Home ಕ್ರೈಂ ನ್ಯೂಸ್ ರೇಸಿಂಗ್ ಕಿಡಿಗೇಡಿಗಳಿಗೆ ಪಾಠ ಕಲಿಸಲು ಹೋದ ಮಹಿಳಾ ಸಬ್‌ಇನ್ಸ್‌ಪೆಕ್ಟರ್‌ ಕೆನ್ನೆಗೆ ಹೊಡೆದ ಆರೋಪಿ ಜೈಲಿಗೆ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ರೇಸಿಂಗ್ ಕಿಡಿಗೇಡಿಗಳಿಗೆ ಪಾಠ ಕಲಿಸಲು ಹೋದ ಮಹಿಳಾ ಸಬ್‌ಇನ್ಸ್‌ಪೆಕ್ಟರ್‌ ಕೆನ್ನೆಗೆ ಹೊಡೆದ ಆರೋಪಿ ಜೈಲಿಗೆ!

Share
ಮಹಿಳಾ
Share

ಪಟ್ನಾ: ಬಿಹಾರದ ರಾಜಧಾನಿ ಪಟ್ನಾದಲ್ಲಿ ಕರ್ತವ್ಯ ನಿರತ ಮಹಿಳಾ ಪೋಲಿಸ್ ಅಧಿಕಾರಿಯೊಬ್ಬರಿಗೆ ಸಾರ್ವಜನಿಕ ರಸ್ತೆಯಲ್ಲೇ ಯುವಕನೊಬ್ಬ ಕೆನ್ನೆಗೆ ಹೊಡೆದಿರುವ ಆಘಾತಕಾರಿ ಘಟನೆ ನಡೆದಿದ್ದು, ಇದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಬುಧವಾರ (ಸೆಪ್ಟೆಂಬರ್ 30) ರಾತ್ರಿ ಸುಮಾರು 8:30 ರ ಸುಮಾರಿಗೆ ಸಬ್‌ಇನ್ಸ್‌ಪೆಕ್ಟರ್ (SI) ಪ್ರಿಯಾಂಕಾ ಆನಂದ್ ಹಾಗೂ ಅವರ ನಾಲ್ವರು ಮಹಿಳಾ ಸಹೋದ್ಯೋಗಿಗಳು ಸ್ಕೂಟರ್‌ನಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಮೂವರು ಯುವಕರು ಅವರನ್ನು ನೋಡಿ ಚೇಷ್ಟೆ ಹಾಗೂ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. ಇದನ್ನು ಪ್ರಶ್ನಿಸಲು ಹಾಗೂ ಅವರನ್ನು ತಡೆಯಲು ಎಸ್‌ಐ ಪ್ರಿಯಾಂಕಾ ಮುಂದಾದಾಗ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ.

ವೈರಲ್ ವೀಡಿಯೊದಲ್ಲಿ ಅಧಿಕಾರಿ ಮೊದಲು ಯುವಕನಿಗೆ ಹೊಡೆಯಲು ಯತ್ನಿಸಿದಂತೆ ಕಂಡರೂ, ತಕ್ಷಣವೇ ಆ ಯುವಕ ಪ್ರತಿಯಾಗಿ ಮಹಿಳಾ ಪೊಲೀಸ್ ಅಧಿಕಾರಿಯ ಕೆನ್ನೆಗೆ ಬಾರಿಸಿದ್ದಾನೆ. ನಂತರ ಘಟನಾ ಸ್ಥಳದಿಂದ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.

ಸಿಟಿಟಿವಿ ಹಾಗೂ ವೈರಲ್ ವೀಡಿಯೊ ಪರಿಶೀಲಿಸಿದ ಪೋಲಿಸರು ಪ್ರದೀಪ್ ಕುಮಾರ್ (22) ಎಂಬ ಆರೋಪಿಯನ್ನು ಬಂಧಿಸಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ

Share

Leave a comment

Leave a Reply

Your email address will not be published. Required fields are marked *

Related Articles