನ ಬೆಸ್ಕಾಂ ಕುಂದುಕೊರತೆ ಸಭೆ

ವಿದ್ಯುತ್ ನಿಲುಗಡೆಯಾಗುವ ದಿನವೇ ಗ್ರಾಹಕರ ಸಮಸ್ಯೆಗಳ ಆಲಿಕೆಗಾಗಿ ವಿಶೇಷ ಸಭೆಯನ್ನು ಕೂಡ ಹಮ್ಮಿಕೊಳ್ಳಲಾಗಿದೆ.

ಸಮಯ: ಜೂನ್ 20 (ಶನಿವಾರ) ಮಧ್ಯಾಹ್ನ 03:00 ರಿಂದ ಸಂಜೆ 05:30 ರವರೆಗೆ

ಸ್ಥಳ: ನ್ಯಾಮತಿ ಬೆಸ್ಕಾಂ ಉಪವಿಭಾಗ ಕಚೇರಿ

ಮನವಿ:

ಈ ಭಾಗದ ವಿದ್ಯುತ್ ಗ್ರಾಹಕರು ಸಭೆಯಲ್ಲಿ ಭಾಗವಹಿಸಿ, ತಮ್ಮ ವಿದ್ಯುತ್ ಬಿಲ್ ಸಮಸ್ಯೆ, ಟ್ರಾನ್ಸ್‌ಫಾರ್ಮರ್ ತೊಂದರೆ ಅಥವಾ ಇನ್ಯಾವುದೇ ಕುಂದುಕೊರತೆಗಳ ಬಗ್ಗೆ ಅಧಿಕಾರಿಗಳೊಂದಿಗೆ ನೇರವಾಗಿ ಚರ್ಚಿಸಿ ಪರಿಹಾರ ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.

Share

Leave a comment

Leave a Reply

Your email address will not be published. Required fields are marked *