SUDDIKSHANA KANNADA NEWS/ DAVANAGERE/ DATE:06-01-2025
ಮುಂಬೈ: ಟೀಂ ಇಂಡಿಯಾ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಪರ ಬಾಲಿವುಡ್ ನಟಿ ವಿದ್ಯಾ ಬಾಲನ್ ಬ್ಯಾಟ್ ಬೀಸಿದ್ದಾರೆ.
ರೋಹಿತ್ ಶರ್ಮಾಗೆ ವಿದ್ಯಾ ಬಾಲನ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಧೈರ್ಯ ತುಂಬಿದ್ದಾರೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದೆ. ಆದ್ರೆ, ಇದನ್ನು ಎಕ್ಸ್ ಬಳಕೆದಾರರು ಇದೊಂದು ಪಿಆರ್ ಸ್ಟಂಟ್ ಎಂದು ಕರೆದಿದ್ದಾರೆ.
ಭಾರತದ ಟೆಸ್ಟ್ ಮತ್ತು ಏಕದಿನ ಪಂದ್ಯಗಳ ನಾಯಕ ರೋಹಿತ್ ಶರ್ಮಾ ಅವರು ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ 5 ನೇ ಮತ್ತು ಅಂತಿಮ ಪಂದ್ಯದಿಂದ ಹೊರಗುಳಿಯುವ ನಿರ್ಧಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದ ನಂತರ ಚರ್ಚೆಗೆ ಕಾರಣವಾಗಿದೆ. ಪಂದ್ಯಕ್ಕೆ ಹೋಗುವ ಅತ್ಯುತ್ತಮ ಫಾರ್ಮ್ನಲ್ಲಿಲ್ಲದ ರೋಹಿತ್, ಆಡುವ ಹನ್ನೊಂದರ ಬಳಗದಲ್ಲಿರಲಿಲ್ಲ. ರೋಹಿತ್ ಶರ್ಮಾ ಬದಲಿಗೆ ಶುಭಮನ್ ಗಿಲ್ ತಂಡದಲ್ಲಿದ್ದರು. ಈ ನಡುವೆ ರೋಹಿತ್ ಶರ್ಮಾ ಮನಸ್ಸು ಬಿಚ್ಚಿ ಮಾತನಾಡಿದ್ದರು.
ಕೆಲವರು ರೋಹಿತ್ ಶರ್ಮಾ ಪರ ಮಾತನಾಡಿದ್ದರೆ, ಮತ್ತೆ ಕೆಲವರು ಟೀಕಿಸಿದ್ದಾರೆ. “ರೋಹಿತ್ ಶರ್ಮಾ, ಎಂತಹ ಸೂಪರ್ಸ್ಟಾರ್ !! ವಿರಾಮ ತೆಗೆದುಕೊಳ್ಳಲು ಮತ್ತು ನಿಮ್ಮ ಉಸಿರನ್ನು ಹಿಡಿಯಲು ಧೈರ್ಯ ಬೇಕು. ನಿಮಗೆ ಹೆಚ್ಚಿನ ಶಕ್ತಿ … ಗೌರವ !!” ಸಿಗಲೇಬೇಕೆಂದು ವಿದ್ಯಾ ಬಾಲನ್ ಅವರ ಪೋಸ್ಟ್ ನಲ್ಲಿದೆ.