Home ಕ್ರೈಂ ನ್ಯೂಸ್ ಜಗಜ್ಯೋತಿ ಬಸವಣ್ಣನವರು ಹಿಂದೂ ಧರ್ಮದ ವಿರುದ್ಧ ಬಂಡಾಯ ಎದ್ದಿದ್ರು, ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ್ರು: ಬಿ. ಕೆ. ಹರಿಪ್ರಸಾದ್ ವಿವಾದಾತ್ಮಕ ಮಾತು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಜಗಜ್ಯೋತಿ ಬಸವಣ್ಣನವರು ಹಿಂದೂ ಧರ್ಮದ ವಿರುದ್ಧ ಬಂಡಾಯ ಎದ್ದಿದ್ರು, ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ್ರು: ಬಿ. ಕೆ. ಹರಿಪ್ರಸಾದ್ ವಿವಾದಾತ್ಮಕ ಮಾತು!

Share
ಜಗಜ್ಯೋತಿ ಬಸವಣ್ಣ
Share

ಮಂಗಳೂರು: ಜಗಜ್ಯೋತಿ ಬಸವಣ್ಣನವರು ಹಿಂದೂ ಧರ್ಮದ ವಿರುದ್ಧ ಬಂಡಾಯ ಎದ್ದಿದ್ರು. ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ್ರು ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಂಗಳೂರಿನ ಪುರಭವನದಲ್ಲಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಶ್ರೀ ನಾರಾಯಣಗುರು 172ನೇ ಜನ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಗೌತಮ ಬುದ್ಧರು ಹಿಂದೂ ಧರ್ಮದ ನ್ಯೂನತೆ ಸರಿ ಮಾಡಲು ಬೌದ್ಧ ಧರ್ಮ ಸ್ಥಾಪನೆ ಮಾಡಿದ್ರು ಆದರೆ ಬ್ರಹ್ಮಶ್ರೀ ನಾರಾಯಣ ಗುರು ಹಾಗೇ ಮಾಡಲಿಲ್ಲ, ಹಿಂದೂ ಧರ್ಮದಲ್ಲಿದ್ದುಕೊಂಡೆ ಸುಧಾರಣೆ ಮಾಡಿದರು. ಶತಮಾನಗಳ ಕಾಲ ದೇವಸ್ಥಾನದ
ಪ್ರವೇಶ ಮಾತ್ರವಲ್ಲ, ದೇವಸ್ಥಾನದ ಸುತ್ತಮುತ್ತಲೂ ಓಡಾಡಲು ಶೂದ್ರರಿಗೆ ಅವಕಾಶವೇ ಇರಲಿಲ್ಲ. ಅದಕ್ಕಾಗಿ ನಾರಾಯಣಗುರುಗಳು ಶೂದ್ರ ಶಿವನ ದೇವಸ್ಥಾನವನ್ನೇ ಸ್ಥಾಪನೆ ಮಾಡಿದ್ರು. ಈ ಹಿಂದೆ ನಮಗೆ ದೇವಸ್ಥಾನಕ್ಕೆ ಅನುಮತಿ ಕೊಡದವರನ್ನ ಕಾಪಾಡಲು ನಮ್ಮ ಶೂದ್ರರೇ ಹೋಗುತ್ತಿದ್ದಾರೆ.‌ ಅತೀ ಹೆಚ್ಚು ಧರ್ಮ ದ್ವೇಷಕ್ಕೆ ಬಲಿಯಾಗುತ್ತಿರುವವರು ನಾರಾಯಣ ಗುರುಗಳ ಅನುಯಾಯಿಗಳೇ ಎಂಬುದು ವಿಶಾದನೀಯ ಎಂದು ಹೇಳಿದರು.

ವೇದಿಕೆಯಲ್ಲಿ ಶ್ರೀ ವಿಖ್ಯಾತನಂದ ಸ್ವಾಮೀಜಿಗಳು, ಸಮುದಾಯದ ಮುಖಂಡರುಗಳಾದ ನವೀನ್ ಚಂದ್ರ ಸುವರ್ಣ, ಶಾಸಕರಾದ ಸುನೀಲ್ ಕುಮಾರ್ ಸೇರಿದಂತೆ ಆಯೋಜಕರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles