Home ದಾವಣಗೆರೆ ಹೊನ್ನಾಳಿ ಇಲ್ಲವೇ ದಾವಣಗೆರೆ ಉತ್ತರ ಸ್ಪರ್ಧೆ ಬಗ್ಗೆ ಕಾಲವೇ ನಿರ್ಧರಿಸುತ್ತೆ, ಎಲ್ಲವೂ ರಾಷ್ಟ್ರ ಬಿಜೆಪಿ ನಾಯಕರ ಕೈಯಲ್ಲಿದೆ: ಜಿ. ಬಿ. ವಿನಯ್ ಕುಮಾರ್
ದಾವಣಗೆರೆಬೆಂಗಳೂರು

ಹೊನ್ನಾಳಿ ಇಲ್ಲವೇ ದಾವಣಗೆರೆ ಉತ್ತರ ಸ್ಪರ್ಧೆ ಬಗ್ಗೆ ಕಾಲವೇ ನಿರ್ಧರಿಸುತ್ತೆ, ಎಲ್ಲವೂ ರಾಷ್ಟ್ರ ಬಿಜೆಪಿ ನಾಯಕರ ಕೈಯಲ್ಲಿದೆ: ಜಿ. ಬಿ. ವಿನಯ್ ಕುಮಾರ್

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಹಾಗೂ ಹೊನ್ನಾಳಿಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡುವ ಇರಾದೆ ಇದೆ. ಆದರೆ, ಟಿಕೆಟ್ ನೀಡುವ ವಿಚಾರವು ರಾಷ್ಟ್ರ ಬಿಜೆಪಿ ನಾಯಕರ ಕೈಯಲ್ಲಿದೆ. ಎಲ್ಲದಕ್ಕೂ ಕಾಲವೇ ಉತ್ತರ ನೀಡುತ್ತದೆ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಮಾರ್ಮಿಕವಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊನ್ನಾಳಿಯಿಂದ ಎಂ. ಪಿ. ರೇಣುಕಾಚಾರ್ಯ, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಲೋಕಿಕೆರೆ ನಾಗರಾಜ್ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದರೆ ಗೆಲುವಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ, ಓಡಾಡುತ್ತೇನೆ. ನನ್ನ ಅಭಿಪ್ರಾಯದ ಹಿಂದೆ ಚಿತ್ರದುರ್ಗ ಮೂಲದ ಬಿಜೆಪಿ ನಾಯಕರ ಆಶೀರ್ವಾದ ಇದೆ ಎಂಬ ಮಾತಿಗೆ ಸಂಬಂಧಿಸಿದಂತೆ ಹೆಚ್ಚು ಪ್ರತಿಕ್ರಿಯೆ ನೀಡಲ್ಲ. ನಾನು ಬಿಜೆಪಿ ಸೇರುವ ಬಗ್ಗೆಯಾಗಲೀ, ಸ್ಪರ್ಧೆಯಾಗಲೀ ಎಲ್ಲದಕ್ಕೂ ಕಾಲವೇ ಉತ್ತರ ನೀಡುತ್ತದೆ ಎಂದು ತಿಳಿಸಿದರು.

ಎಂ. ಪಿ. ರೇಣುಕಾಚಾರ್ಯರು ಹಿರಿಯರು. ಅಭಿವೃದ್ಧಿ, ದೂರದೃಷ್ಟಿ ವಿಚಾರದಲ್ಲಿ ಅನುಭವ ಹೊಂದಿದವರು. ಮೂರು ಬಾರಿ ಶಾಸಕರಾಗಿದ್ದಾರೆ. ನನ್ನ ಅಭಿಪ್ರಾಯ ಹೇಳಿದ್ದೇನೆ ಅಷ್ಟೇ. ಈ ಹಿಂದೆ ನಾಲ್ಕು ಕ್ಷೇತ್ರಗಳ ಪೈಕಿ ಒಂದರಲ್ಲಿ ಸ್ಪರ್ಧೆ ಮಾಡುವ ಅಭಿಲಾಷೆ ಹೊಂದಿದ್ದೆ. ಆದರೆ, ಹರಿಹರ, ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಹೊನ್ನಾಳಿಯಲ್ಲಿ ಸ್ಪರ್ಧೆ ಮಾಡುವಂತೆ ಬೆಂಬಲಿಗರ ಒತ್ತಾಯ ಇತ್ತು. ಆದರೆ ಈಗ ಎರಡೂ ಕ್ಷೇತ್ರಗಳ ಪೈಕಿ ಒಂದರಲ್ಲಿ ಸ್ಪರ್ಧೆ ಮಾಡಬೇಕೆಂಬ ಇರಾದೆ ಹೊಂದಿದ್ದು, ಮುಂದಿನ ದಿನಗಳಲ್ಲಿ ಏನಾಗುತ್ತದೆಂದು ಈಗಲೇ ಹೇಳಲು ಆಗದು ಎಂದು ಹೇಳಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಗೆದ್ದೇ ಗೆಲ್ಲುತ್ತಾರೆ. ನಾವೆಲ್ಲರೂ ಓಡಾಡಿದ್ದೇವೆ. ನಾನು ಬಿಜೆಪಿಯಿಂದ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಗೊಂದಲ
ಬೇಡ. ಬಿಜೆಪಿ ಕೋರ್ ಕಮಿಟಿಯಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಲು ನನ್ನ ಹೆಸರು ಶಿಫಾರಸು ಮಾಡಲಾಗಿತ್ತು. ಹಾಗಾಗಿ, ಯಾವ ವಿಚಾರದಲ್ಲಿಯೂ ಗೊಂದಲ ಇಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷವು ಕುಟುಂಬಗಳ ಹಿಡಿತದಲ್ಲಿದೆ. ಶಾಮನೂರು ಶಿವಶಂಕರಪ್ಪರ ಮೊಮ್ಮಗ ಸಮರ್ಥ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತು. ಸಚಿವರು, ಸಂಸದರು ಇದ್ದರೂ ಕುಟುಂಬದವರಿಗೆ ಮಣೆ ಹಾಕಿತು. ಹಾಗಾಗಿ, ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿ ಕುಟುಂಬಗಳು ಇಲ್ಲ. ಕುಟುಂಬಗಳ ಕಪಿಮುಷ್ಟಿಯಲ್ಲಿ ಕಾಂಗ್ರೆಸ್ ಸಿಲುಕಿದೆ. ಶಾಮನೂರು ಕುಟುಂಬ ಟಿಕೆಟ್ ತಂದಿದ್ದರೂ ಗೆಲುವು ತಾತ್ಕಾಲಿಕ. ಕಾಂಗ್ರೆಸ್ ಪಕ್ಷದಲ್ಲಿ ಏನಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ನಸೀರ್‌ ಅಹ್ಮದ್ ಅವರಿಂದ ಒತ್ತಾಯಪೂರ್ವಕವಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ತೆಗೆದು ಹಾಕಲಾಗಿದೆ. ಮುಸ್ಲಿಂರು ಮತ್ತು ಅಹಿಂದ ಮುಖಂಡರು ಕಾಂಗ್ರೆಸ್ ನಿಂದ ವಿಮುಖರಾಗುತ್ತಿದ್ದಾರೆ ಎಂದು ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.

Share

Leave a comment

Leave a Reply

Your email address will not be published. Required fields are marked *