SUDDIKSHANA KANNADA NEWS/ DAVANAGERE/ DATE:17-02-2024
ದಾವಣಗೆರೆ: ರಾತ್ರಿ ಮಲಗುವಾಗ ಸೊಳ್ಳೆ ಬರುತ್ತೆ ಅಂತಾ ಸೊಳ್ಳೆ ಬತ್ತಿ ಹಚ್ಚಿಡ್ತಿರಾ. ಹಾಗಿದ್ರೆ ಈ ಸುದ್ದಿ ನೋಡ್ಲೇಬೇಕು.
ಯಾಕೆಂದರೆ ವೃದ್ಧರೊಬ್ಬರು ಸೊಳ್ಳೆ ಕಾಟ ತಪ್ಪಿಸಿಕೊಳ್ಳಲು ಬತ್ತಿ ಹಚ್ಚಿಟ್ಟಿದ್ದರು. ಆದ್ರೆ, ಬತ್ತಿಯ ಬೆಂಕಿ ತಗುಲಿದ ಪರಿಣಾಮ ವೃದ್ಧರೊಬ್ಬರು ಮೃತಪಟ್ಟ ಘಟನೆ ನ್ಯಾಮತಿ ತಾಲೂಕಿನಲ್ಲಿ ನಡೆದಿದೆ. ಮೃತರನ್ನು ಹೊಸಮಳಲಿ ಗ್ರಾಮದ ಎ. ಮಲ್ಲಪ್ಪ (85) ಎಂದು ಗುರುತಿಸಲಾಗಿದೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ತಾಲೂಕಿನ ಹೊಸಮಳಲಿ ಗ್ರಾಮದ ಎ.ಮಲ್ಲಪ್ಪ (85) ಕಳೆದ ತಿಂಗಳು ಫೆಬ್ರವರಿ 10 ರ ಶನಿವಾರ ರಾತ್ರಿ ಸೊಳ್ಳೆ ಓಡಿಸಲೆಂದು ಹಚ್ಚಿದ್ದ ಸೊಳ್ಳೆ ಬತ್ತಿಯಿಂದ ಬೆಂಕಿಯೂ ತಾಗಿ ರಾತ್ರಿ 12-30ರ ಸುಮಾರಿಗೆ ನಿದ್ರೆಯಲ್ಲಿದ್ದ ಮಲ್ಲಪ್ಪ ಅವರ ಬಟ್ಟೆಗೆ ಹತ್ತಿಕೊಂಡು ಹೊತ್ತಿ ಉರಿದಿದೆ.
ಬೆಂಕಿ ಗಮನಿಸಿ ಕುಟುಂಬಸ್ಥರೆಲ್ಲಾ ಸೇರಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದರು. ಆದ್ರೆ, ತೀವ್ರ ಸುಟ್ಟಗಾಯಗಳಿಂದ ಮಲ್ಲಪ್ಪ ಬಳಲುತ್ತಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೇಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಯೋ ಸಹಜ ಸಮಸ್ಯೆ ಹಾಗೂ ಬೆಂಕಿ ತಗುಲಿದ ಕಾರಣ ಚಿಕಿತ್ಸೆಗೆ ಸ್ಪಂದಿಸದೆ ಮಲ್ಲಪ್ಪ ಶನಿವಾರ ಬೆಳಗ್ಗೆ ನಿಧನ ಹೊಂದಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಈ ಸಂಬಂಧ ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.