ನವದೆಹಲಿ: ಎಐ (ಕೃತಕ ಬುದ್ಧಿಮತ್ತೆ) ರಂಗದ ಪ್ರಮುಖ ಸಂಸ್ಥೆಯಾದ ‘ಆಂಥ್ರೋಪಿಕ್’ ಸಂಸ್ಥೆಯ ಸಿಇಒ ಡೇರಿಯೊ ಅಮೋಡೆ ಅವರ ಪತ್ನಿ ಕ್ಯಾಮಿ ಕ್ಲಾರ್ಕ್ (Cami Clark), ಹಿಂದೆ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ಅವರ ಬಳಿ ತಮ್ಮ ಉದ್ಯಮಕ್ಕೆ ಹೂಡಿಕೆ ಕೋರಿದ್ದರು ಎಂಬ ವರದಿ ಭಾರೀ ಸಂಚಲನ ಮೂಡಿಸಿದೆ.
ಎಪ್‌ಸ್ಟೀನ್ ಇಮೇಲ್ ರಿಪೋರ್ಟ್ ವಿವರ:
‘ದ ವಾಲ್ ಸ್ಟ್ರೀಟ್ ಜರ್ನಲ್’ ಹಾಗೂ ಬಿಡುಗಡೆಯಾದ ಇಮೇಲ್ ದಾಖಲೆಗಳ ಪ್ರಕಾರ, 2011ರಲ್ಲಿ ಸಾಹಿತ್ಯಿಕ ಏಜೆಂಟ್ ಜಾನ್ ಬ್ರಾಕ್‌ಮನ್ ಮೂಲಕ ಕ್ಯಾಮಿ ಕ್ಲಾರ್ಕ್ ಅವರಿಗೆ ಜೆಫ್ರಿ ಎಪ್‌ಸ್ಟೀನ್ ಪರಿಚಯವಾಗಿತ್ತು. ಆ ಸಮಯದಲ್ಲಿ ಮಹಿಳೆಯರಿಗಾಗಿ ‘ಮಹಿಳಾ-ಕೇಂದ್ರಿತ ಐಷಾರಾಮಿ ಅಡಲ್ಟ್ ಕಂಟೆಂಟ್’ ಕಂಪನಿಯನ್ನು ಪ್ರಾರಂಭಿಸಲು ಕ್ಲಾರ್ಕ್ ಯೋಜನೆ ರೂಪಿಸಿದ್ದರು. 2012ರಲ್ಲಿ ಈ ಪ್ರಾಜೆಕ್ಟ್‌ಗೆ ಹೂಡಿಕೆ ಮಾಡುವಂತೆ ಎಪ್‌ಸ್ಟೀನ್‌ಗೆ ಕ್ಲಾರ್ಕ್ ಕೋರಿದ್ದರು. ಆದರೆ ಎಪ್‌ಸ್ಟೀನ್ ಈ ಹೂಡಿಕೆಯನ್ನು ತಿರಸ್ಕರಿಸಿದ್ದು, ಹಣಕಾಸು ನೆರವು ನೀಡಿದ ಯಾವುದೇ ಆಧಾರಗಳಿಲ್ಲ.
ಆಂಥ್ರೋಪಿಕ್ ಸಂಸ್ಥೆಯಲ್ಲಿ ಕ್ಯಾಮಿ ಪಾತ್ರ:
ಕ್ಯಾಮಿ ಕ್ಲಾರ್ಕ್ ಆಂಥ್ರೋಪಿಕ್ ಸಂಸ್ಥೆಯಲ್ಲಿ ಅಧಿಕೃತವಾಗಿ ಯಾವುದೇ ಹುದ್ದೆ ಹೊಂದಿಲ್ಲದಿದ್ದರೂ, ಸಿಇಒ ಡೇರಿಯೊ ಅಮೋಡೆ ಅವರಿಗೆ ಪ್ರಮುಖ ‘ಶ್ಯಾಡೋ ಅಡ್ವೈಸರ್’ (ನೆರಳು ಸಲಹೆಗಾರ್ತಿ) ಆಗಿ ಕಾರ್ಯಾಚರಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಪ್ರಮುಖ ಸಭೆಗಳಲ್ಲಿ ಭಾಗಿ: ದಾವೋಸ್ ವರ್ಲ್ಡ್ ಎಕನಾಮಿಕ್ ಫೋರಮ್, ಸನ್ ವ್ಯಾಲಿ ಕಾನ್ಫರೆನ್ಸ್ ಹಾಗೂ ನವದೆಹಲಿಯಲ್ಲಿ ನಡೆದ ‘AI Impact Summit’ ಪ್ರಮುಖ ಜಾಗತಿಕ ವೇದಿಕೆಗಳಲ್ಲಿ ಅಮೋಡೆ ಅವರೊಂದಿಗೆ ಕ್ಯಾಮಿ ಕ್ಲಾರ್ಕ್ ಭಾಗವಹಿಸಿದ್ದಾರೆ.
ಆರಂಭಿಕ ಹೂಡಿಕೆ: ಕ್ಯಾಮಿ ಕ್ಲಾರ್ಕ್ ಈ ಹಿಂದೆ ಗೂಗಲ್ ಮಾಜಿ ಸಿಇಒ ಎರಿಕ್ ಶ್ಮಿಡ್ ಅವರೊಂದಿಗೆ ಒಡನಾಟ ಹೊಂದಿದ್ದರು. 2018ರಲ್ಲಿ ಅಮೋಡೆ ಅವರನ್ನು ಶ್ಮಿಡ್‌ಗೆ ಪರಿಚಯಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ತದನಂತರ ಶ್ಮಿಡ್ ಆಂಥ್ರೋಪಿಕ್ ಸಂಸ್ಥೆಯ ಆರಂಭಿಕ ಹೂಡಿಕೆದಾರರಾಗಿದ್ದರು.





Leave a comment