ದಾವಣಗೆರೆ: ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ನೀಡುವ ಸಂಬಂಧ ಲೋಕಸಭೆ ಮತ್ತು ವಿಧಾನಸಭೆಾ ಕ್ಷೇತ್ರಗಳ ಮರುವಿಂಗಡಣೆಗೆ ಸಂವಿಧಾನ (131ನೇ ತಿದ್ದುಪಡಿ) ಮಸೂದೆ 2026 ಅನ್ನು ಕೇಂದ್ರ ಸರ್ಕಾರ ಮಂಡನೆ ಮಾಡಲು ಮುಂದಾಗಿದ್ದು, ಇದು ಕುಟುಂಬ ರಾಜಕಾರಣಕ್ಕೆ ಅನುಕೂಲ ಮಾಡಿಕೊಡುವಂತಾಗಬಾರದು ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಮಸೂದೆಯನ್ನು ಜನಪ್ರತಿನಿಧಿಗಳು ತಮ್ಮ ಕುಟುಂಬದ ಸದಸ್ಯರುಗಳಿಗೆ ಅನುಕೂಲವಾಗುವಂತೆ ಬಳಸಿಕೊಳ್ಳುವುದರ ಕಡೆಗೆ ಗಮನಹರಿಸಬೇಕು. ಮಹಿಳಾ ಮೀಸಲಾತಿ ತಿದ್ದುಪಡಿ ಅಧಿನಿಯಮದಲ್ಲಿ ಪ್ರಸ್ತುತ ರಾಜಕೀಯದಲ್ಲಿ ಹಾಲಿ ಪುರುಷ ಸಂಸದರು, ಶಾಸಕರ ಕುಟುಂಬದ ಸದಸ್ಯರಾದ ಹೆಂಡತಿ, ಸೊಸೆ, ಅಕ್ಕ ತಂಗಿ, ಮಕ್ಕಳಿಗಾಗಲೀ, ರಕ್ತ ಸಂಬಂಧಿಗಳಿಗಾಗಲಿ ಚುನಾವಣೆಯಲ್ಲಿ ಮತ್ತೆ ಅವಕಾಶ ನೀಡಬಾರದು. ನೀಡಿದರೆ ಕುಟುಂಬ ರಾಜಕಾರಣವು ಹೆಚ್ಚಾಗಿ ರಾಜಕೀಯ ಹಿನ್ನೆಲೆ ಇಲ್ಲದ ಹೊಸ ಪ್ರತಿಭೆ, ಸಾಮರ್ಥ ಇರುವ ಮಹಿಳೆಯರು ಈ ಪ್ರಮುಖ ಮಹಿಳಾ ಮೀಸಲಾತಿ ಅವಕಾಶದಿಂದ ವಂಚಿತರಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜಕೀಯ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣದ ಹಿನ್ನೆಲೆಯಿಲ್ಲದ ಮಹಿಳೆಯರಿಗೂ ಅವಕಾಶ ಸಿಗುವಂತಾಗಬೇಕು. ಆಗ ಮಾತ್ರ ಕ್ಷೇತ್ರ ಪುನರ್ವವಿಂಗಡಣೆಯಿಂದ ಕ್ಷೇತ್ರಗಳು ಹೆಚ್ಚಾದಾಗ ಅವಕಾಶಗಳು ಸಿಗುತ್ತವೆ. ಅಧಿಕಾರ ಸಿಗದ, ವಂಚಿತ ಸಮುದಾಯದವರಿಗೂ ಅವಕಾಶ ಸಿಗುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಮಹಿಳಾ ಮೀಸಲಾತಿ ನಾರಿಶಕ್ತಿ ವಂದನಾ ಅಧಿನಿಯಮದ ಕುರಿತಾಗಿ ದೇಶದಲ್ಲಿ ಚರ್ಚೆಗಳು ನಡೆಯುತ್ತಿರುವ ಸಮಯದಲ್ಲಿ ವಿರೋಧ ವ್ಯಕ್ತವಾಗುತ್ತಿರುವುದು ಬೇಸರದ ಸಂಗತಿ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ರಾಜಕೀಯ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ತರವಾಗಿ ನಿಲುವನ್ನು ತೆಗೆದುಕೊಂಡಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.
“ನಾರಿಶಕ್ತಿ ಮಹಿಳಾ ಮೀಸಲಾತಿ” ಬಗ್ಗೆ ಕಾಂಗ್ರೆಸ್ ಪಕ್ಷದ ಸರ್ವೋಚ್ಚ ನಾಯಕಿ ಸೋನಿಯಾಗಾಂಧಿಯವರು ಅಪಸ್ವರ ಎತ್ತಿರುವುದು ದುರಾದೃಷ್ಟಕರ. ದಾವಣಗೆರೆ ಲೋಕಸಭಾ ಕ್ಷೇತ್ರದ ಸದಸ್ಯೆ ಪ್ರಭಾ ಮಲ್ಲಿಕಾರ್ಜುನ್‌ರವರ ನಿಲುವು
ಏನಾಗಿರುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಹೇಳಿದ್ದಾರೆ.
ಗೋಷ್ಠಿಯಲ್ಲಿ ಸ್ವಾಭಿಮಾನಿ ಬಳಗದ ಪ್ರಮುಖರಾದ ವಿರೂಪಾಕ್ಷಪ್ಪ ಪಂಡಿತ್, ಶಿವಕುಮಾರ್, ರಂಗಸ್ವಾಮಿ, ರೇವಂತ್ ಮತ್ತಿತರರು ಹಾಜರಿದ್ದರು.
- Dynastic Politics
- Karnataka Politics
- Lok Sabha
- Nari Shakti Vandana Adhiniyam
- OBC Reservation
- Political Empowerment
- Prabha Mallikarjun
- Swabhimani Balaga
- Vidhana Sabha
- Women Reservation Bill
- ಕರ್ನಾಟಕ ರಾಜಕಾರಣ
- ಕುಟುಂಬ ರಾಜಕಾರಣ
- ನಾರಿಶಕ್ತಿ ವಂದನಾ ಅಧಿನಿಯಮ
- ಪ್ರಭಾ ಮಲ್ಲಿಕಾರ್ಜುನ್
- ಮಹಿಳಾ ಮೀಸಲಾತಿ
- ರಾಜಕೀಯ ಸಬಲೀಕರಣ
- ಲೋಕಸಭೆ
- ವಿಧಾನಸಭೆ
- ಸ್ವಾಭಿಮಾನಿ ಬಳಗ
- ಹಿಂದುಳಿದ ವರ್ಗಗಳ ಮೀಸಲಾತಿ





Leave a comment