ನವದೆಹಲಿ: ಭಾರತದ 80ನೇ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜಿಪಿ) ಸಂಸ್ಥಾಪಕ ಅಭಿಜೀತ್ ದೀಪಕ್, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಸಬಲೀಕರಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ಕರೆಯನ್ನು ನೀಡಿದ್ದಾರೆ.
ದೇಶದ ಪ್ರತಿಯೊಂದು ಗ್ರಾಮದ ಸರ್ಕಾರಿ ಶಾಲೆಗಳ ಸ್ಥಿತಿಗತಿಯನ್ನು ಉತ್ತಮಪಡಿಸಲು ಗ್ರಾಮ ಪಂಚಾಯತಿ ಅಧ್ಯಕ್ಷರು (ಸರಪಂಚ್) ಹಾಗೂ ಪೋಷಕರು ಒಗ್ಗೂಡಿ ಕೆಲಸ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, “ದೇಶವು ಕಳೆದ 80 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ್ದರೂ, ಹಳ್ಳಿಗಳ ಸರ್ಕಾರಿ ಶಾಲೆಗಳು ಇಂದಿಗೂ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಈ ಸ್ವಾತಂತ್ರ್ಯೋತ್ಸವದಂದು ನಮ್ಮ ಗ್ರಾಮಗಳ ಸರ್ಕಾರಿ ಶಾಲೆಗಳನ್ನು ಸುಧಾರಿಸುವ ಶಪಥ ಮಾಡೋಣ” ಎಂದು ಹೇಳಿದ್ದಾರೆ.
‘ಬೃಹತ್ ಕಟ್ಟಡಗಳಾಗಿವೆ, ಹಳ್ಳಿಯ ಶಾಲೆಗಳೇಕಿಲ್ಲ?’:
ದೇಶದ ಮೂಲಸೌಕರ್ಯಗಳ ಅಭಿವೃದ್ಧಿಯ ಬಗ್ಗೆ ಪ್ರಶ್ನೆ ಎತ್ತಿದ ದೀಪಕ್, “ನಾವು ಹೊಸ ಸಂಸತ್ ಭವನವನ್ನು ನಿರ್ಮಿಸಿದ್ದೇವೆ, ಪ್ರಧಾನಮಂತ್ರಿಗಳಿಗೆ ಹೊಸ ನಿವಾಸ ನಿರ್ಮಿಸಿದ್ದೇವೆ. ಆದರೆ ನಮ್ಮ ಹಳ್ಳಿಗಳಲ್ಲಿ ಉತ್ತಮ ಶಾಲೆಗಳನ್ನು ಕಟ್ಟಲು ನಮಗೆ ಏಕೆ ಸಾಧ್ಯವಾಗಿಲ್ಲ?” ಎಂದು ಸರಕಾರವನ್ನು ನೇರವಾಗಿ ಪ್ರಶ್ನಿಸಿದ್ದಾರೆ. ನಗರದ ಮಕ್ಕಳಿಗೆ ಸಿಗುವ ಸೌಲಭ್ಯಗಳು ರೈತರು ಹಾಗೂ ಕಾರ್ಮಿಕರ ಮಕ್ಕಳಿಗೆ ಸಿಗುತ್ತಿದೆಯೇ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರು, ಶೌಚಾಲಯ ಹಾಗೂ ದೂರದ ಪ್ರಯಾಣದ ಸಮಸ್ಯೆಗಳಿಂದಾಗಿ ಹೆಣ್ಣುಮಕ್ಕಳ ಶಿಕ್ಷಣದ ಮೇಲೆ ಬೀರುತ್ತಿರುವ ಪರಿಣಾಮವನ್ನು ಅವರು ಎತ್ತಿ ತೋರಿಸಿದ್ದಾರೆ.
ಪೋಷಕರಿಂದ ಶಾಲಾ ಸೋಷಿಯಲ್ ಆಡಿಟ್:
ತಮ್ಮ ಸ್ವಂತ ಜಿಲ್ಲೆಯಾದ ಹಿಂಗೋಲಿಗೆ ಭೇಟಿ ನೀಡಿ ಗ್ರಾಮದ ಶಾಲಾ ಸೌಲಭ್ಯ ಮೇಲ್ದರ್ಜೆಗೇರಿಸಲು ಸ್ಥಳೀಯ ನಾಯಕರೊಂದಿಗೆ ಚರ್ಚಿಸುವುದಾಗಿ ತಿಳಿಸಿದ ಅವರು, ಶಾಲೆಗಳನ್ನು ಸುಧಾರಿಸುವ ಸರಪಂಚರ ಕೆಲಸವನ್ನು ಸಾಮಾಜಿಕ ಜಾಲತಾಣಗಳಲ್ಲಿ ಗುರುತಿಸಿ ಪ್ರಚಾರ ಮಾಡಲಾಗುವುದು ಎಂದಿದ್ದಾರೆ. ಜೊತೆಗೆ, ಪೋಷಕರು ಶಾಲೆಯ ವಿದ್ಯುತ್, ನೀರು, ಶೌಚಾಲಯ ಹಾಗೂ ಬಿಸಿಯೂಟದ ವ್ಯವಸ್ಥೆಯನ್ನು ಪರಿಶೀಲಿಸಿ ‘ಸಾಮಾಜಿಕ ಲೆಕ್ಕ ಪರಿಶೋಧನೆ’ (Social Audit) ನಡೆಸಬೇಕು ಮತ್ತು ಕೊರತೆಗಳಿದ್ದಲ್ಲಿ ವಿಡಿಯೋ ಮಾಡಿ ಮಾಹಿತಿ ಹಂಚಿಕೊಳ್ಳಬೇಕು ಎಂದು ಕೋರಿದ್ದಾರೆ.
ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ‘ನೀಟ್’ ಪರೀಕ್ಷಾ ಅಕ್ರಮಗಳ ವಿರುದ್ಧ ನಡೆದ 36 ದಿನಗಳ ಸುದೀರ್ಘ ವಿದ್ಯಾರ್ಥಿ ಹೋರಾಟದ ನೇತೃತ್ವ ವಹಿಸಿದ್ದ ಸಿಜಿಪಿ, ಶಿಕ್ಷಣ ಕ್ಷೇತ್ರದ ಸಮಗ್ರ ಸುಧಾರಣೆಗೆ ತನ್ನ ಒತ್ತಾಯವನ್ನು ಮುಂದುವರಿಸಿದೆ.
- Abhijeet Dipke
- CJP
- Cockroach Janta Party
- Dharmendra Pradhan Resignation
- Hingoli School Project
- Independence Day 2026
- NEET Exam Protests
- PM Modi Petition
- Rural Development
- Rural Education India.
- School Infrastructure
- Social Audit Schools
- Village Sarpanch
- Village Schools
- ಅಭಿಜೀತ್ ದೀಪಕ್
- ಕಾಕ್ರೋಚ್ ಜನತಾ ಪಾರ್ಟಿ
- ಗ್ರಾಮೀಣ ಶಿಕ್ಷಣ
- ಶಾಲಾ ಮೂಲಸೌಕರ್ಯ
- ಶಿಕ್ಷಣ ಸುಧಾರಣೆ
- ಸರಪಂಚ್
- ಸರ್ಕಾರಿ ಶಾಲೆಗಳು
- ಸಿಜಿಪಿ
- ಸೋಶಿಯಲ್ ಆಡಿಟ್
- ಸ್ವಾತಂತ್ರ್ಯೋತ್ಸವ 2026
- ಹಳ್ಳಿ ಶಾಲೆಗಳು
- ಹಿಂಗೋಲಿ ಶಾಲೆ





Leave a comment