SUDDIKSHANA KANNADA NEWS/ DAVANAGERE/ DATE:04-02-2025
ದಾವಣಗೆರೆ: ಹೆಣ್ಮು ಮಕ್ಕಳ ಜೀವನ ಹಾಳು ಮಾಡುವವರಿಗೆ ಗುಂಡಿಕ್ಕಿ ಕೊಲ್ಲಬೇಕು ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚನ್ನಗಿರಿಯಲ್ಲಿ ಮಹಿಳೆಯರು, ಯುವತಿಯರು, ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ ವಿಡಿಯೋ ವೈರಲ್ ಮಾಡಿರುವ ಆರೋಪಿ ಅಮ್ಜದ್ ನನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು.
ಅಲ್ಪಸಂಖ್ಯಾತ ಯುವಕರು ಅನಗತ್ಯವಾಗಿ ಹಿಂದೂ ಮಹಿಳೆಯರು, ಯುವತಿಯರ ಸಂಪರ್ಕ ಸಾಧಿಸಿ ಮರಳು ಮಾಡಿ ಲವ್ ಜಿಹಾದ್ ಮಾಡುತ್ತಿದ್ದಾರೆ. ಹೆಣ್ಮುಕ್ಕಳ ಜೀವನ ಹಾಳು ಮಾಡುತ್ತಿದ್ದಾರೆ. ಕಾಮುಕರಿಗೆ ಸರಿಯಾದ
ಶಿಕ್ಷೆ ಕೊಡಬೇಕು. ಆದ್ರೆ, ಈ ವಿಚಾರದಲ್ಲಿ ಶಿಕ್ಷೆ ಆಗದಿರಲು ಸರ್ಕಾರದ ವೈಫಲ್ಯವೇ ಕಾರಣ ಎಂದು ಆರೋಪಿಸಿದರು.
ಲೈಂಗಿಕ ದೌರ್ಜನ್ಯ ಎಸಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತಿಲ್ಲ. ಪೊಲೀಸ್ ಇಲಾಖೆಗೆ ಸ್ವಾತಂತ್ರ್ಯ ಮತ್ತು ಅಧಿಕಾರ ನೀಡಬೇಕು. ಬಂಧಿಸಿದರೆ ಸಾಲದು, ಕಂಡಲ್ಲಿ ಗುಂಡಿಟ್ಟು ಹೊಡೆಯಬೇಕು ಎಂದು ಒತ್ತಾಯಿಸಿದರು.
ನಾನು ಹೊನ್ನಾಳಿಯಲ್ಲಿದ್ದೆ. ಆಗ ನನಗೆ ಕರೆ ಬಂತು. ಕೆರೆಹಳ್ಳಿ ಪುನೀತ್ ಮಾಹಿತಿ ನೀಡಿದರು. ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಫೋಕ್ಸೋ ಕೇಸ್ ದಾಖಲಿಸುವಂತೆ ನಾನು ಒತ್ತಾಯಿಸಿದ್ದೆ. ಚನ್ನಗಿರಿ ಪೊಲೀಸ್ ಅಧಿಕಾರಿಗಳು ಹಾಗೂ ಡಿವೈಎಸ್ಪಿ ಅವರಿಗೆ ಕರೆ ಮಾಡಿದ್ದೆ. ಆರೋಪಿಯನ್ನು ಬಂಧಿಸಿದರೆ ಸಾಲದು, ಬಾಲಕಿಯರು, ಯುವತಿಯರು, ಮಹಿಳೆಯರ ಬಾಳು ಹಾಳು ಮಾಡಿರುವ ಈತನನ್ನು ಗಲ್ಲಿಗೇರಿಸಬೇಕು. ಈ ವಿಚಾರದಲ್ಲಿ ಎಲ್ಲರೂ ಪಕ್ಷಾತೀತವಾಗಿ ಖಂಡಿಸಬೇಕು. ಹೋರಾಟ ಮಾಡಬೇಕು ಎಂದ ಅವರು, ಇಂಥ ಘಟನೆಗಳು ಮರುಕಳಿಸುತ್ತಿದ್ದು, ಸರ್ಕಾರದ ವೈಫಲ್ಯ ಕಂಡು ಬರುತ್ತಿದೆ ಎಂದು ಆರೋಪಿಸಿದರು.