Home ದಾವಣಗೆರೆ ಮುಂಗಾರು ಹಂಗಾಮು ಬೆಳೆ ವಿಮೆ: ದಾವಣಗೆರೆ ಜಿಲ್ಲೆಯ ರೈತರು ಜೂನ್ 30ರ ಒಳಗೆ ಅರ್ಜಿ ಸಲ್ಲಿಸಲು ತೋಟಗಾರಿಕೆ ಇಲಾಖೆ ಸೂಚನೆ.
ದಾವಣಗೆರೆಬೆಂಗಳೂರುವಾಣಿಜ್ಯ

ಮುಂಗಾರು ಹಂಗಾಮು ಬೆಳೆ ವಿಮೆ: ದಾವಣಗೆರೆ ಜಿಲ್ಲೆಯ ರೈತರು ಜೂನ್ 30ರ ಒಳಗೆ ಅರ್ಜಿ ಸಲ್ಲಿಸಲು ತೋಟಗಾರಿಕೆ ಇಲಾಖೆ ಸೂಚನೆ.

Share
ದಾವಣಗೆರೆ
Share

ಬೆಂಗಳೂರುದಾವಣಗೆರೆ ಜಿಲ್ಲೆಯ ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ (Restructured Weather based Crop Insurance Scheme) ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ವಿವಿಧ ಬೆಳೆಗಳಿಗೆ ನೋಂದಣಿ ಮಾಡಿಕೊಳ್ಳಲು ಜೂನ್ 30, 2026 ಕೊನೆಯ ದಿನಾಂಕವಾಗಿದೆ.  

ವಿವಿಧ ತೋಟಗಾರಿಕಾ ಬೆಳೆಗಳಿಗೆ ವಿಮೆ ಮಾಡಿಸಲು ಸರ್ಕಾರ ನಿಗದಿಪಡಿಸಿರುವ ಕೊನೆಯ ದಿನಾಂಕ ಮತ್ತು ಪ್ರೀಮಿಯಂ ಮೊತ್ತದ ವಿವರಗಳು ಹೀಗಿವೆ. ಅಡಿಕೆ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ರೂ.  ,28,000 ವಿಮಾ ಮೊತ್ತವಿದ್ದು, ರೈತರು ತಮ್ಮ ಪಾಲಿನ 5% ರಂತೆ ರೂ. 6,400 ಪಾವತಿಸಬೇಕಾಗುತ್ತದೆ. ವೀಳ್ಯದೆಲೆ ಬೆಳೆಗೆ ರೂ. 1,17,000 ವಿಮಾ ಮೊತ್ತಕ್ಕೆ ರೂ. 5,850 ಪ್ರೀಮಿಯಂ  ನಿಗದಿಯಾಗಿದೆ.

ಹಾಗೆಯೇ, ಮೆಣಸು ಬೆಳೆಗೆ ರೂ. 47,000 ವಿಮಾ ಮೊತ್ತವಿದ್ದು, ರೈತರ ಪಾಲು ರೂ.  ,350  ಆಗಿರುತ್ತದೆ. ದಾಳಿಂಬೆ ಬೆಳೆಗೆ  ಪ್ರತಿ ಹೆಕ್ಟೇರ್‌ಗೆ ರೂ. 1,27,000 ವಿಮಾ ಮೊತ್ತವಿದ್ದು, ಇದಕ್ಕೆ ರೈತರು ರೂ. 6,350 ಪಾವತಿಸಬೇಕು. ಈ ಮೇಲಿನ ನಾಲ್ಕೂ ಬೆಳೆಗಳ (ಅಡಿಕೆ, ವೀಳ್ಯದೆಲೆ, ಮೆಣಸು ಮತ್ತು ದಾಳಿಂಬೆ) ನೋಂದಣಿಗೆ 2026 ಜೂನ್ 30 ಕೊನೆಯ ದಿನಾಂಕವಾಗಿದೆ.

ಇದರೊಂದಿಗೆ, ಮಾವು ಬೆಳೆಗೆ ರೂ. 80,000 ವಿಮಾ ಮೊತ್ತವಿದ್ದು, ರೈತರ ಪಾಲಿನ ಮೊತ್ತ ರೂ. 4,000 ಆಗಿರುತ್ತದೆ. ಮಾವು ಬೆಳೆಯನ್ನು ನೋಂದಾಯಿಸಲು 2026 ಜುಲೈ 31 ಕಡೆಯ ದಿನವಾಗಿದೆ.

ಯೋಜನೆಯ ಲಾಭ ಪಡೆಯಲು ರೈತರು ಆಧಾರ್ ಕಾರ್ಡ್ ನಕಲು ಪ್ರ ಸರಿಯಾಗಿ ತುಂಬಿಸಲಾದ ಪ್ರಸ್ತಾಪ ಫಾರ್ಮ್ (Proposal Form)̧  ಇತ್ತೀಚಿನ ಜಮೀನಿನ ದಾಖಲೆ (RTC) / ಜಮೀನಿನ ಸ್ವಾಧೀನತೆಯ ದಾಖಲೆ ಮಾಣಪತ್ರ (LPC) / ಖಾತಾ ಇತ್ಯಾದಿಗಳ ಪ್ರತಿ  ಅನ್ವಯವಾಗುವ ಒಪ್ಪಂದ / ಟೆನೆಂಟ್ ಕೃಷಿಕರ ಒಪ್ಪಂದಕ್ಕಾಗಿ ಅಫಿಡವಿಟ್ ಐಎಫ್‌ಎಸ್‌ಸಿ (IFSC) ಕೋಡ್ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ಹೊಂದಿರುವ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಹಾಗೂ ಬಿತ್ತನೆಗಾಗಿ ಸ್ವಯಂ ಘೋಷಣೆ ಪತ್ರದ ದಾಖಲೆಗಳನ್ನು ಸಲ್ಲಿಸಬೇಕು.

ರೈತರು ತಮ್ಮ ಹತ್ತಿರದ ವಿಮಾ ಸಂಸ್ಥೆಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳು, ಪ್ರಾಥಮಿಕ ಕೃಷಿ ಸಹಕಾರ ಸಂಸ್ಥೆ (PACS), ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು, ವಿಮಾ ಮಧ್ಯವರ್ತಿಗಳು ಅಥವಾ ಸಾಮಾನ್ಯ ಸೇವಾ ಕೇಂದ್ರಗಳ (CSC / ಗ್ರಾಮ ಒನ್) ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿ ಅಥವಾ ನೆರವಿಗಾಗಿ ದಾವಣಗೆರೆ ಜಿಲ್ಲೆಯ ಮಹೇಶ್ ಕೆ. (ಜಿಲ್ಲಾ ನಿರ್ವಾಹಕರು): 9743855126 ಶಶಿಕಿರಣ್ ಎಸ್. (ಜಿಲ್ಲಾ ನಿರ್ವಾಹಕರು): 8431462824 ಅಧಿಕಾರಿಗಳನ್ನು ಸಂಪರ್ಕಿಸಬಹುದು ಇ-ಮೇಲ್:  pmfby.karnataka@hdfcergo.com ಉಚಿತ ಸಹಾಯವಾಣಿ ಸಂಖ್ಯೆ (Toll-Free): 14447 ಸಂಪರ್ಕಿಸುವಂತೆ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರಾಘವೇಂದ್ರ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *