ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆಗೆ (EPFO) ಬವಿಶೇಷವಾಗಿ 1,816.22 ಕೋಟಿ ರೂಪಾಯಿಗಳ ಭಾರಿ ನಷ್ಟ ಉಂಟುಮಾಡಿದ ಆರೋಪದ ಮೇರೆಗೆ ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್ (RCL) ಮತ್ತು ಅದರ ಮಾಜಿ ಅಧ್ಯಕ್ಷ ಅನಿಲ್ ಡಿ. ಅಂಬಾನಿ ವಿರುದ್ಧ ಸಿಬಿಐ (CBI) ಎಫ್‌ಐಆರ್ ದಾಖಲಿಸಿದೆ.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ದೂರಿನ ಮೇರೆಗೆ ಈ ಪ್ರಕರಣ ದಾಖಲಾಗಿದ್ದು, ವಂಚನೆ, ಕ್ರಿಮಿನಲ್ ಪಿತೂರಿ ಹಾಗೂ ಇಪಿಎಫ್‌ಒಗೆ wrongful loss (ಅನ್ಯಾಯದ ನಷ್ಟ) ಮಾಡಲಾಗಿದೆ ಎಂದು ಆರೋಪಿಸಲಾಗಿದೆ. 2013 ಮತ್ತು 2014ರಲ್ಲಿ ಪೋರ್ಟ್‌ಫೋಲಿಯೋ ವ್ಯವಸ್ಥಾಪಕರ ಮೂಲಕ ಇಪಿಎಫ್‌ಒ ನಿಧಿಯಿಂದ ಒಟ್ಟು 2,500 ಕೋಟಿ ರೂ.ಗಳನ್ನು ರಿಲಯನ್ಸ್ ಕ್ಯಾಪಿಟಲ್‌ನ ಸುರಕ್ಷಿತ ಡಿಬೆಂಚರ್‌ಗಳಲ್ಲಿ ಹೂಡಿಕೆ ಮಾಡಲಾಗಿತ್ತು.
ಜಾರಿ ನಿರ್ದೇಶನಾಲಯ (ED) ಮತ್ತು ಬಿಡಿಒ ಇಂಡಿಯಾ ಎಲ್‌ಎಲ್‌ಪಿ ನಡೆಸಿದ ವ್ಯವಹಾರಗಳ ತನಿಖೆಯಲ್ಲಿ ಹಲವು ವಂಚನೆಯ ವ್ಯವಹಾರಗಳು ಬೆಳಕಿಗೆ ಬಂದಿವೆ. ಹಣ ವರ್ಗಾವಣೆ ಮತ್ತು ಅಕ್ರಮ ಸಾಲ ನೀಡಿಕೆಯಿಂದಾಗಿ ಕಂಪನಿಯು ಆರ್ಥಿಕವಾಗಿ ಕುಸಿದುಬಿದ್ದು, ಇಪಿಎಫ್‌ಒಗೆ ಹಣ ಮರಳಿಸಲು ವಿಫಲವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅನಿಲ್ ಅಂಬಾನಿ ಸ್ಪಷ್ಟನೆ:
ಈ ಎಲ್ಲಾ ಆರೋಪಗಳನ್ನು ಅನಿಲ್ ಅಂಬಾನಿ ಅವರ ವಕ್ತಾರರು ತಳ್ಳಿಹಾಕಿದ್ದಾರೆ. “ಆರ್ಟಿಕಲ್‌ನಲ್ಲಿ ಉಲ್ಲೇಖಿಸಿರುವ ಸಿಬಿಐ ಎಫ್‌ಐಆರ್ ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್‌ಗೆ ಸಂಬಂಧಿಸಿದ್ದಾಗಿದೆ. ನವೆಂಬರ್ 2021ರಲ್ಲಿ ಆರ್‌ಬಿಐ ಮಂಡಳಿಯನ್ನು ವಹಿಸಿಕೊಳ್ಳುವವರೆಗೆ ಮಾತ್ರ ಅಂಬಾನಿ ಅವರು ಅಧ್ಯಕ್ಷರಾಗಿದ್ದರು. ಅನಿಲ್ ಅಂಬಾನಿ ಯಾವುದೇ ರೀತಿಯ ತಪ್ಪು ಮಾಡಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.
- 1816 Crore Scam
- Anil Ambani
- Anil Ambani CBI FIR
- BDO India transaction audit
- Business news India
- Business News Kannada
- CBI Case
- CBI case Anil Ambani
- Central Bureau of Investigation
- Enforcement Directorate
- Enforcement Directorate audit
- EPFO investment scam
- EPFO Loss
- Ministry of Labour
- Ministry of Labour complaint
- non convertible debentures
- Reliance Capital
- Reliance Capital EPFO loss
- Rs 1816 crore fraud
- ಅನಿಲ್ ಅಂಬಾನಿ
- ಇಪಿಎಫ್‌ಒ ನಷ್ಟ
- ರಿಲಯನ್ಸ್ ಕ್ಯಾಪಿಟಲ್
- ವಾಣಿಜ್ಯ ಸುದ್ದಿ
- ಸಿಬಿಐ ತನಿಖೆ





Leave a comment