SUDDIKSHANA KANNADA NEWS/ DAVANAGERE/ DATE:27-01-2025
ಬೆಂಗಳೂರು: ಕಿಚ್ಚ ಸುದೀಪ್ ನಡೆಸಿಕೊಟ್ಟ ಬಿಗ್ ಬಾಸ್ 11 ಸೀಸನ್ ನಲ್ಲಿ ಬಿಗ್ ಬಾಸ್ ಆಗಿ ಹಳ್ಳಿ ಹೈದ, ಹಾವೇರಿಯ ಕುರಿ ಕಾಯುವ ಹುಡುಗ ಹನುಮಂತ ಹೊರಹೊಮ್ಮಿದ್ದಾರೆ. ಈ ಮೂಲಕ ಹಳ್ಳಿ ಮಕ್ಕಳೂ ಬಿಗ್ ಬಾಸ್ ಶೋನಲ್ಲಿ ತಾಕತ್ ಪ್ರದರ್ಶಿಸಬಹುದು ಎಂಬುದನ್ನು ಸಾಕ್ಷೀಕರಿಸಿದ್ದಾನೆ.
ಅಂದ ಹಾಗೆ ಹನುಮಂತ ಪಡೆದ ವೋಟ್ ಕೇಳಿ ಎಲ್ಲರೂ ದಂಗಾಗಿದ್ದಾರೆ. ಸುಮಾರು ಐದು ಕಾಲು ಕೋಟಿ ವೋಟ್ ಪಡೆದು ಬಿಗ್ ಬಾಸ್ ಆಗಿ ಹೊರಹೊಮ್ಮಿದ್ದು, 50 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿದೆ.
ಬಿಗ್ ಬಾಸ್ ಸೀಸನ್ 11ರಲ್ಲಿ ಹಳ್ಳಿ ಹೈದ ಹನುಮಂತ ಇತಿಹಾಸ ಬರೆದಿದ್ದಾನೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಹಾವೇರಿಯ ಹನುಮ ಬಿಗ್ ಬಾಸ್ ಟ್ರೋಫಿ ಗೆದ್ದಿದ್ದಾರೆ. ಬಿಬಿಕೆ ಸೀಸನ್ 11ರ ಟ್ರೋಫಿಯೂ ಸಿಕ್ಕಿದೆ. ಬಿಗ್ ಬಾಸ್ ಇತಿಹಾಸದಲ್ಲಿ ವೈಲ್ಡ್ ಕಾರ್ಡ್ ಮೂಲಕ ಬಂದು ಯಾವ ಸೀಸ್ ನಲ್ಲಿ ಜಯಗಳಿಸಿಲ್ಲ. ವೋಟಿಂಗ್ ನಲ್ಲಿ ಪೈಪೋಟಿಯನ್ನೇ ನೀಡದ ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದು, ಎರಡು ಕಾಲು ಕೋಟಿ ವೋಟ್ ಪಡೆದಿದ್ದಾರೆ.
ಜಗದೀಶ್ ಹಾಗೂ ರಂಜಿತ್ ಹೊಡೆದಾಡಿಕೊಂಡು ಬಿಗ್ ಬಾಸ್ ಮನೆಯಿಂದ ಹೊರಗೆ ಹೋದ ಬಳಿಕ ವೈಲ್ಡ್ ಕಾರ್ಡ್ ಮೂಲಕ ಹನುಮಂತು ದೊಡ್ಮನೆಗೆ ಬಂದ್ರು. ಹನುಮಂತನ ಎಂಟ್ರಿ ಬಿಗ್ ಬಾಸ್ ಮನೆಗೆ ಹೊಸ ಕಳೆ ತಂದಿತ್ತು ಹಾಡು ಹಾಡುತ್ತಾ, ಹಾಸ್ಯದ ಹೊನಲು ಹರಿಸುತ್ತಾ, ಎಲ್ಲರೊಟ್ಟಿಗೂ ಚೆನ್ನಾಗಿಯೇ ಇದ್ದು, ಬುದ್ದಿವಂತಿಕೆಯಿಂದ ಗೇಮ್ ಆಡಿದ ಹನುಮಂತ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸಿದ್ದಾನೆ.
ಮುಗ್ಧತೆ, ಹಳ್ಳಿ ಭಾಷೆ, ಜಾನಪದ ಹಾಡುಗಳು, ಅಲ್ಲಿಯೇ ಪದಗಳನ್ನು ಕಟ್ಟಿ ಹಾಡುತ್ತಿದ್ದ ರೀತಿ ಕರುನಾಡಿನ ಜನರ ಮನ ಗೆದ್ದಿತ್ತು. ಅದರಲ್ಲಿಯೂ ಬೇರೆ ಸ್ಪರ್ಧಿಗಳಂತೆ ಕೂಗಾಟ, ಹಾರಾಟ, ಚೀರಾಟಕ್ಕೆ ಮಹತ್ವ ನೀಡದೇ ಆಡಿದ್ದು ಹನುಮಂತು
ಪ್ಲಸ್ ಪಾಯಿಂಟ್.
ಹಾವೇರಿಯ ಸಣ್ಣ ಹಳ್ಳಿಯಲ್ಲಿ ಕುರಿ ಕಾಯುವ ಕಾಯಕ ಮಾಡ್ತಿದ್ದ ಹನುಮಂತು ಹಾಡು ಹಾಡ್ತಾ ಫೇಮಸ್ ಆಗಿದ್ರು. ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಸಂಗೀತ ಕಾರ್ಯಕ್ರಮಕ್ಕೆ ಬಂದ ಬಳಿಕ ಹನುಮಂತುಗೆ ಭಾರೀ ಜನಪ್ರಿಯತೆ ಸಿಕ್ಕಿತ್ತು. ಅದ್ಬುತವಾಗಿ ಹಾಡು ಹಾಡುವ ಹನುಮಂತರು ಸರಿಗಮಪ ಶೋನಲ್ಲಿ ರನ್ನರ್ ಅಪ್ ಆಗಿದ್ರು. ಇದೀಗ ಕಲರ್ಸ್ ಕನ್ನಡದ ಬಿಗ್ಗೆಸ್ಟ್ ರಿಯಾಲಿಟಿ ಶೋ ಬಿಗ್ ಬಾಸ್ನಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.