Home ಕ್ರೈಂ ನ್ಯೂಸ್ ಪಶ್ಚಿಮ ಬಂಗಾಳ ಸಿಎಂ ಸುವೆಂದು ಅಧಿಕಾರಿ ಕೊಲೆಗೆ ಪಾಕ್ ಉಗ್ರರ ಸಂಚು? ಎಸ್‌ಟಿಎಫ್ ಕಾರ್ಯಾಚರಣೆಯಲ್ಲಿ ಬಯಲಾಯ್ತು ಸ್ಫೋಟಕ ಸತ್ಯ! ಬೆಚ್ಚಿಬಿದ್ದಿದ್ಯಾಕೆ ಪಾಕ್ ಹ್ಯಾಂಡ್ಲರ್‌ಗಳು?
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪಶ್ಚಿಮ ಬಂಗಾಳ ಸಿಎಂ ಸುವೆಂದು ಅಧಿಕಾರಿ ಕೊಲೆಗೆ ಪಾಕ್ ಉಗ್ರರ ಸಂಚು? ಎಸ್‌ಟಿಎಫ್ ಕಾರ್ಯಾಚರಣೆಯಲ್ಲಿ ಬಯಲಾಯ್ತು ಸ್ಫೋಟಕ ಸತ್ಯ! ಬೆಚ್ಚಿಬಿದ್ದಿದ್ಯಾಕೆ ಪಾಕ್ ಹ್ಯಾಂಡ್ಲರ್‌ಗಳು?

Share
ಸುವೆಂದು ಅಧಿಕಾರಿ
Share

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೆಂದು ಅಧಿಕಾರಿ ಅವರು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳ ‘ಹಿಟ್ ಲಿಸ್ಟ್’‌ನಲ್ಲಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ರಾಜ್ಯ ವಿಶೇಷ ಕಾರ್ಯಪಡೆ (STF) ಬಹಿರಂಗಪಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಮೀಮ್ ಮಂಡಲ್ ಹಾಗೂ ಆತನ ಸಹಚರೆ ಅರ್ಪಿತಾ ಸರ್ಕಾರ್ ಎಂಬಿಬ್ಬರನ್ನು ಎಸ್‌ಟಿಎಫ್ ಅಧಿಕಾರಿಗಳು ಬಂಧಿಸಿದ್ದಾರೆ.

ಸಿಎಂ ಚಲನವಲನಗಳ ಮೇಲೆ ಕಣ್ಣಿಡಲು ಸೂಚನೆ:

ಎಸ್‌ಟಿಎಫ್ ಐಜಿ ಗೌರವ್ ಶರ್ಮಾ ನೀಡಿರುವ ಮಾಹಿತಿಯಂತೆ, ಬಂಧಿತ ಶಂಕಿತ ಹಮೀಮ್ ಮಂಡಲ್‌ನೊಂದಿಗೆ ಪಾಕಿಸ್ತಾನ ಮೂಲದ ಹಲವು ಸಾಮಾಜಿಕ ಜಾಲತಾಣ ಹ್ಯಾಂಡಲ್‌ಗಳು (ರಾಣಾ, ಅಬೀರ್ ಜಟ್, ಉಜೈರ್, ಹಾದ್) ನಿರಂತರ ಸಂಪರ್ಕದಲ್ಲಿದ್ದವು. ಮುಖ್ಯಮಂತ್ರಿಯವರ ದೈನಂದಿನ ಚಲನವಲನಗಳು, ಅವರ ಮಾರ್ಗಗಳು ಹಾಗೂ ಭದ್ರತೆ ಕಡಿಮೆ ಇರುವ ಸಮಯದ ಮಾಹಿತಿಯನ್ನು ಕಲೆಹಾಕಿ ತನಗೆ ರವಾನಿಸುವಂತೆ ಪಾಕ್ ಹ್ಯಾಂಡ್ಲರ್‌ಗಳು ಸೂಚಿಸಿದ್ದರು ಎಂದು ತಿಳಿದುಬಂದಿದೆ.

ದೆಹಲಿ ಪ್ರತಿಭಟನೆಯಲ್ಲಿ ಗಲಭೆಗೆ ಸಂಚು:

ದೆಹಲಿಯ ಜಂತರ್ ಮಂತರ್‌ನಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ನಕಲಿ ಪೊಲೀಸರ ಸಮವಸ್ತ್ರ ಧರಿಸಿ ಒಳನುಗ್ಗಿ ಭಾರಿ ಗಲಭೆ ಮತ್ತು ವಿಧ್ವಂಸಕ ಕೃತ್ಯ ಎಸಗಲು ಈ ಜಾಲ ಯೋಜನೆ ರೂಪಿಸಿತ್ತು. ಇದಕ್ಕಾಗಿ ಪೊಲೀಸರ ಯುನಿಫಾರ್ಮ್ ಖರೀದಿಸಲು ಹಮೀಮ್ ಮಂಡಲ್‌ಗೆ ಸೂಚಿಸಲಾಗಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ಹನಿ ಟ್ರ್ಯಾಪ್ ಮತ್ತು ಬಂಕಿಂಗ್ ಜಾಲ:

ಹೌರಾದ ಹಿರಿಯ ರಾಜಕಾರಣಿಯೊಬ್ಬರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುವ ಹಾಗೂ ಅವರ ಮಗನನ್ನು ‘ಹನಿ ಟ್ರ್ಯಾಪ್’ ಮೂಲಕ ಅಪಹರಿಸುವ ಸಂಚಿನ ಜಾಡು ಹಿಡಿದು ಹೊರಟ ಎಸ್‌ಟಿಎಫ್ ತಂಡಕ್ಕೆ ಈ ಬೃಹತ್ ಉಗ್ರ ನೆಟ್‌ವರ್ಕ್ ಕೊಂಡಿ ಸಿಕ್ಕಿದೆ. ಜಾರ್ಖಂಡ್‌ನ ಸಾಹಿಬ್‌ಗಂಜ್‌ನಿಂದ ಅರ್ಪಿತಾ ಸರ್ಕಾರ್ ಎಂಬಾಕೆಯನ್ನು ವಶಕ್ಕೆ ಪಡೆಯಲಾಗಿದ್ದು, ಆಕೆ ರಾಜಕಾರಣಿಗಳನ್ನು ಬಲೆಗೆ ಬೀಳಿಸಲು ಯತ್ನಿಸುತ್ತಿದ್ದಳು ಎಂಬ ಶಂಕೆ ವ್ಯಕ್ತವಾಗಿದೆ.

ಪ್ರಸ್ತುತ ಬಂಧಿತರಿಬ್ಬರನ್ನೂ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಪ್ರಕರಣದ ಕುರಿತು ಎಸ್‌ಟಿಎಫ್ ಸುದೀರ್ಘ ತನಿಖೆ ಮುಂದುವರಿಸಿದೆ.

Share

Leave a comment

Leave a Reply

Your email address will not be published. Required fields are marked *

Related Articles