ಶಿವಮೊಗ್ಗ/ ದಾವಣಗೆರೆ: ಭದ್ರಾ ಜಲಾಶಯದ ಜಲಾನಯನ ಪ್ರದೇಶಗಳಲ್ಲಿ ಮಳೆ ಮುಂದುವರಿದಿದ್ದು, ಜಲಾಶಯಕ್ಕೆ ಒಳಹರಿವು ಸ್ಥಿರವಾಗಿ ಹರಿದುಬರುತ್ತಿದೆ. ಜುಲೈ 22, 2026 ರಂದಿನ ವರದಿಯಂತೆ ಜಲಾಶಯದ ಇಂದಿನ ನೀರಿನ ಮಟ್ಟ ಹಾಗೂ ನೀರಿನ ಹರಿವಿನ ಸಂಪೂರ್ಣ ವಿವರ ಇಲ್ಲಿದೆ.
ಇಂದಿನ ಜಲಾಶಯದ WATER LEVEL (22-07-2026):
ಗರಿಷ್ಠ ಮಟ್ಟ: 186 ಅಡಿಗಳು
ಇಂದಿನ ನೀರಿನ ಮಟ್ಟ: 150 ಅಡಿ 4 ಇಂಚು
ಇಂದಿನ ನೀರಿನ ಸಂಗ್ರಹ (ಸಾಮರ್ಥ್ಯ): 34.563 ಟಿ.ಎಂ.ಸಿ (TMC)
ಒಳಹರಿವು (Inflow): 6,331 ಕ್ಯೂಸೆಕ್‌ಗಳು
ಒಟ್ಟು ಹೊರಹರಿವು (Outflow): 174 ಕ್ಯೂಸೆಕ್‌ಗಳು
ಹೊರಹರಿವಿನ ಹಂಚಿಕೆ ವಿವರ:
ಬಲದಂಡೆ ನಾಲೆ (RBC): 0 ಕ್ಯೂಸೆಕ್‌ಗಳು
ಎಡದಂಡೆ ನಾಲೆ (LBC): 50 ಕ್ಯೂಸೆಕ್‌ಗಳು
ನದಿ ತಳಭಾಗ/ತಗ್ಗುಗಳು (River Sluice): 50 ಕ್ಯೂಸೆಕ್‌ಗಳು
ಆವಿಯಾಗುವಿಕೆ (Evaporation): 74 ಕ್ಯೂಸೆಕ್‌ಗಳು
ಕಳೆದ ವರ್ಷಕ್ಕೆ ಹೋಲಿಕೆ (22-07-2025 ರಲ್ಲಿದ್ದ ಸ್ಥಿತಿ):
ಕಳೆದ ವರ್ಷ ಇದೇ ದಿನಾಂಕಕ್ಕೆ ಹೋಲಿಸಿದರೆ ಜಲಾಶಯದಲ್ಲಿ ನೀರಿನ ಮಟ್ಟ ಹಾಗೂ ಸಂಗ್ರಹ ಉತ್ತಮವಾಗಿತ್ತು:
ಕಳೆದ ವರ್ಷದ ನೀರಿನ ಮಟ್ಟ: 179 ಅಡಿ 4 ಇಂಚು
ಕಳೆದ ವರ್ಷದ ನೀರಿನ ಸಂಗ್ರಹ: 63.390 ಟಿ.ಎಂ.ಸಿ
ಕಳೆದ ವರ್ಷದ ಒಳಹರಿವು: 8,065 ಕ್ಯೂಸೆಕ್‌ಗಳು
ಕಳೆದ ವರ್ಷದ ಹೊರಹರಿವು: 6,919 ಕ್ಯೂಸೆಕ್‌ಗಳು
ಕಳೆದ ವರ್ಷಕ್ಕೆ ಹೋಲಿಸಿದರೆ 30 ಅಡಿಗೂ ಕಡಿಮೆ ನೀರು ಸಂಗ್ರಹವಾಗಿದೆ. ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ಜಲಾಶಯಕ್ಕೆ ಬರುತ್ತಿರುವ ಒಳಹರಿವು ಈ ವರ್ಷ ಭಾರೀ ಕಡಿಮೆಯಾಗಿದೆ. ಈ ಬಾರಿ ಭದ್ರಾ ಡ್ಯಾಂ ಭರ್ತಿಯಾಗುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿ ರೈತಾಪಿ ವರ್ಗ ಇದೆ.
ಈಗಾಗಲೇ ಮುಂಗಾರು ಬೆಳೆಗೆ ನೀರಿಲ್ಲ. ಹಿಂಗಾರು ಮಳೆಯೂ ಕೈ ಕೊಟ್ಟರೆ ಎರಡನೇ ಬೆಳೆಗೂ ನೀರು ಸಿಗದ ಭಯ ರೈತರಲ್ಲಿ ಇದ್ದು. ಮಳೆರಾಯ ಕೃಪೆ ತೋರಬೇಕೆಂದು ಪ್ರಾರ್ಥಿಸತೊಡಗಿದ್ದಾರೆ.





Leave a comment