ಗುಹಾಟಿ: ಅಸ್ಸಾಂನ ಗುವಾಹಟಿಯಲ್ಲಿ ಅತ್ಯಂತ ದಾರುಣ ಹಾಗೂ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಮದುವೆಯಾಗಿ ಕೇವಲ ಆರು ತಿಂಗಳಷ್ಟೇ ಕಳೆದಿದ್ದ 25 ವರ್ಷದ ಯುವತಿಯೊಬ್ಬಳನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಲಾಗಿದ್ದು, ಆಕೆಯ ತಲೆಯನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿ ಬಚ್ಚಿಡಲಾಗಿದ್ದ ಕರಾಳ ಸತ್ಯ ಪೊಲೀಸರ ತನಿಖೆಯಿಂದ ಬಯಲಾಗಿದೆ.
ಮೃತರನ್ನು ರಿಯಾ ತಾಲೂಕುದಾರ್ ಗೋಸ್ವಾಮಿ ಎಂದು ಗುರುತಿಸಲಾಗಿದೆ. ಗುವಾಹಟಿಯ ಹತಿಗಾಂವ್ ಪ್ರದೇಶದ ಬಸಿತ್‌ಪುರ ಬೈಲೇನ್‌ನಲ್ಲಿರುವ ಅಪಾರ್ಟ್‌ಮೆಂಟ್ ಒಂದರಲ್ಲಿ ಈ ದಂಪತಿ ವಾಸವಾಗಿದ್ದರು.
ಘಟನೆಯ ವಿವರ:
ಕಳೆದ ಎರಡು ದಿನಗಳಿಂದ ಈ ಮನೆಯಿಂದ ವಿಪರೀತ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು, ದಂಪತಿಯ ಮೊಬೈಲ್ ಫೋನ್‌ಗಳು ಕೂಡ ಸ್ವಿಚ್ ಆಫ್ ಆಗಿರುವುದನ್ನು ಕಂಡು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಹತಿಗಾಂವ್ ಠಾಣೆ ಪೊಲೀಸರು ಬಾಗಿಲು ಒಡೆದು ಒಳಪ್ರವೇಶಿಸಿದಾಗ ಕೊಲೆ ರಹಸ್ಯ ಬಹಿರಂಗಗೊಂಡಿದೆ.
ಮನೆಯ ಒಳಗೆ ರಿಯಾ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದೇಹದಿಂದ ತಲೆಯನ್ನು ಪ್ರತ್ಯೇಕಿಸಲಾಗಿತ್ತು. ಅಷ್ಟೇ ಅಲ್ಲದೆ, ಆಕೆಯ ಬೆರಳುಗಳನ್ನು ಕೂಡ ಕತ್ತರಿಸಲಾಗಿತ್ತು. ಹತ್ಯೆಗೈದ ಬಳಿಕ ಯುವತಿಯ ಕತ್ತರಿಸಿದ ತಲೆಯನ್ನು ಪಾಲಿಥಿನ್ ಚೀಲದಲ್ಲಿ ಹಾಕಿ ರೆಫ್ರಿಜರೇಟರ್ (ಫ್ರಿಡ್ಜ್) ಒಳಗೆ ಬಚ್ಚಿಡಲಾಗಿತ್ತು ಎಂಬ ಆಘಾತಕಾರಿ ಅಂಶವನ್ನು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಪತಿ ಶರಣು:
ಈ ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದ ಮೃತೆ ರಿಯಾ ಅವರ ಪತಿ ರಾಮಾನುಜನ್ ಗೋಸ್ವಾಮಿ, ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ತಾನಾಗಿಯೇ ಬಸಿತ್‌ಪುರ ಪೊಲೀಸ್ ಠಾಣೆಗೆ ಆಗಮಿಸಿ ಶರಣಾಗಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಕೊಲೆ ನಡೆದು ಸುಮಾರು 24 ರಿಂದ 48 ಗಂಟೆಗಳಿಗೂ ಹೆಚ್ಚಿನ ಸಮಯ ಕಳೆದಿರಬಹುದು ಎಂದು ಶಂಕಿಸಲಾಗಿದೆ. ಸ್ಥಳದಲ್ಲಿ ರಕ್ತದ ಕಲೆಗಳು ಹಾಗೂ ಹರಿತವಾದ ಮಾರಕ ಆಯುಧವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಸಿಐಡಿ (CID) ಹಾಗೂ ವಿಧಿವಿಜ್ಞಾನ ತಜ್ಞರ ತಂಡವು ಸ್ಥಳದಲ್ಲಿ ತನಿಖೆ ತೀವ್ರಗೊಳಿಸಿದೆ. ದಂಪತಿ ನಡುವಿನ ವೈಯಕ್ತಿಕ ಕಲಹವೇ ಈ ಭೀಕರ ಹತ್ಯೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದ್ದು, ನಿಖರವಾದ ಕಾರಣ ತನಿಖೆಯ ಬಳಿಕವಷ್ಟೇ ತಿಳಿಯಬೇಕಿದೆ.
- 25 year old woman killed
- Assam crime news
- crime news in Kannada
- fridgerator murder mystery
- guwahati hatigaon flat murder
- guwahati murder case
- guwahati news kannada
- husband surrenders to police
- Kannada news updates
- ramanujan goswami arrest
- riya talukdar goswami
- ಅಸ್ಸಾಂ ಅಪರಾಧ ವಾರ್ತೆ
- ಗುಹಾಟಿ ಹತ್ಯೆ
- ಪತಿ ಶರಣು
- ಪತ್ನಿ ಭೀಕರ ಕೊಲೆ





Leave a comment