ಬೆಂಗಳೂರು: ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿ.ಕೆ.ಶಿವಕುಮಾರ್ ಅವರಿಗೆ ಸಿರಿಗೆರೆಯ ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಾದಿಸಿದರು.
ನೂತನ ಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ರವರ ವಿಜ್ಞಾಪನೆಯಂತೆ ಇಂದು ಬೆಂಗಳೂರಿನ ಲೋಕಭವನದಲ್ಲಿ ನಡೆದ ಅಧಿಕಾರ ಸ್ವೀಕಾರ ಪ್ರಮಾಣ ಮತ್ತು ಗೋಪ್ಯತೆಯ ಪ್ರಮಾಣ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ತರಳಬಾಳು ಜಗದ್ಗುರುಗಳವರು ಭಾಗವಹಿಸಿ ನೂತನ ಮುಖ್ಯಮಂತ್ರಿಗಳಿಗೆ ಶಾಲು ಹೊದಿಸಿ ಫಲಪುಷ್ಪ ಅಭಿನಂದಿಸಿದರು.
ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುತ್ತಿರುವ ನೀವು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ತಂತ್ರಜ್ಞಾನ, ಹೊಸ ಆಲೋಚನೆಗಳು ಹಾಗೂ ಜನಸಹಭಾಗಿತ್ವದೊಂದಿಗೆ ಕಾರ್ಯನಿರ್ವಹಿಸಿ ಮಾದರಿ ರಾಜ್ಯ ನಿರ್ಮಾಣಕ್ಕೆ ಸಂಕಲ್ಪ ಹೊಂದುವಂತೆ ಶ್ರೀ ಜಗದ್ಗುರುಗಳವರು ಡಿ ಕೆ ಶಿವಕುಮಾರ್ ರವರಿಗೆ ಮಾರ್ಗದರ್ಶನ ಮಾಡಿದರು.
ಶ್ರೀಗಳ ಆಶೀರ್ವಾದ ಹಾಗೂ ಮಾರ್ಗದರ್ಶನಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಕ್ತಿಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.
- Bengaluru
- DK Shivakumar
- Karnataka Chief Minister
- Karnataka Development
- Lok Bhavan
- Model State
- Public Participation
- Sirigere Seer
- Swearing-in Ceremony
- Taralabalu Jagadguru
- ಕರ್ನಾಟಕ ಅಭಿವೃದ್ಧಿ
- ಕರ್ನಾಟಕದ ಮುಖ್ಯಮಂತ್ರಿ
- ಜನಸಹಭಾಗಿತ್ವ
- ಡಿ. ಕೆ. ಶಿವಕುಮಾರ್
- ತರಳಬಾಳು ಜಗದ್ಗುರು
- ಪ್ರಮಾಣ ವಚನ ಕಾರ್ಯಕ್ರಮ
- ಬೆಂಗಳೂರು
- ಮಾದರಿ ರಾಜ್ಯ
- ಲೋಕಭವನ
- ಸಿರಿಗೆರೆ ಶ್ರೀಗಳು





Leave a comment