ರಂಗ್‌ಪುರ್: ಬಾಂಗ್ಲಾದೇಶದ ರಂಗ್‌ಪುರ್ ನಗರದಲ್ಲಿ ಹಿಂದೂ ಸಮಾಜದ ನಿವೃತ್ತ ಶಾಲಾ ಶಿಕ್ಷಕರೊಬ್ಬರು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿರುವ ದಾರುಣ ಘಟನೆ ವರದಿಯಾಗಿದೆ.
ಮೃತರನ್ನು ರಂಗ್‌ಪುರ್ ಜಿಲ್ಲಾ ಶಾಲೆಯ ನಿವೃತ್ತ ಶಿಕ್ಷಕ ಗಣಪತಿ (65), ಅವರ ಪತ್ನಿ ಪ್ರೀತಿಲತಾ ಚಕ್ರವರ್ತಿ (50), ಪುತ್ರಿ ಅಗಾಮಿ ಚಕ್ರವರ್ತಿ ಪ್ರಾರ್ಥಿ (23) ಹಾಗೂ ಪುತ್ರ ಪ್ರಿಯಮ್ ಚಕ್ರವರ್ತಿ (12) ಎಂದು ಗುರುತಿಸಲಾಗಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಗಿಲು ಒಡೆದು ಒಳಪ್ರವೇಶಿಸಿದಾಗ ಶವಗಳು ಪತ್ತೆಯಾಗಿವೆ. ತಾಯಿ ಮತ್ತು ಮಗಳ ಮೃತದೇಹ ಮೆಟ್ಟಿಲುಗಳ ಮೇಲೆಯೂ, ಗಣಪತಿ ಅವರ ಮೃತದೇಹ ಮೇಲ್ಛಾವಣಿಯ ಮೇಲೆಯೂ ಹಾಗೂ ಕಿರಿಯ ಮಗನ ಶವ ಮಂಚದ ಕೆಳಗೆ ಪತ್ತೆಯಾಗಿದೆ ಎಂದು ರಂಗ್‌ಪುರ್ ಮಹಾನಗರ ಸಿಐಡಿ ವಕ್ತಾರರು ತಿಳಿಸಿದ್ದಾರೆ.
ಸದ್ಯ ಪೊಲೀಸರು, ಅಪರಾಧ ತನಿಖಾ ಇಲಾಖೆ (CID) ಮತ್ತು ಗೋಪಾಲಕ ಗುಪ್ತಚರ ಶಾಖೆ (DB) ಜಂಟಿಯಾಗಿ ತನಿಖೆ ಮುಂದುವರೆಸಿವೆ.





Leave a comment