ಮೈಸೂರು/ಮಂಗಳೂರು: ರಾಜ್ಯಾದ್ಯಂತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಪ್ರಸಿದ್ಧ ಹೋಟೆಲ್‌ಗಳು, ರೆಸಾರ್ಟ್‌ಗಳು ಹಾಗೂ ಸರ್ಕಾರಿ ಸಂಕೀರ್ಣಗಳ ಮೇಲೆ ದಿಢೀರ್ ದಾಳಿ ನಡೆಸಿ ಅಪಾರ ಪ್ರಮಾಣದ ಅವಧಿ ಮುಗಿದ (Expired) ಮತ್ತು ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡಿದೆ.
ರಿಯೋ ಮೆರಿಡಿಯನ್ ಹೋಟೆಲ್ (Rio Meridian Hotel): 9 ಕೆಜಿ ಅವಧಿ ಮುಗಿದ ಚಿಕನ್ ವಶ.
ಗ್ರಾಂಡ್ ಮರ್ಕ್ಯೂರಿ ಹೋಟೆಲ್ (Grand Mercure Hotel): 68 ಕೆಜಿ ಕಳಪೆ ಮಾಂಸ ಜಪ್ತಿ.
ಕ್ಯೂ ಸ್ಟಾರ್ ಹೋಟೆಲ್ (Q Star Hotel): 4 ಕೆಜಿ ದಿನಾಂಕ ಮುಗಿದ ಅಣಬೆ (Mushrooms) ವಶಕ್ಕೆ.
ಮೈಸೂರು ಮತ್ತು ನಂಜನಗೂಡು ತಾಲೂಕಿನ 3 ರೆಸಾರ್ಟ್‌ಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಸುಮಾರು 16 ಕೆಜಿ ಹಾಳಾದ ಆಹಾರ ಸಾಮಗ್ರಿಗಳನ್ನು ನಾಶಪಡಿಸಲಾಗಿದೆ.
ಸರ್ಕಾರಿ ಕ್ಯಾಂಟೀನ್‌ಗಳು, ವಿಕಾಸ ಸೌಧಕ್ಕೂ ಶಾಕ್:
ಈ ಪರಿಶೀಲನೆ ಕೇವಲ ಖಾಸಗಿ ಹೋಟೆಲ್‌ಗಳಿಗೆ ಸೀಮಿತವಾಗಿಲ್ಲ. ಬೆಂಗಳೂರಿನ ವಿಧಾನ ಸೌಧ, ವಿಕಾಸ ಸೌಧ ಹಾಗೂ ಆರೋಗ್ಯ ಸೌಧ ಆವರಣದಲ್ಲಿರುವ ಭೋಜನ ಶಾಲೆಗಳು, ಇಂದಿರಾ ಕ್ಯಾಂಟೀನ್‌ಗಳು ಮತ್ತು ಕ್ವಿಕ್-ಕಾಮರ್ಸ್ ಗೋದಾಮುಗಳಲ್ಲೂ ಅಸ್ವಚ್ಛತೆ ಹಾಗೂ ಕ್ರಿಮಿಕೀಟಗಳ ಹಾವಳಿ ಪತ್ತೆಯಾಗಿದ್ದು, ನೋಟಿಸ್ ನೀಡಲಾಗಿದೆ.
- Expired Meat Seized Mysuru
- Food Safety and Standards Act 2006
- FSSAI ಕರ್ನಾಟಕ
- Grand Mercure Mysuru
- Karnataka Food Safety Raid
- Karnataka FSSAI News
- Mangaluru KFC Raided
- Mysuru Hotel Raids
- Rio Meridian Hotel
- Vidhana Soudha Canteen Inspection
- ಆಹಾರ ಸುರಕ್ಷತೆ ದಾಳಿ
- ಕರ್ನಾಟಕ ಆಹಾರ ಇಲಾಖೆ
- ಕೊಳೆತ ಮಾಂಸ ಜಪ್ತಿ
- ಗ್ರಾಂಡ್ ಮರ್ಕ್ಯೂರಿ ಮೈಸೂರು
- ಮಂಗಳೂರು ಕೆಎಫ್‌ಸಿ ದಾಳಿ
- ಮೈಸೂರು ಹೋಟೆಲ್ ರೇಡ್
- ರಿಯೋ ಮೆರಿಡಿಯನ್
- ವಿಕಾಸ ಸೌಧ ಕ್ಯಾಂಟೀನ್ ರೇಡ್





Leave a comment