Home ಉದ್ಯೋಗ ವಾರ್ತೆ ಶಿವಮೊಗ್ಗ ಜಿಲ್ಲೆಯ 14 ಗ್ರಾಮ ಪಂಚಾಯತಿ ‘ಅರಿವು ಕೇಂದ್ರ’ಗಳಲ್ಲಿ ಉದ್ಯೋಗಾವಕಾಶ; ಅರ್ಜಿ ಸಲ್ಲಿಸಲು ಜುಲೈ 8 ಕೊನೆಯ ದಿನ!
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

ಶಿವಮೊಗ್ಗ ಜಿಲ್ಲೆಯ 14 ಗ್ರಾಮ ಪಂಚಾಯತಿ ‘ಅರಿವು ಕೇಂದ್ರ’ಗಳಲ್ಲಿ ಉದ್ಯೋಗಾವಕಾಶ; ಅರ್ಜಿ ಸಲ್ಲಿಸಲು ಜುಲೈ 8 ಕೊನೆಯ ದಿನ!

Share
ಶಿವಮೊಗ್ಗ
Share

ಶಿವಮೊಗ್ಗ: ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರಿಗೆ ಸುವರ್ಣಾವಕಾಶವೊಂದು ಒದಗಿಬಂದಿದೆ. ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿರುವ ಒಟ್ಟು 258 ಗ್ರಾಮ ಪಂಚಾಯತಿ ಅರಿವು ಕೇಂದ್ರಗಳ ಪೈಕಿ, ಪ್ರಸ್ತುತ ಖಾಲಿ ಇರುವ 14 ಕೇಂದ್ರಗಳಿಗೆ ತಲಾ ಒಂದರಂತೆ ಒಟ್ಟು 14 ಮೇಲ್ವಿಚಾರಕರ (ಗ್ರಂಥಾಲಯ ಮೇಲ್ವಿಚಾರಕರು) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ನಿಯಮಾನುಸಾರ ರೋಸ್ಟರ್ ಬಿಂದುಗಳ (ಮೀಸಲಾತಿ) ಆಧಾರದ ಮೇಲೆ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಶಿವಮೊಗ್ಗ ಜಿಲ್ಲಾ ಪಂಚಾಯತ್‌ನ ಉಪ ಕಾರ್ಯದರ್ಶಿ (ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾವೆಲ್ಲಾ ಪಂಚಾಯತಿಗಳಲ್ಲಿ ಹುದ್ದೆ ಖಾಲಿ ಇದೆ?

ತೀರ್ಥಹಳ್ಳಿ ತಾಲೂಕು: ಬಾಂಡ್ಯ ಕುಕ್ಕೆ, ಹೊಸಹಳ್ಳಿ

ಸಾಗರ ತಾಲೂಕು: ಕುದರೂರು, ಕಲ್ಮನೆ, ಹೆಗ್ಗೋಡು

ಭದ್ರಾವತಿ ತಾಲೂಕು: ವೀರಾಪುರ, ಕೂಡ್ಲಿಗೆರೆ

ಹೊಸನಗರ ತಾಲೂಕು: ಸುಳುಗೋಡು, ತ್ರಿಣಿವೆ

ಸೊರಬ ತಾಲೂಕು: ಭಾರಂಗಿ, ಹರೀಶಿ

ಶಿಕಾರಿಪುರ ತಾಲೂಕು: ಮುದ್ದನಹಳ್ಳಿ, ಅಂಬಾರಗೊಪ್ಪ

ಶಿವಮೊಗ್ಗ ತಾಲೂಕು: ಚೋರಡಿ

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಆಯಾ 14 ಗ್ರಾಮ ಪಂಚಾಯತಿ ಕಾರ್ಯಾಲಯಗಳಿಂದ ಪಡೆಯಬಹುದು ಅಥವಾ ಜಿಲ್ಲೆಯ ಅಧಿಕೃತ ವೆಬ್‌ಸೈಟ್ https://shivamogga.nic.in ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಯೊಂದಿಗೆ ಧೃಢೀಕರಿಸಿದ ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಸಂಬಂಧಪಟ್ಟ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಿಗೆ (PDO) ಖುದ್ದಾಗಿ ಅಥವಾ ನೋಂದಾಯಿತ ಅಂಚೆ (Registered Post) ಮೂಲಕ ಸಲ್ಲಿಸಬೇಕಾಗಿದೆ.

ಅರ್ಜಿ ಸಲ್ಲಿಸಲು ಜುಲೈ 8, 2026 ಕಡೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಬಂಧಪಟ್ಟ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.

Share

Leave a comment

Leave a Reply

Your email address will not be published. Required fields are marked *