ದಾವಣಗೆರೆ: ವಿಶ್ವ ನಾಯಕ, ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಯಾವುದೇ ರೀತಿಯ ಅಪವಾದ ಹಾಗೂ ಕಳಂಕವಿಲ್ಲದೆ ಅತ್ಯಂತ ಯಶಸ್ವಿಯಾಗಿ 12 ವರ್ಷಗಳನ್ನು ಪೂರೈಸಿರುವ ಪ್ರಯುಕ್ತ, ದಾವಣಗೆರೆ ಉತ್ತರ ಮಂಡಲ ಯುವ ಮೋರ್ಚಾ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಾಮನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಸಿಗಳನ್ನು ವಿತರಿಸುವ ಹಾಗೂ ನೆಡುವ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವಿಶೇಷ ಸಂದರ್ಭದಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಕೆ.ಎಂ. ಸುರೇಶ್ ರವರು, ಪ್ರಮುಖರಾದ ಎಲ್.ಎನ್. ಕಲ್ಲೇಶಣ್ಣ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಅವರು ಆಗಮಿಸಿ ಸಸಿಗಳನ್ನು ನೆಡುವ ಮೂಲಕ ಚಾಲನೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಭ್ರಷ್ಟಾಚಾರ ರಹಿತ, ಜನಪರ ಆಡಳಿತದ ಸಾಧನೆಯನ್ನು ಸ್ಮರಿಸಿದರು. ಪ್ರಕೃತಿ ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಮುಖಂಡರು ಈ ವೇಳೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉತ್ತರ ಮಂಡಲ ಅಧ್ಯಕ್ಷ ತಾರೇಶ್ ನಾಯಕ್, ಪ್ರಧಾನ ಕಾರ್ಯದರ್ಶಿಗಳಾದ ಜಯ ರುದ್ರಪ್ಪ ಹಾಗೂ ಮಂಜುನಾಥ್ ಗುತ್ತೂರ್, ಕಾರ್ಯದರ್ಶಿ ಹಾಲೇಶ್ ನಾಯಕ್, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಆರ್. ಶಿವಾನಂದ್ ಅವರು ಉಪಸ್ಥಿತರಿದ್ದರು.
ಯುವ ಮೋರ್ಚಾ ಅಧ್ಯಕ್ಷ ಹರೀಶ್ ಶಾಮನೂರ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಶರತ್ ಕೆ.ಎಲ್. ಮತ್ತು ಮಾಂತೇಶ್ ನಾಯಕ್, ಬಿಜೆಪಿ ಮುಖಂಡರಾದ ಜಯಪ್ರಕಾಶ್, ರಾಜು ಶಾಮನೂರ್, ಓಬಿಸಿ ಮೋರ್ಚಾ ಅಧ್ಯಕ್ಷರಾದ ವಿನಯ್ ದಿಲ್ಲಪ್ಪ, ನಲ್ಲಿ ಮಂಜುನಾಥ್ ಭಾಗವಹಿಸಿದ್ದರು.
ಮಹಿಳಾ ಮೋರ್ಚಾ ಅಧ್ಯಕ್ಷೆ ಮಮತಾ ಗೌಡ, ಪ್ರಮುಖರಾದ ಚಂದ್ರಕಲಾ, ರೇಖಾ ವಾಲಿ, ಕಾರ್ಯದರ್ಶಿ ಗೀತಾ, ಶಾಮನೂರಿನ ಸ್ಥಳೀಯ ಮುಖಂಡರುಗಳಾದ ರವಿ ಪಾಟೀಲ್, ಯೋಗೀಶ್ ಸೇರಿದಂತೆ ಇನ್ನು ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಶಾಲಾ ಮಕ್ಕಳಿಗೆ ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿ ಸಸಿಗಳನ್ನು ವಿತರಿಸಲಾಯಿತು.
- BJP Davanagere.
- DAVANAGERE NEWS
- Environmental Awareness
- KM Suresh
- PM Narendra Modi 12 Years
- Sapling Distribution
- Shamanur Government School
- World Environment Day
- Yuva Morcha Davanagere
- ಕೆ ಎಂ ಸುರೇಶ್
- ದಾವಣಗೆರೆ ಸುದ್ದಿ
- ನರೇಂದ್ರ ಮೋದಿ 12 ವರ್ಷಗಳ ಆಡಳಿತ
- ಪರಿಸರ ಜಾಗೃತಿ
- ಬಿಜೆಪಿ ದಾವಣಗೆರೆ
- ಯುವ ಮೋರ್ಚಾ ದಾವಣಗೆರೆ
- ವಿಶ್ವ ಪರಿಸರ ದಿನಾಚರಣೆ
- ಶಾಮನೂರು ಸರ್ಕಾರಿ ಶಾಲೆ
- ಸಸಿ ವಿತರಣೆ ಕಾರ್ಯಕ್ರಮ





Leave a comment