Home ದಾವಣಗೆರೆ ಲೋಕಸಭೆ, ವಿಧಾನಸಭೆಯಲ್ಲಿ ಒಬಿಸಿ ಮಹಿಳೆಯರಿಗೂ ಮೀಸಲಾತಿ ನೀಡಲಿ: ಜಿ. ಬಿ. ವಿನಯ್ ಕುಮಾರ್ ಆಗ್ರಹ
ದಾವಣಗೆರೆಬೆಂಗಳೂರು

ಲೋಕಸಭೆ, ವಿಧಾನಸಭೆಯಲ್ಲಿ ಒಬಿಸಿ ಮಹಿಳೆಯರಿಗೂ ಮೀಸಲಾತಿ ನೀಡಲಿ: ಜಿ. ಬಿ. ವಿನಯ್ ಕುಮಾರ್ ಆಗ್ರಹ

Share
ಮಹಿಳೆ
Share

ದಾವಣಗೆರೆ: ಮಹಿಳೆಯರಿಗೆ ಮೂರನೇ ಒಂದಂಶದಷ್ಟು ಮೀಸಲಾತಿ ಕಲ್ಪಿಸುವ ಸಲುವಾಗಿ ಕೇಂದ್ರ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಮಸೂದೆಯಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಮಹಿಳಾ ಮೀಸಲಾತಿಯ ಮಾದರಿಯಲ್ಲಿ “ಹಿಂದುಳಿದ ವರ್ಗ’ಗಳಿಗೂ ಮೀಸಲಾತಿಯನ್ನು ಕಲ್ಪಿಸಬೇಕೆಂದು ಸ್ವಾಭಿಮಾನಿ ಬಳಗವು ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕರೂ ಆದ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು, ಒಬಿಸಿ ವರ್ಗದವರು ಅಧಿಕಾರದಿಂದ ವಂಚಿತರಾಗಿದ್ದಾರೆ. ಹಾಗಾಗಿ, ಮಹಿಳಾ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಒಬಿಸಿ ಸಮುದಾಯದ ಮಹಿಳೆಯರು ಸ್ಪರ್ಧಿಸಲು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

ಹಿಂದುಳಿದ ವರ್ಗಗಳ ಮಹಿಳೆಯರಿಗೆ ಮೀಸಲಾತಿ ನೀಡುವ ವಿಚಾರ ಸಂಬಂಧ ರಾಜ್ಯಾದ್ಯಂತ ಸಂವಾದ ನಡೆಸಲಾಗುವುದು. ವಿದ್ಯಾರ್ಥಿಗಳು, ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಚರ್ಚೆ ನಡೆಸುವಂಥ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಸ್ವಾಭಿಮಾನಿ ಬಳಗವು ಮಾಡಲಿದೆ ಎಂದು ತಿಳಿಸಿದರು.

ನಾರಿಶಕ್ತಿ ವಂದನಾ 106ನೇ ತಿದ್ದುಪಡಿ ಅಧಿನಿಯಮ 330A, 332A, 334Aರ ಮೂಲ ಉದ್ದೇಶ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ಕಲ್ಪಿಸುವುದು. ಈ ಮೀಸಲಾತಿಯು ನೇರ ಚುನಾವಣೆಯ ಮೂಲಕ ಭರ್ತಿಯಾಗುವ ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ದೆಹಲಿ ವಿಧಾನಸಭೆ ಸ್ಥಾನಗಳಿಗೆ ಅನ್ವಯಿಸುತ್ತದೆ. ಈ ಕಾಯ್ದೆಯಡಿ ಮೀಸಲಾತಿಯು 15 ವರ್ಷಗಳವರೆಗೆ ಜಾರಿಯಲ್ಲಿರುತ್ತದೆ. ಮೀಸಲು ಸ್ಥಾನಗಳಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಮಹಿಳೆಯರಿಗೆ ಉಪ-ಮೀಸಲಾತಿಯನ್ನು ಸಹ ಇದು ಒದಗಿಸುತ್ತದೆ. ಇದು 2026ರ ಸುಮಾರಿಗೆ ಜಾರಿಯ ಅಂತಿಮ ಹಂತದಲ್ಲಿದ್ದು, ಮುಂದಿನ ಸಾಮಾನ್ಯ ಚುನಾವಣೆಗಳ ಹೊತ್ತಿಗೆ ಪರಿಣಾಮಕಾರಿಯಾಗಲಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿ ಕಾನೂನನ್ನು ತಿದ್ದುಪಡಿ ಮಾಡಲು ಮತ್ತು 1971ರ ಜನಗಣತಿ ಆಧಾರದ ಪ್ರಕ್ರಿಯೆ ಕೈ ಬಿಟ್ಟು 2011 ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯನ್ನು ಕೈಗೊಳ್ಳಲು ಕರೆಯಲಾಗಿರುವ ಸಂಸತ್ತಿನ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ಪಕ್ಷಬೇಧ ಮರೆತು ಎಲ್ಲರೂ ಒಪ್ಪಿಗೆ ಸೂಚಿಸಬೇಕು. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಬಲವನ್ನು 50% ಹೆಚ್ಚಿಸಲು ಸರ್ಕಾರ ಪ್ರಸ್ತಾಪಿಸಿದೆ. ಲೋಕಸಭೆಯಲ್ಲಿ, ಅದು 543 ರಿಂದ 816 ಸದಸ್ಯರ
ಬಲವನ್ನು ಹೆಚ್ಚಿಸಲು ಮತ್ತು ನಂತರ ಮಹಿಳಾ ಶಾಸಕರಿಗೆ 272 ಸ್ಥಾನಗಳನ್ನು ಮೀಸಲಿಡಲು ಯೋಜಿಸಲಾಗಿದೆ. ಇದೊಂದು ಕ್ರಾಂತಿಕಾರಿ ಹೆಜ್ಜೆ ಎಂದು ಹೇಳಿದರು.

ಕಾಂಗ್ರೆಸ್ ವಕ್ತಾರೆ ಸೋನಿಯಾ ಗಾಂಧಿಯವರು ಇದಕ್ಕೆ ಸಹಮತ ಸೂಚಿಸದೇ 543ರ ಸಂಖ್ಯಾ ಬಲದಲ್ಲಿ ಮೀಸಲಾತಿ ನೀಡಿ ಎಂದು ವಾದಿಸಿದ್ದು ಮಹಿಳಾ ಮೀಸಲಾತಿ ಜಾರಿಯ ವಿಷಯದಲ್ಲಿ ಕ್ಷೇತ್ರ ಮರುವಿಂಗಡಣೆಯು ತಮಗೆ ಪೂರಕವಾದ ರೀತಿಯಲ್ಲಿ
ಮಾಡಲು ಹೊರಟಿದ್ದರೆ ಎಂದು ಆಪಾದಿಸಿದ್ದಾರೆ. ಆದರೆ ದಕ್ಷಿಣ ರಾಜ್ಯಗಳ ವಾದವೆಂದರೆ ಜನಸಂಖ್ಯಾ ಆಧಾರದಲ್ಲಿ ಕ್ಷೇತ್ರಗಳ ವಿಂಗಡಣೆ ಮತ್ತು ಸಂಖ್ಯೆ ಹೆಚ್ಚಿಸಿದರೆ ಉತ್ತರ ಭಾರತದ ರಾಜ್ಯಗಳ ಸ್ಥಾನಗಳು ಹೆಚ್ಚಾಗಿ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂಬ ವಾದವನ್ನು ಮನಗೊಂಡ ಕೇಂದ್ರ ಸರ್ಕಾರವು ಪ್ರಸ್ತುತ ಸಂಸತ್ತು ಹಾಗೂ ವಿಧಾನಸಭೆಯಲ್ಲಿ ಇರುವ ಸಂಖೆಗಳನ್ನು ಹೆಚ್ಚಿಸಲು ಹೊರಟಿರುವ ಎನ್ ಡಿಎ ನೇತೃತ್ವದ ಕೇಂದ್ರ ಸರ್ಕಾರದ ನಿಲುವು ಸಮಂಜಸವಾಗಿದೆ. ಇದನ್ನು ಸೋನಿಯಾ ಗಾಂಧಿಯಾಗಲಿ, ರಾಜ್ಯದ ಮುಖ್ಯಮಂತ್ರಿಯಾಗಲಿ ಬೆಂಬಲಿಸುವುದನ್ನು ಬಿಟ್ಟು ಮಹಿಳಾ ಮೀಸಲಾತಿ ವಿರೋಧಿ ಧೋರಣೆ ತೋರಿಸುತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಸ್ವಾಭಿಮಾನಿ ಬಳಗದ ಪ್ರಮುಖರಾದ ವಿರೂಪಾಕ್ಷಪ್ಪ ಪಂಡಿತ್, ಶಿವಕುಮಾರ್, ರಂಗಸ್ವಾಮಿ, ರೇವಂತ್ ಮತ್ತಿತರರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *