Home ಕ್ರೈಂ ನ್ಯೂಸ್ ಮೂರು ತಿಂಗಳ ಗರ್ಭಿಣಿ, ರಕ್ಷಣಾ ಸಚಿವಾಲಯದ ಸಹಾಯಕ ಸೆಕ್ಷನ್ ಅಧಿಕಾರಿ ನಾಜಿಯಾ ಖಾನಮ್ ಅನುಮಾನಾಸ್ಪದ ಸಾವು: ಕುಟುಂಬಸ್ಥರ ಆರೋಪವೇನು?
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮೂರು ತಿಂಗಳ ಗರ್ಭಿಣಿ, ರಕ್ಷಣಾ ಸಚಿವಾಲಯದ ಸಹಾಯಕ ಸೆಕ್ಷನ್ ಅಧಿಕಾರಿ ನಾಜಿಯಾ ಖಾನಮ್ ಅನುಮಾನಾಸ್ಪದ ಸಾವು: ಕುಟುಂಬಸ್ಥರ ಆರೋಪವೇನು?

Share
ರಕ್ಷಣಾ
Share

ನವದೆಹಲಿ: ದೆಹಲಿಯ ದ್ವಾರಕಾ ನಿವಾಸದಲ್ಲಿ ರಕ್ಷಣಾ ಸಚಿವಾಲಯದ ಸಹಾಯಕ ಸೆಕ್ಷನ್ ಅಧಿಕಾರಿಯಾಗಿ (ASO) ಕಾರ್ಯನಿರ್ವಹಿಸುತ್ತಿದ್ದ ಮೂರು ತಿಂಗಳ ಗರ್ಭಿಣಿ ನಾಜಿಯಾ ಖಾನಮ್ (30) ಎಂಬವರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

ಆಗಸ್ಟ್ 21ರಂದು ಅವರು ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರ ತಂದೆ ತವಾಬ್ ಖಾನ್ ನೀಡಿದ ದೂರಿನ ಮೇರೆಗೆ, ಪತಿ ಅಜ್ಮ್ ಅಲಿ ಖಾನ್, ಅತ್ತೆ ಸಮಿನ್ ನಿಶಾ ಹಾಗೂ ಮಾವ ಬಾಬರ್ ಅಲಿ ಖಾನ್ ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಕಳೆದ ಏಪ್ರಿಲ್ 11ರಂದು ಇವರ ವಿವಾಹ ನಡೆದಿತ್ತು. ವರದಕ್ಷಿಣೆ  ಕಿರುಕುಳವೇ ಈ ದುರಂತಕ್ಕೆ ಕಾರಣವೆಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದು, ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ಘಟನೆ ಸಂಬಂಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 85 ಮತ್ತು 108 ರಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles