ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಮತ ಎಣಿಕೆ ಪೂರ್ಣಗೊಳ್ಳುತ್ತಿದ್ದಂತೆ ರೋಚಕ ಘಟ್ಟ ತಲುಪುತ್ತಿದೆ. 13,14,15ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದೆ. ಹದಿನಾರನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು 7516 ಮತಗಳ ಮುನ್ನಡೆ ಪಡೆದಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಹಿನ್ನೆಡೆ ಅನುಭವಿಸಿದ್ದಾರೆ.
ಹದಿನಾರನೇ ಸುತ್ತಿನಲ್ಲಿ ಸಮರ್ಥ್ ಶಾಮನೂರು 7516 ಮತಗಳ ಮುನ್ನಡೆ ಪಡೆದಿದ್ದಾರೆ. ಕಾಂಗ್ರೆಸ್ ಮುನ್ನಡೆ ಮತಗಳು ಕಡಿಮೆಯಾಗುತ್ತಿದ್ದು, ರೋಚಕ ಘಟ್ಟದತ್ತ ಫಲಿತಾಂಶ ಮುಂದುವರಿದಿದೆ. ಕೊನೆ ಗಳಿಗೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳು ಬಿದ್ದಿದ್ದೇ ಆದರೆ ಫಲಿತಾಂಶ ಕುತೂಹಲದತ್ತ ಸಾಗಲಿದೆ.
ಪ್ರಮುಖ ಮಾಹಿತಿ
ಪಕ್ಷ ಮತ್ತು ಅಭ್ಯರ್ಥಿ: ಸಮರ್ಥ್ ಶಾಮನೂರು (ಕಾಂಗ್ರೆಸ್) ಮುನ್ನಡೆ.
ಪ್ರತಿಸ್ಪರ್ಧಿ: ಶ್ರೀನಿವಾಸ್ ದಾಸಕರಿಯಪ್ಪ (ಬಿಜೆಪಿ) ಹಿನ್ನಡೆ.
ಮುನ್ನಡೆಯ ಅಂತರ: 7,516 ಮತಗಳು (16ನೇ ಸುತ್ತಿನ ಅಂತ್ಯಕ್ಕೆ).
ಒಟ್ಟು ಅಭ್ಯರ್ಥಿಗಳು: 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಸಮರ್ಥ್ ಶಾಮನೂರು ಏಳೂವರೆ ಸಾವಿರ ಮತಗಳ ಮುನ್ನಡೆ ಹೊಂದಿದ್ದರೂ ಮುಂದಿನ ಮತ ಎಣಿಕೆಯಲ್ಲಿ ಏನಾಗಬಹುದು ಎಂಬ ಕುತೂಹಲದ ಕಣ್ಣುಗಳಿಂದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ನೋಡುತ್ತಿದ್ದಾರೆ.
ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಮುನ್ನಡೆ ಮುಂದುವರಿದಿದೆ. 11ನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು 7916 ಮತಗಳ ಭಾರೀ ಮುನ್ನಡೆಯನ್ನು ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪಡೆದಿದ್ದಾರೆ. ಈ ಮೂಲಕ ಮುನ್ನಡೆಯ ನಾಗಾಲೋಟವನ್ನು ಕಾಂಗ್ರೆಸ್ ಮುಂದುವರಿಸಿದೆ.
ಸಮರ್ಥ್ ಶಾಮನೂರು ಅವರು ಆರಂಭದಲ್ಲಿ ಹಿನ್ನೆಡೆ ಸಾಧಿಸಿದ್ದರೂ, ಸದ್ಯಕ್ಕೆ ಬರೋಬ್ಬರಿ ಎಂಟು ಸಾವಿರ ಮತಗಳ ಸನಿಹದಲ್ಲಿ ಲೀಡ್ ಪಡೆದಿದ್ದು, ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಸಂಭ್ರಮ ತಂದಿತ್ತು
ಸತತ ಏಳು ಸುತ್ತುಗಳಲ್ಲಿ ಆರಂಭಿಕ ಮುನ್ನಡೆ ಪಡೆದಿದ್ದ ಶ್ರೀನಿವಾಸ್ ದಾಸಕರಿಯಪ್ಪ ಅವರು ಎಂಟನೇ ಸುತ್ತಿನ ಬಳಿಕ ಹಿನ್ನೆಡೆ ಅನುಭವಿಸುತ್ತಿದ್ದಾರೆ. ಆರಂಭದಲ್ಲಿ ಕೇವಲ ಒಂದು ಸಾವಿರ ಮತಗಳ ಅಂತರದಿಂದ ಲೀಡ್ ಪಡೆದಿದ್ದ ಸಮರ್ಥ್ ಶಾಮನೂರು ಸದ್ಯ 7916 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್ ನ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, 10ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದೆ. ಶಾಮನೂರು ಶಿವಶಂಕರಪ್ಪರ ಮೊಮ್ಮಗ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು 5220 ಮತಗಳ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.





Leave a comment