Home ಕ್ರೈಂ ನ್ಯೂಸ್ ‘ಹಿಂದುಳಿದವರ ಮಕ್ಕಳು ಕೋಮುವಾದದ ವಿಷವರ್ತುಲಕ್ಕೆ ಬಲಿ’: ಮಂಗಳೂರಿನಲ್ಲಿ ಚರ್ಚೆಗೆ ಕಾರಣವಾಯ್ತು ಬಿ. ಕೆ. ಹರಿಪ್ರಸಾದ್ ಹೇಳಿಕೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

‘ಹಿಂದುಳಿದವರ ಮಕ್ಕಳು ಕೋಮುವಾದದ ವಿಷವರ್ತುಲಕ್ಕೆ ಬಲಿ’: ಮಂಗಳೂರಿನಲ್ಲಿ ಚರ್ಚೆಗೆ ಕಾರಣವಾಯ್ತು ಬಿ. ಕೆ. ಹರಿಪ್ರಸಾದ್ ಹೇಳಿಕೆ!

Share
ಮಕ್ಕಳು
Share

ಮಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಕೊಂದಿದ್ದು ನಮ್ಮ ಬಿಲ್ಲವ ಸಮಾಜದವನು. ನಮಗೆ ಯಾಕೆ ಬೇಕಿತ್ತು ಆ ಹೆಣ್ಣು ಮಗಳನ್ನ ಕೊಲೆ ಮಾಡೋದು. ಹಿಂದುಳಿದವರ ಮಕ್ಕಳು ಧರ್ಮದ ವಿಷವರ್ತುಲದಲ್ಲಿ ಬಿದ್ದಿದ್ದಾರೆ. ಕೋಮುವಾದ ಅಮಲಿನಲ್ಲಿ, ಕೊಲೆ ಕೇಸುಗಳಲ್ಲಿ ಜೈಲು ಸೇರುತ್ತಿದ್ದಾರೆ. ಇದರಿಂದ ನಮ್ಮ ಹಿಂದುಳಿದವರ ಮಕ್ಕಳನ್ನು ರಕ್ಷಿಸಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಹೇಳಿದ್ದಾರೆ.

ಮಂಗಳೂರಿನ ಪುರಭವನದಲ್ಲಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಶ್ರೀ ನಾರಾಯಣಗುರು 172ನೇ ಜನ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ಮುಂದಿನ ಪೀಳಿಗೆಗೆ ಗುರುಗಳ ಬದುಕು, ಚಿಂತನೆ ಹಾಗೂ ಮಾರ್ಗದರ್ಶನಗಳನ್ನು ಮಕ್ಳಳಲ್ಲಿ ಬೆಳಿಸಬೇಕಿದೆ. ಶಿಕ್ಷಣ, ಉದ್ಯಮದಲ್ಲಿ ನಮ್ಮ ಮಕ್ಕಳು ತೊಡಗಿಸಿಕೊಳ್ಳುವಂತೆ ಜಾಗೃತಿಗೊಳಿಸಬೇಕಿದೆ ಎಂದರು.

ವೇದಿಕೆಯಲ್ಲಿ ಅತ್ಯಂತ ಪ್ರೀತಿಯಿಂದ ನನ್ನ ಸನ್ಮಾನಿಸಿದ ಆಯೋಜಕರಿಗೂ ಹಾಗೂ ಸಾರ್ವಜನಿಕರಿಗೆ ವಿಶೇಷವಾಗಿ ನನ್ನ ಕೃತಜ್ಣತೆಗಳನ್ನು ಸಲ್ಲಿಸಿದೆ ಎಂದು ತಿಳಿಸಿದರು.

ನಾನು 25 ವರ್ಷಗಳ ರಾಜಕೀಯವನ್ನ ನಾರಾಯಣ ಗುರುಗಳ ಆದರ್ಶವನ್ನು ಪಾಲಿಸುತ್ತಾ ನಡೆಸಿದ್ದೇನೆ. ಜಾತಿ ಬಂಡವಾಳ ಶಾಹಿ ವ್ಯವಸ್ಥೆಯಲ್ಲಿ ರಾಜಕಾರಣ ಮಾಡಿದವನಲ್ಲ. ಗುರುಗಳ ಚಿಂತನೆ, ಮಾರ್ಗದರ್ಶನದಲ್ಲಿ ಸಾರ್ವಜನಿಕ ಜೀವನದಲ್ಲಿ ಬದುಕಲು ನಾವೆಲ್ಲ ಪ್ರಯತ್ನಿಸಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಶ್ರೀ ವಿಖ್ಯಾತನಂದ ಸ್ವಾಮೀಜಿಗಳು, ಸಮುದಾಯದ ಮುಖಂಡರುಗಳಾದ ನವೀನ್ ಚಂದ್ರ ಸುವರ್ಣ, ಶಾಸಕರಾದ ಸುನೀಲ್ ಕುಮಾರ್ ಸೇರಿದಂತೆ ಆಯೋಜಕರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles