Home ದಾವಣಗೆರೆ 175 ಅಡಿ ದಾಟಿದ ಭದ್ರಾ ಡ್ಯಾಂ ನೀರಿನ ಮಟ್ಟ: ಇಂದು ಒಳಹರಿವಿನಲ್ಲಿ ಕುಸಿತ, ಎಷ್ಟಿದೆ ಇನ್ ಫ್ಲೋ?
ದಾವಣಗೆರೆನವದೆಹಲಿಬೆಂಗಳೂರು

175 ಅಡಿ ದಾಟಿದ ಭದ್ರಾ ಡ್ಯಾಂ ನೀರಿನ ಮಟ್ಟ: ಇಂದು ಒಳಹರಿವಿನಲ್ಲಿ ಕುಸಿತ, ಎಷ್ಟಿದೆ ಇನ್ ಫ್ಲೋ?

Share
ಭದ್ರಾ ಡ್ಯಾಂ
Share

ದಾವಣಗೆರೆ: ಭದ್ರಾ ಡ್ಯಾಂ ಒಳಹರಿವಿನಲ್ಲಿ ಕಡಿಮೆಯಾಗಿದೆ. ಆಗಸ್ಟ್ 23ರ ಇಂದು ಜಲಾಶಯದ ನೀರಿನ ಮಟ್ಟ 175 ಅಡಿ ದಾಟಿದೆ. ಒಂದೆಡೆ ನೀರು ಹರಿಸಬೇಕೆಂದು ದಾವಣಗೆರೆ ಭಾಗದ ರೈತರು ಒತ್ತಾಯ ಮಾಡುತ್ತಿದ್ದರೆ, ಮತ್ತೆ ಕೆಲವರು ನೀರು ಸಂಗ್ರಹಿಸಿಟ್ಟುಕೊಂಡು ಮುಂದಿನ ಬೇಸಿಗೆಗೆ ನೀರು ಹರಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಈ ನಡುವೆ ಭದ್ರಾ ಡ್ಯಾಂ ನೀರಿನ ಮಟ್ಟ 175 ಅಡಿ ದಾಟಿರುವುದು ರೈತರಲ್ಲಿ ಮಂದಹಾಸ ಮೂಡಿಸಿದೆ.

ಭದ್ರಾ ಜಲಾಶಯದ ನೀರಿನ ಮಟ್ಟದ ವರದಿ — 23.08.2026

ಸಮಯ: ಬೆಳಿಗ್ಗೆ 6:00 ಗಂಟೆಗೆ

ದಿನಾಂಕ: 23.08.2026

ಡ್ಯಾಮ್ ವಿವರಗಳು

ಗರಿಷ್ಠ ಮಟ್ಟ (F.R.L): 186 ಅಡಿ (ಸಮುದ್ರ ಮಟ್ಟದಿಂದ: 2158.0 ಅಡಿ)

ಒಟ್ಟು ಜಲಸಾಮರ್ಥ್ಯ: 71.535 TMC

ಪ್ರಸ್ತುತ ನೀರಿನ ಮಟ್ಟ

ಜಲಾಶಯದ ಮಟ್ಟ: 175 ಅಡಿ 2 ಇಂಚು (ಸಮುದ್ರ ಮಟ್ಟದಿಂದ: 2147.16 ಅಡಿ)

ಪ್ರಸ್ತುತ ಜಲಸಂಗ್ರಹ: 58.569 TMC

ಒಳಹರಿವು: 3,504 ಕ್ಯೂಸೆಕ್ಸ್

ಹೊರಹರಿವು: 205 ಕ್ಯೂಸೆಕ್ಸ್

ಹೊರಹರಿವು ಮತ್ತು ನಷ್ಟದ ವಿವರ

ಬಲದಂಡೆ ನಾಲು (R.B.C): 0 ಕ್ಯೂಸೆಕ್ಸ್

ಎಡದಂಡೆ ನಾಲೆ (L.B.C): 0 ಕ್ಯೂಸೆಕ್ಸ್

ನದಿ ಕಾಲುವೆ (River Sluice): 100 ಕ್ಯೂಸೆಕ್ಸ್

ಆವಿಯಾಗುವಿಕೆ (Evaporation): 105 ಕ್ಯೂಸೆಕ್ಸ್

ಕಳೆದ ವರ್ಷದ ಇದೇ ದಿನದ ವಿವರ

ಕಳೆದ ವರ್ಷದ ನೀರಿನ ಮಟ್ಟ: 184 ಅಡಿ

ಕಳೆದ ವರ್ಷದ ಜಲಸಂಗ್ರಹ: 69.035 TMC

ಕಳೆದ ವರ್ಷದ ಒಳಹರಿವು: 6,215 ಕ್ಯೂಸೆಕ್ಸ್

ಕಳೆದ ವರ್ಷದ ಹೊರಹರಿವು: 6,215 ಕ್ಯೂಸೆಕ್ಸ್

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 9 ಅಡಿ ಅಷ್ಟು ನೀರು ಕಡಿಮೆಯಾಗಿದೆ. ಭದ್ರಾ ಡ್ಯಾಂ ಈ ಬಾರಿ ಭರ್ತಿಯಾಗಲು ಇನ್ನೂ ಹತ್ತು ಅಡಿಗೂ ಹೆಚ್ಚು ನೀರು ಹರಿದು ಬರಬೇಕಿದೆ.

Share

Leave a comment

Leave a Reply

Your email address will not be published. Required fields are marked *

Related Articles