ದಾವಣಗೆರೆ: ಜಿಲ್ಲೆಯ ದಾವಣಗೆರೆ ನಗರದ ಕೆಲವು ಭಾಗಗಳು ಹಾಗೂ ಜಗಳೂರು ಉಪವಿಭಾಗದ ವ್ಯಾಪ್ತಿಯಲ್ಲಿ ಜೂನ್ 06 ರಂದು ತುರ್ತು ಕಾಮಗಾರಿಗಳ ನಿಮಿತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ದಾವಣಗೆರೆ ನಗರದಲ್ಲಿ ವಿದ್ಯುತ್ ವ್ಯತ್ಯಯ (ಬೆಳಿಗ್ಗೆ 10:00 ರಿಂದ ಸಂಜೆ 4:00): ನಗರದ ಉಪವಿಭಾಗ-2 ರ ವ್ಯಾಪ್ತಿಯ ಯರಗುಂಟ, ಶಿವಾಲಿ, ಶಿವನಗರ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತುರ್ತು ಕಾಮಗಾರಿ ನಡೆಯಲಿದ್ದು, ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ:
ಬಿಸ್ಮಿಲ್ಲಾ ನಗರ, ಎಲ್ ಬಿ ಎಸ್ ನಗರ, ಎಸ್‌ಎಸ್‌ಎಂ ನಗರ, ಬಿ ಡಿ ಕಾರ್ಮಿಕರ ಬಡಾವಣೆ. ಶಿವ ನಗರ, ಮಿಲತ್ ಕಾಲೋನಿ, ಅಜಾದ್ ನಗರ, ಎಸ್.ಟಿ.ಪಿ ಪ್ಲಾಂಟ್ ಸುತ್ತಮುತ್ತಲ ಪ್ರದೇಶಗಳು. ಭಾಷಾ ನಗರ, ಮಂಡಕ್ಕಿ ಬಟ್ಟಿ, ಚೌಡೇಶ್ವರಿ ನಗರ, ಗಾಂಧಿ ನಗರ, ಬಿ ಏನ್ ಲೇಔಟ್ -1, ಎಸ್.ಪಿ.ಎಸ್ ನಗರ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಎಂದು ದಾವಣಗೆರೆ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ತಿಳಿಸಿದ್ದಾರೆ.
ಜಗಳೂರು ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ (ಬೆಳಿಗ್ಗೆ 10:00 ರಿಂದ ಸಂಜೆ 5:00):
ಜಗಳೂರು ಬೆಸ್ಕಾಂ ಉಪವಿಭಾಗದ ಬಿಳಿಚೋಡು ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಬಂಧಿಸಿದ ಮುಚ್ಚುನೂರು ಎನ್‌ಜೆವೈ 11ಕೆವಿ ಮಾರ್ಗಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಇನ್ನುಳಿದ ಎಫ್-01 ಗುತ್ತಿದುರ್ಗ, ಎಫ್-02 ಹಾಲೇಕಲ್ಲು, ಎಫ್-05 ಚಿಕ್ಕರಕೆರೆ, ಎಫ್-09 ಮೆದಕೆರನಹಳ್ಳಿ ಮತ್ತು ಎಫ್-10 ಎನ್.ಆರ್.ಪುರ 11ಕೆವಿ ಕೃಷಿ ಮಾರ್ಗಗಳಿಗೆ ಬೆಳಿಗ್ಗೆ 10:00 ಗಂಟೆಯ ಒಳಗಾಗಿ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.





Leave a comment