Home ಶ್ರೀ ರಾಘವೇಂದ್ರ ಮಠದಲ್ಲಿ ಶಿರೂರು ಶ್ರೀಗಳ 8ನೇ ಆರಾಧನೆ: ಪವಮಾನ ಹೋಮ, ವಿರಜಾ ಹೋಮ ಹಾಗೂ ಅನ್ನಸಂತರ್ಪಣೆ
Home

ಶ್ರೀ ರಾಘವೇಂದ್ರ ಮಠದಲ್ಲಿ ಶಿರೂರು ಶ್ರೀಗಳ 8ನೇ ಆರಾಧನೆ: ಪವಮಾನ ಹೋಮ, ವಿರಜಾ ಹೋಮ ಹಾಗೂ ಅನ್ನಸಂತರ್ಪಣೆ

Share
ಶ್ರೀ ರಾಘವೇಂದ್ರ ಮಠ
Share

ಉಡುಪಿ: ಶ್ರೀಶಿರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ 8ನೇ ವರ್ಷದ ಆರಾಧನಾ ಮಹೋತ್ಸವವು ಉಡುಪಿಯ ಶ್ರೀ ರಾಘವೇಂದ್ರ ಮಠದ ಸನ್ನಿಧಾನದಲ್ಲಿ ಅತ್ಯಂತ ವೈಭವ ಹಾಗೂ ಧಾರ್ಮಿಕ ಚೌಕಟ್ಟಿನಲ್ಲಿ ನೆರವೇರಿತು. ಶ್ರೀಪಾದರ ಪೂರ್ವಾಶ್ರಮದ ಕುಟುಂಬಸ್ಥರ ಆಯೋಜನೆಯಲ್ಲಿ ಈ ಧಾರ್ಮಿಕ ಸಮಾರಂಭವು ಶಾಸ್ತ್ರೋಕ್ತವಾಗಿ ಜರಗಿತು.

ಧಾರ್ಮಿಕ ವಿಧಿವಿಧಾನ ಹಾಗೂ ವಿಶೇಷ ಪೂಜೆ:

ಪ್ರಾತಃಕಾಲದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಸಮ್ಮುಖದಲ್ಲಿ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ತದನಂತರ ವೇದಮೂರ್ತಿ ಶ್ರೀ ನಟರಾಜ ಉಪಾಧ್ಯಾಯ ಹಾಗೂ ವೇದಮೂರ್ತಿ ಶ್ರೀ ಅನಿಲ್ ಅವರ ಪೌರೋಹಿತ್ಯದಲ್ಲಿ ಪವಮಾನ ಕಲಶಾಭಿಷೇಕ ಹೋಮ ಮತ್ತು ವಿರಜಾ ಹೋಮಗಳು ನೆರವೇರಿದವು.

ನಂತರ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಮೃತ್ತಿಕಾ ವೃಂದಾವನಕ್ಕೆ ಅವರ ಪೂರ್ವಾಶ್ರಮದ ಸಹೋದರರಾದ ಶ್ರೀ ಪಿ. ಲಾತವ್ಯ ಆಚಾರ್ಯರು ಪಂಚಾಮೃತಾಭಿಷೇಕ ನೆರವೇರಿಸಿ, ವಿಶೇಷ ಪೂಜೆ ಸಲ್ಲಿಸಿದರು. ಅಪರಾಹ್ನ ಬಂದಂತಹ ಎಲ್ಲಾ ಭಕ್ತಾದಿಗಳಿಗೆ ಮಹಾ ಅನ್ನಸಂತರ್ಪಣೆ ಜರಗಿತು.

ಗಣ್ಯರ ಹಾಗೂ ಭಕ್ತಾದಿಗಳ ಉಪಸ್ಥಿತಿ:

ಈ ಶುಭ ಸಂದರ್ಭದಲ್ಲಿ ಶ್ರೀ ರಾಯರ ಮಠದ ಶ್ರೀ ಜಯತೀರ್ಥ ಆಚಾರ್ಯ, ಅಪ್ಪಣ್ಣ ಆಚಾರ್ಯ, ಶ್ರೀ ಹರಿಕೃಷ್ಣ ಪುನರೂರು, ಶ್ರೀ ಲಕ್ಷ್ಮೀನಾರಾಯಣ ತಂತ್ರಿ, ಸೊಂಡೂರು ಪ್ರಹ್ಲಾದ ಆಚಾರ್ಯ, ಶ್ರೀ ಪಿ. ವಾದಿರಾಜ ಆಚಾರ್ಯ, ಶ್ರೀ ಪಿ. ಶ್ರೀನಿವಾಸ ಆಚಾರ್ಯ, ಶ್ರೀ ಪಿ. ವೃಜನಾಥ ಆಚಾರ್ಯ, ಶ್ರೀ ಗೋಪಾಲಕೃಷ್ಣ ಭಟ್ ಒಳಕಾಡು, ಡಾ. ವ್ಯಾಸರಾಜ ತಂತ್ರಿ, ಚೆನ್ನೈನ ಶ್ರೀ ರಾಜಗೋಪಾಲ್, ಶ್ರೀ ರಾಜೇಂದ್ರ ಆಚಾರ್ಯ ಬಡಗುಬೆಟ್ಟು, ಶ್ರೀಪಾದರ ಪೂರ್ವಾಶ್ರಮದ ಸಹೋದರರಾದ ಶ್ರೀ ಅಕ್ಷೋಭ್ಯ ಆಚಾರ್ಯ, ಶ್ರೀ ಅರ್ಜುನ ಆಚಾರ್ಯ, ಶ್ರೀ ವಿಶಾಲ ಆಚಾರ್ಯ, ಶ್ರೀ ಶಂಕರನಾರಾಯಣ ಹೊಳ್ಳ ಕುಂದಾಪುರ, ಇಮೇಜ್ ಮೊಬೈಲ್ ಸಂಸ್ಥೆಯ ಶ್ರೀ ಯಾದವ, ಶ್ರೀ ರಾಕೇಶ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಕೇಮಾರು ಮಠದಲ್ಲಿ ವಿಶೇಷ ಪೂಜೆ:

ಕೇಮಾರು ಶ್ರೀ ಸಾಂದೀಪನಿ ಮಠದ ಆಶ್ರಮದಲ್ಲಿಯೂ ಸಹ ಶ್ರೀ ಈಶವಿಠಲದಾಸ ಸ್ವಾಮೀಜಿಯವರು ಶಿರೂರು ಶ್ರೀಪಾದರ ಆರಾಧನೆಯ ನಿಮಿತ್ತ ವಿಶೇಷ ಪೂಜೆ ಹಾಗೂ ಪುಷ್ಪಾರ್ಚನೆ ನೆರವೇರಿಸಿ ನಮನ ಸಲ್ಲಿಸಿದರು.

Share

Leave a comment

Leave a Reply

Your email address will not be published. Required fields are marked *