ದಾವಣಗೆರೆ: ರಾಜಕೀಯ ಎಂದರೆ ಅದೊಂದು ಬೃಹತ್ ಸಾಗರ. ಹಿರಿಯ ನಾಯಕರ ಅನುಭವ ಮತ್ತು ಹಿಡಿತದ ನಡುವೆ, ನಿಟುವಳ್ಳಿಯಂತಹ ಪ್ರದೇಶದಿಂದ ಬಂದ ಯುವ ನಾಯಕನೊಬ್ಬ ತನ್ನದೇ ಆದ ಹೊಸ ಹಾದಿ ಕಂಡುಕೊಂಡಿರುವುದು ಸಣ್ಣ ವಿಷಯವೇನಲ್ಲ. ತಳಮಟ್ಟದಿಂದ ಬೆಳೆದು ಬಂದಿರುವ ಈ ಯುವ ಕಾಂಗ್ರೆಸ್ ನಾಯಕ ಈಗ ಎಲ್ಲರನ್ನೂ ಕೋಲ್ಮಿಂಚಿನಂತೆ ಸೆಳೆಯುತ್ತಿದ್ದಾರೆ. ಅವರೇ ನಿಟುವಳ್ಳಿ ಪ್ರವೀಣ್.
ಜನರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವುದು, ಯುವಕರಿಗೆ ನೆರವಾಗುವುದು, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯಹಸ್ತ ಚಾಚುವುದು ಹಾಗೂ ಪಕ್ಷ ಸಂಘಟನೆಯ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿರ್ವಹಿಸುವ ಮೂಲಕ ಸಾರ್ವಜನಿಕ ಜೀವನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರಾಜಕೀಯ ಜೀವನವನ್ನು ಕೇವಲ ಅಧಿಕಾರ ಅಥವಾ ಸ್ಥಾನಮಾನಕ್ಕೆ ಸೀಮಿತಗೊಳಿಸದೆ, ಜನರೊಂದಿಗೆ ನೇರ ಸಂಪರ್ಕದಲ್ಲಿದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸುವುದೇ ಸಾರ್ವಜನಿಕ ಜೀವನದ ಮೂಲ ಉದ್ದೇಶ ಎಂಬ ನಿಲುವಿನೊಂದಿಗೆ ನಿಟುವಳ್ಳಿ ಪ್ರವೀಣ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ಬಾಲ್ಯ ಜೀವನ:
ನಿಟುವಳ್ಳಿಯ ಉದ್ಯಮಿ ಶಾಂತರಾಜ್ ಮತ್ತು ರೇಣುಕಮ್ಮ ದಂಪತಿ ಪುತ್ರರಾದ ನಿಟುವಳ್ಳಿ ಪ್ರವೀಣ್ 1990ರ ಅಕ್ಟೋಬರ್ 2 ರಂದು ಜನಿಸಿದರು. ಇವರಿಗೆ ಇಬ್ಬರು ಸಹೋದರರು. ಮಾಂಟೇಸರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ನಿಟುವಳ್ಳಿ ಪ್ರವೀಣ್ ಅವರು ವಿಶ್ವಚೇತನ ಸಂಸ್ಥೆಯಲ್ಲಿ ಏಳನೇ ತರಗತಿಯಿಂದ ಪಿಯುಸಿಯವರೆಗೆ ಓದಿದ್ದಾರೆ. ಮಾಗನೂರು ಬಸಪ್ಪ ಪದವಿ ಕಾಲೇಜಿನಲ್ಲಿ ಡಿಗ್ರಿ ಅಭ್ಯಾಸ ಮಾಡಿದ್ದಾರೆ.
ಪತ್ನಿ ಭಾಗ್ಯಶ್ರೀ ಪ್ರವೀಣ್ ಅವರು ಪತಿಯ ಸಾಮಾಜಿಕ ಕಾರ್ಯಗಳು, ಸಮಾಜಸೇವೆ, ರಾಜಕಾರಣಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಶಾಂತರಾಜ್ ಅವರು ನಿಟುವಳ್ಳಿಯ ಚಿದಂಬರ ದೇವಸ್ಥಾನದ ಬಳಿ ವಾಸವಿದ್ದ ಈ ಕುಟುಂಬ ಮೊದಲಿನಿಂದಲೂ ಲಿಂಗೈಕ್ಯ ಡಾ. ಶಾಮನೂರು ಶಿವಶಂಕರಪ್ಪರ ಕುಟುಂಬದ ಆಪ್ತವಲಯದಲ್ಲಿ ಗುರುತಿಸಿಕೊಂಡಿದೆ. ಶಾಂತರಾಜ್ ಅವರು 1994ರಿಂದಲೂ
ಶಾಮನೂರು ಶಿವಶಂಕರಪ್ಪರ ಒಡನಾಡಿಯಾಗಿದ್ದವರು. ಇನ್ನು ನಿಟುವಳ್ಳಿ ಪ್ರವೀಣ್ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಆಪ್ತರು.
ರೇಣುಕಮ್ಮ ಅವರು 2012ರಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯ 29ನೇ ವಾರ್ಡ್ ನಿಟುವಳ್ಳಿಯಿಂದ ಸ್ಪರ್ಧಿಸಿ ಬರೋಬ್ಬರಿ 990 ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದರು. ಜನಸೇವೆ, ಜನರ ನಾಡಿಮಿಡಿತ ಅರಿತಿದ್ದ ಶಾಂತರಾಜ್ ಅವರ ಕುಟುಂಬದ ಪರವಾಗಿ ಮತದಾರರು ಮತ ಚಲಾಯಿಸಿದ್ದೇ ಇದಕ್ಕೆ ಸಾಕ್ಷಿ ಎಂದರೆ ಅತಿಶಯೋಕ್ತಿಯಲ್ಲ.
ಪ್ರವೀಣ್ ಟ್ರೈಲರ್ಸ್, ಅಗ್ರಿಕಲ್ಚರ್ ಇಕ್ಯೂಪ್ ಮೆಂಟ್ಸ್ ಸೇರಿದಂತೆ ಇತರೆ ವಸ್ತುಗಳ ಮಾರಾಟ ಮಾಡುವ ವ್ಯಾಪಾರ ಹೊಂದಿದೆ ಶಾಂತರಾಜ್ ಕುಟುಂಬ ಪ್ರವೀಣ್ ಗ್ರೂಪ್ಸ್ ಸಂಸ್ಥೆ ನಡೆಸಿಕೊಂಡು ಬರುತ್ತಿದೆ. ಸಹೋದರರು ಹಾಗೂ ನಿಟುವಳ್ಳಿ ಪ್ರವೀಣ್ ಅವರು ಈ ಉದ್ಯಮ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಜನರ ನೋವಿನಲ್ಲಿ ಭಾಗಿಯಾಗುವ ಮನಸ್ಸು
ನಿಟುವಳ್ಳಿ ವಾರ್ಡ್ ನ ಯಾವುದೇ ಕುಟುಂಬದಲ್ಲಿ ಸಾವು ಸಂಭವಿಸಿದ ಸಂದರ್ಭದಲ್ಲಿ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳುವುದಷ್ಟೇ ಅಲ್ಲದೇ, ಸಾಧ್ಯವಾದಷ್ಟು ಆರ್ಥಿಕ ನೆರವು ನೀಡಿ ಸಂಕಷ್ಟದಲ್ಲಿರುವ ಕುಟುಂಬಗಳೊಂದಿಗೆ ನಿಲ್ಲುವ ಪ್ರಯತ್ನ ನಿಟುವಳ್ಳಿ ಪ್ರವೀಣ್ ಅವರದ್ದು. ಯಾರೇ ವ್ಯಕ್ತಿ ತಮ್ಮ ಸಮಸ್ಯೆ ಅಥವಾ ಅಗತ್ಯ ಹೇಳಿಕೊಂಡು ಬಂದರೂ ಸಾಧ್ಯವಾದಷ್ಟು ಬೇಗ ಸ್ಪಂದಿಸಿ ನೆರವು ನೀಡೋದು ಅವರ ಸಾರ್ವಜನಿಕ ಬದುಕಿನ ಪ್ರಮುಖ ಅಂಶ.
ನಿಟುವಳ್ಳಿ ಪ್ರವೀಣ್ ರಾಜಕೀಯ ಹಾದಿ:
ನಿಟುವಳ್ಳಿ ಪ್ರವೀಣ್ ಅವರು 2012ರಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದಾರೆ. ತನಗೆ ವಹಿಸಿದ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿದ್ದಾರೆ. 2015ರಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದ
ಅವರು ಎರಡನೇ ಅವಧಿಗೂ ಮುಂದುವರಿದಿದ್ದರು. ಆಬಳಿಕ ಎರಡು ಬಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ. 2013ರ ವಿಧಾನಸಭೆ, 2019ರ ಲೋಕಸಭೆ, 2023ರ ವಿಧಾನಸಭೆ, 2024ರ ಲೋಕಸಭೆ ಚುನಾವಣೆಯಲ್ಲಿ
ನಿಟುವಳ್ಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತಿ ಹೆಚ್ಚು ಮತಗಳು ಬರುವಲ್ಲಿ ಶ್ರಮಿಸಿದ ನಾಯಕರಲ್ಲಿ ನಿಟುವಳ್ಳಿ ಪ್ರವೀಣ್ ಸಹ ಒಬ್ಬರು.
ಈ ಭಾಗದ ಕಾಂಗ್ರೆಸ್ ಮುಖಂಡರಾದ ಆರ್. ಹೆಚ್. ನಾಗಭೂಷಣ್, ಆರ್. ಎಸ್. ಶೇಖರಪ್ಪ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ನಿಟುವಳ್ಳಿ ಪ್ರವೀಣ್ ಅವರು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ಸಂಘಟನೆಯಲ್ಲಿ ನಿಸ್ಸೀಮರು. ಯುವಕರು, ಹಿರಿಯರು, ಮಹಿಳೆಯರು ಸೇರಿದಂತೆ ಎಲ್ಲಾ ಸಮುದಾಯದ, ಧರ್ಮದವರ ಪ್ರೀತಿ ಸಂಪಾದನೆ ಮಾಡಿರುವ ಯುವ ನಾಯಕ.
ಯುವಕರಿಗೆ ಉದ್ಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ನೆರವು
ಇಂದಿನ ಯುವಜನತೆಗೆ ಉದ್ಯೋಗ ಮತ್ತು ಸ್ವಾವಲಂಬನೆ ಅತ್ಯಂತ ಅಗತ್ಯ. ಇದನ್ನು ಮನಗಂಡು ಯುವಕರಿಗೆ ಉದ್ಯೋಗಾವಕಾಶ ಹುಡುಕಿಕೊಡುವುದು ಹಾಗೂ ಸ್ವಾವಲಂಬಿ ಜೀವನ ನಡೆಸಲು ಅಗತ್ಯವಾದ ನೆರವು ನೀಡುವ ಕಾರ್ಯಗಳಲ್ಲಿ ನಿಟುವಳ್ಳಿ ಪ್ರವೀಣ್ ಅವರು ತೊಡಗಿಸಿಕೊಂಡಿದ್ದಾರೆ. ಆರ್ಥಿಕ ಸಮಸ್ಯೆಯಿಂದ ವಿದ್ಯಾಭ್ಯಾಸಕ್ಕೆ ತೊಂದರೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ಕೈಲಾದ ಮಟ್ಟಿಗೆ ಶೈಕ್ಷಣಿಕ ನೆರವು ನೀಡುವ ಮೂಲಕ ಅವರ ವಿದ್ಯಾಭ್ಯಾಸ ಮುಂದುವರಿಯಲು ಸಹಕಾರ ನೀಡುತ್ತಿದ್ದಾರೆ.
ಎಸ್.ಎಸ್. ಮಲ್ಲಣ್ಣರ ಆಪ್ತರಾಗಿ ಪಕ್ಷ ಸಂಘಟನೆಯಲ್ಲಿ ಸಕ್ರಿಯ:
ನಿಟುವಳ್ಳಿ ಪ್ರವೀಣ್ ಅವರು ಸಚಿವ ಹಾಗೂ ಕಾಂಗ್ರೆಸ್ ನಾಯಕ ಎಸ್.ಎಸ್. ಮಲ್ಲಿಕಾರ್ಜುನ್ ಅವರೊಂದಿಗೆ ಆಪ್ತರು. ಯುವ ಮುಖಂಡರಾಗಿ ಪಕ್ಷದ ವಿವಿಧ ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಪಕ್ಷದಿಂದ ಯಾವುದೇ ಜವಾಬ್ದಾರಿ ವಹಿಸಿದರೂ ಅದನ್ನು ನಿಷ್ಠೆಯಿಂದ ನಿರ್ವಹಿಸುವುದು, ಕಾಂಗ್ರೆಸ್ ಪಕ್ಷದ ಸಭೆಗಳು, ಪ್ರತಿಭಟನೆಗಳು ಹಾಗೂ ವಿವಿಧ ಸಂಘಟನಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಅವರ ರಾಜಕೀಯ ಕಾರ್ಯಶೈಲಿಯ ಭಾಗ. ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನಾ ಚಟುವಟಿಕೆಗಳು ಮತ್ತು ಚುನಾವಣಾ ರಾಜಕೀಯದಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ಎಲ್ಲಾ ಹಂತಗಳಲ್ಲಿ ಕೆಲಸ ಮಾಡುತ್ತಾರೆ.
ರಾಜಕೀಯದಲ್ಲಿ ದೊಡ್ಡ ಹುದ್ದೆಗಿಂತಲೂ ಜನರೊಂದಿಗೆ ಇರುವ ನೇರ ಸಂಪರ್ಕವೇ ಮುಖ್ಯ ಎಂಬುದು ನಿಟುವಳ್ಳಿ ಪ್ರವೀಣ್ ಅವರ ಮುಖ್ಯ ಆಶಯ. ತಮ್ಮ ಬಳಿ ತಂದ ಸಮಸ್ಯೆಗಳಿಗೆ ಸಾಧ್ಯವಾದಷ್ಟು ಸ್ಪಂದಿಸುವ ಮೂಲಕ “ಜನರ ನಡುವೆ ಇರುವ ನಾಯಕ” ಎಂಬ ರೀತಿಯಲ್ಲಿ ಬಾಂಧವ್ಯ ಮತ್ತು ಸಂಪರ್ಕ ಹೊಂದಿರುವ ಯುವ ನೇತಾರ.
ಹಾಲುಮತ ಮಹಾಸಭಾ ಜಿಲ್ಲಾ ಸಂಚಾಲಕ:
ನಿಟುವಳ್ಳಿ ಪ್ರವೀಣ್ ಅವರು ದಾವಣಗೆರೆ ಹಾಲುಮತ ಮಹಾಸಭಾದ ಜಿಲ್ಲಾ ಸಂಚಾಲಕರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಮಾತ್ರವಲ್ಲ, ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ನಿಟುವಳ್ಳಿ ಪ್ರವೀಣ್ ಅವರು ಸಮಾಜಸೇವೆಗೂ ಜೈ, ಬಡವರು, ದೀನದಲಿತರು, ಸಂಕಷ್ಟದವರಿಗೆ ನೆರವಾಗಲು ಸೈ ಎನ್ನೋದು ವಿಶಿಷ್ಟ ಗುಣಗಳಲ್ಲಿ ಒಂದು.
ನಿಟುವಳ್ಳಿ ಪ್ರವೀಣ್ ಏನಂತಾರೆ?
ನಾನು ರಾಜಕಾರಣಕ್ಕೆ ಬರಲು ನನ್ನ ತಂದೆ ಶಾಂತರಾಜ್ ಅವರೇ ಪ್ರಮುಖ ಕಾರಣ. ಮೊದಲಿನಿಂದಲೂ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿದ್ದವರು. ತಾಯಿಯೂ ಸಹ ಮಹಾನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿ ಜನಸೇವೆ ಮಾಡಿದ್ದಾರೆ. ಶಾಮನೂರು ಶಿವಶಂಕರಪ್ಪಾಜಿ, ಎಸ್. ಎಸ್. ಮಲ್ಲಿಕಾರ್ಜನ್ ಅವರ ಅಭಿವೃದ್ಧಿಪರ, ರಾಜಕೀಯ ಚಿಂತನೆ, ಬಡವರ ಪರ ಕಾಳಜಿಯೇ ರಾಜಕಾರಣಕ್ಕೆ ಪ್ರೇರಣೆ.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಮಾರ್ಗದರ್ಶನದಲ್ಲಿ, ಮಲ್ಲಿಕಾರ್ಜುನ್ ಅವರ ಆಶೀರ್ವಾದದೊಂದಿಗೆ ಮುನ್ನಡೆಯುತ್ತಿದ್ದೇನೆ. ಅವಕಾಶ ಕೊಟ್ಟರೆ ನನ್ನ ಮೇಲಿನ ನಂಬಿಕೆ ಹುಸಿಯಾಗದಂತೆ, ಸಮರ್ಥವಾಗಿ ನಿಭಾಯಿಸುತ್ತೇನೆ. ಶಾಸಕ ಸಮರ್ಥ್ ಶಾಮನೂರು ಅವರ ಯುವನಾಯಕತ್ವದಲ್ಲಿ ಮುನ್ನಡೆಯುತ್ತೇನೆ ಎನ್ನುತ್ತಾರೆ ನಿಟುವಳ್ಳಿ ಪ್ರವೀಣ್.
36ನೇ ಹುಟ್ಟುಹಬ್ಬ: ಸೇವೆಯ ಪಯಣಕ್ಕೆ ಮತ್ತೊಂದು ಹೆಜ್ಜೆ
36ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ನಿಟುವಳ್ಳಿ ಪ್ರವೀಣ್ ಅವರ ಮುಂದಿನ ಸಾರ್ವಜನಿಕ ಜೀವನದ ಬಗ್ಗೆ ಅವರ ಬೆಂಬಲಿಗರು ಹಾಗೂ ಹಿತೈಷಿಗಳು ಶುಭ ಹಾರೈಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯುವಜನರನ್ನು ಸಂಘಟಿಸುವುದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು, ವಿದ್ಯಾರ್ಥಿಗಳು ಮತ್ತು ಆರ್ಥಿಕವಾಗಿ ಅಗತ್ಯವಿರುವ ಕುಟುಂಬಗಳಿಗೆ ನೆರವಾಗುವುದು ಹಾಗೂ ಪಕ್ಷದ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವ ಸಂಕಲ್ಪದೊಂದಿಗೆ ನಿಟುವಳ್ಳಿ ಪ್ರವೀಣ್ ಅವರು ಮುನ್ನಡೆಯುತ್ತಿದ್ದಾರೆ.
ಜನರ ನೋವಿಗೆ ಸ್ಪಂದಿಸುವ ಹೃದಯ, ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವ ಮನೋಭಾವ ಮತ್ತು ಯುವಜನರೊಂದಿಗೆ ನಿರಂತರ ಸಂಪರ್ಕ. ಇವೇ ನಿಟುವಳ್ಳಿ ಪ್ರವೀಣ್ ಅವರ ಸಾರ್ವಜನಿಕ ಬದುಕಿನ ಪ್ರಮುಖ ಅಂಶಗಳು.
“ನಮ್ಮ ನಿಟುವಳ್ಳಿಯ ಹುಡುಗ ಈ ಮಟ್ಟಕ್ಕೆ ಬೆಳೆದು ಜನರ ಸೇವೆ ಮಾಡ್ತಿರೋದು ನಮಗೆ ಹೆಮ್ಮೆ. ಯಾವುದೇ ಕಷ್ಟ ಅಂದರೂ ತಕ್ಷಣ ಓಡಿ ಬರ್ತಾನೆ, ನಮಗೆ ಇವನ ಮೇಲೆ ತುಂಬಾ ನಂಬಿಕೆ ಇದೆ” ಎನ್ನುತ್ತಾರೆ ನಿಟುವಳ್ಳಿಯ ಜನರು. ಇನ್ನು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದೇ ಆದಲ್ಲಿ ಗೆಲುವು ಖಚಿತ.
36ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ನಿಟುವಳ್ಳಿ ಪ್ರವೀಣ್ ಅವರ ಮುಂದಿನ ಸಾರ್ವಜನಿಕ ಜೀವನದ ಬಗ್ಗೆ ಅವರ ಬೆಂಬಲಿಗರು ಹಾಗೂ ಹಿತೈಷಿಗಳು ಶುಭ ಹಾರೈಸುತ್ತಿದ್ದಾರೆ. ಈ ಯುವ ನಾಯಕನದ್ದು ಅಕ್ಟೋಬರ್ 2ರಂದು ಜನುಮದಿನ. ಭವಿಷ್ಯದಲ್ಲಿ ರಾಜಕೀಯದಲ್ಲಿ ಮತ್ತಷ್ಟು ಉತ್ತಮ ಅವಕಾಶಗಳು ದೊರೆಯಲಿ. ಜನಸೇವೆ ಮಾಡಲು ಮತ್ತಷ್ಟು ಅವಕಾಶಗಳು ಸಿಗಲಿ. ಆರೋಗ್ಯ, ಉಜ್ವಲ ಭವಿಷ್ಯ, ಐಶ್ವರ್ಯ ನೀಡಲೆಂದು ಪ್ರಾರ್ಥಿಸುತ್ತೇವೆಂದು ನಿಟುವಳ್ಳಿಯ ಕಾಂಗ್ರೆಸ್ ಮುಖಂಡರು, ಅಭಿಮಾನಿಗಳು, ಸ್ನೇಹಿತರು, ಹಿತೈಷಿಗಳು ಹಾರೈಸಿದ್ದಾರೆ.
ನಿಟುವಳ್ಳಿ ಪ್ರವೀಣ್ ಸ್ನೇಹ ಬಳಗ, ನಿಟುವಳ್ಳಿ ದಾವಣಗೆರೆ
- Congress Davangere
- Davangere News
- Davangere Politics
- Nituvalli Praveen
- Nituvalli Praveen Biography
- Nituvalli Praveen Profile
- Shamanur Shivashankarappa
- Social Worker Davangere
- SS Mallikarjun
- Youth Congress Leader
- ಎಸ್. ಎಸ್. ಮಲ್ಲಿಕಾರ್ಜುನ್
- ದಾವಣಗೆರೆ ಮಹಾನಗರ ಪಾಲಿಕೆ
- ದಾವಣಗೆರೆ ರಾಜಕೀಯ
- ದಾವಣಗೆರೆ ಸುದ್ದಿ
- ನಿಟುವಳ್ಳಿ ಪ್ರವೀಣ್
- ನಿಟುವಳ್ಳಿ ಸುದ್ದಿ
- ಯುವ ಕಾಂಗ್ರೆಸ್
- ಶಾಮನೂರು ಶಿವಶಂಕರಪ್ಪ
- ಸಮಾಜ ಸೇವೆ.
- ಹಾಲುಮತ ಮಹಾಸಭಾ


















Leave a comment