SUDDIKSHANA KANNADA NEWS/ DAVANAGERE/ DATE:13-01-2025
ಬೆಂಗಳೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ನೊಣವಿನಕೆರೆಯ ಸೋಮೇಕಟ್ಟೆ ಶ್ರೀ ಕಾಡಸಿದ್ದೇಶ್ವರ ಸಂಸ್ಥಾನಮಠದ ಶ್ರೀ ಡಾ.ಕರಿ ವೃಷಭ ದೇಶಿಕೇಂದ್ರ ಶಿವ ಯೋಗೇಶ್ವರ ಸ್ವಾಮೀಜಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಬೆಂಗಳೂರಿನ ನಿವಾಸದಲ್ಲಿ ಶಾಮನೂರು ಶಿವಶಂಕರಪ್ಪ ಅವರನ್ನು ಭೇಟಿ ಮಾಡಿ, ಅಜ್ಜಯ್ಯನ ಜಾತ್ರಾ ಮಹೋತ್ಸವ -2025 ಕಾರ್ಯಕ್ರಮಕ್ಕೆ ಆಹ್ವಾನಿಸಿದರು, ಯೋಗಕ್ಷೇಮ ವಿಚಾರಿಸಿ ಶ್ರೀಗಳು ಆಶೀರ್ವದಿಸಿದರು. ಈ ವೇಳೆ ಮಾತನಾಡಿದ ನೊಣವಿನಕೆರೆಯ ಶ್ರೀ ಕಾಡಸಿದ್ದೇಶ್ವರ ಸಂಸ್ಥಾನಮಠದ ಶ್ರೀ ಡಾ.ಕರಿ ವೃಷಭ ದೇಶಿಕೇಂದ್ರ ಶಿವ ಯೋಗೇಶ್ವರ ಸ್ವಾಮೀಜಿ ಅವರು ಆದಷ್ಟು ಬೇಗ ಸಂಪೂರ್ಣ ಗುಣಮುಖರಾಗಿ, ಶತಾಯುಷಿಗಳಾಗಿ ಎಂದು ಆಶೀರ್ವದಿಸಿದರು.
ಶಾಮನೂರು ಶಿವಶಂಕರಪ್ಪರು ಮಾತನಾಡಿ ಈಗ ಆರಾಮಾಗಿದ್ದೇನೆ. ಚಿಕಿತ್ಸೆ ನೀಡಲಾಗಿದೆ. ಸ್ವಲ್ಪ ಮಟ್ಟಿಗೆ ಸುಸ್ತು ಇದೆ. ಈಗ ಏನೂ ತೊಂದರೆ ಇಲ್ಲ. ಆರೋಗ್ಯವಾಗಿದ್ದೇನೆ. ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲಾಯಿತು. ಶ್ರೀಗಳ ಆಶೀರ್ವದಿಸಿದ್ದು
ಖುಷಿ ನೀಡಿದೆ ಎಂದು ಹೇಳಿದರು.