ಮುಂಬೈ: ವಿಮಲ್ ಏಲಕ್ಕಿ ಜಾಹೀರಾತಿನಲ್ಲಿ ನಟಿಸಿರುವ ಬಾಲಿವುಡ್‌ನ ಖ್ಯಾತ ನಟರಾದ ಶಾರೂಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್‌ಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಶೋಕಾಸ್ ನೋಟಿಸ್ ನೀಡಿದೆ.
ಮಹಾರಾಷ್ಟ್ರದಲ್ಲಿ ಪಾನ್ ಮಸಾಲ ಉತ್ಪಾದನೆ, ಶೇಖರಣೆ, ಸಾಗಣೆ ಮತ್ತು ಮಾರಾಟವನ್ನು ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯ್ದೆ ೨೦೦೬ ರ ಅಡಿಯಲ್ಲಿ ಒಂದು ವರ್ಷಗಳ ಕಾಲ ನಿಷೇಧಿಸಲಾಗಿದೆ. ಆದರೆ, ನಟರು ‘ವಿಮಲ್ ಏಲಕ್ಕಿ’ ಹೆಸರಿನಲ್ಲಿ ನಿಷೇಧಿತ ‘ವಿಮಲ್ ಪಾನ್ ಮಸಾಲ’ ಬ್ರ್ಯಾಂಡ್ ಅನ್ನು ಪರೋಕ್ಷವಾಗಿ (Surrogate Advertising) ಪ್ರಚಾರ ಮಾಡುತ್ತಿದ್ದಾರೆ ಎಂದು ಎಫ್‌ಡಿಎ ಆರೋಪಿಸಿದೆ.
ಈ ಜಾಹೀರಾತಿನ ಶೈಲಿ, ಸಂಭಾಷಣೆ ಮತ್ತು ಬ್ರ್ಯಾಂಡ್ ಹೆಸರು ನಿಷೇಧಿತ ಉತ್ಪನ್ನವನ್ನು ನೆನಪಿಸುವಂತಿದ್ದು, ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವಂತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ತಮ್ಮ ಪಾತ್ರವೇನು ಎಂಬುದಕ್ಕೆ ವಿವರಣೆ ನೀಡುವಂತೆ ಮೂವರೂ ನಟರಿಗೆ ಸೂಚಿಸಲಾಗಿದೆ. ಎಫ್‌ಡಿಎ ಸರೋಗೆಟ್ ಜಾಹೀರಾತಿನ ವಿರುದ್ಧ ಇಂತಹ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದು ಇದೇ ಮೊದಲ ಬಾರಿಯಾಗಿದೆ.
- Ajay Devgn surrogate advertising
- Bollywood news
- Food Safety and Standards Act 2006
- Maharashtra FDA pan masala ban
- Shah Rukh Khan FDA notice
- Tiger Shroff notice
- Vimal Elaichi ad
- Vimal Pan Masala controversy
- ಅಜಯ್ ದೇವಗನ್
- ಆಹಾರ ಮತ್ತು ಔಷಧ ಆಡಳಿತ
- ಟೈಗರ್ ಶ್ರಾಫ್
- ಪರೋಕ್ಷ ಜಾಹೀರಾತು
- ಪಾನ್ ಮಸಾಲ ನಿಷೇಧ
- ಬಾಲಿವುಡ್ ಸುದ್ದಿ
- ಬಾಲಿವುಡ್ ಸುದ್ದಿವಿಮಲ್ ಏಲಕ್ಕಿ ಜಾಹೀರಾತು
- ಮಹಾರಾಷ್ಟ್ರ ಎಫ್‌ಡಿಎ
- ವಿಮಲ್ ಏಲಕ್ಕಿ ಜಾಹೀರಾತು
- ಶಾರೂಖ್ ಖಾನ್ ನೋಟಿಸ್





Leave a comment