ಕಾನ್ಪುರ: ಉತ್ತರ ಪ್ರದೇಶದ ಉನ್ನಾವೊದಲ್ಲಿ ಬಿಜೆಪಿ ನಾಯಕ ಹಾಗೂ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಅರುಣ್ ಸಿಂಗ್ ಅವರ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದ ಶಿವ ಪ್ರತಾಪ್ ಸಿಂಗ್ ಎಂಬವರು, ಕಾನ್ಪುರದಲ್ಲಿರುವ ತಮ್ಮ ವಿವಾಹಿತ ಪ್ರೇಮಿಯನ್ನು ಭೇಟಿಯಾದ ಕೆಲವೇ ಗಂಟೆಗಳಲ್ಲಿ ಕೊಠಡಿಯೊಂದರಲ್ಲಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ.
ಮೃತನ ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ, ಬದಲಿಗೆ ಪ್ರೇಯಮಿಯ ಕುಟುಂಬಸ್ಥರೇ ಪೂರ್ವಯೋಜಿತವಾಗಿ ಹತ್ಯೆ ಮಾಡಿ ನೇತುಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸುಮಾರು ಒಂದು ವರ್ಷದ ಹಿಂದೆ ಫೇಸ್ಬುಕ್ ಮೂಲಕ ಪರಿಚಯವಾಗಿದ್ದ ಇಬ್ಬರ ನಡುವೆ ಪ್ರೇಮ ಸಂಬಂಧವಿತ್ತು. ಮಂಗಳವಾರ ರಾತ್ರಿ ಪ್ರೇಯಮಿಯನ್ನು ಭೇಟಿಯಾಗಲು ಆಕೆಯ ಮನೆಗೆ ತೆರಳಿದ್ದಾಗ ಆಕೆಯ ಬಾವಂದಿ ಇಬ್ಬರನ್ನು ಒಟ್ಟಿಗೆ ಸಿಕ್ಕಿಹಾಕಿಕೊಂಡಿದ್ದಾರೆ. ಬಳಿಕ ಶಿವಪ್ರತಾಪ್ ಅವರನ್ನು ಕೊಠಡಿಯಲ್ಲಿ ಕೂಡಿಹಾಕಲಾಗಿದ್ದು, ಕೆಲವೇ ಸಮಯದಲ್ಲಿ ಅವರು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಘಟನೆಯ ಹಿನ್ನೆಲೆ: ಫೇಸ್ಬುಕ್ ಮೂಲಕ ಪರಿಚಯವಾದ ವಿವಾಹಿತ ಮಹಿಳೆಯನ್ನು ಭೇಟಿಯಾಗಲು ಹೋದ ಚಾಲಕ ಶಿವಪ್ರತಾಪ್ ಸಿಂಗ್ ಕೊಠಡಿಯಲ್ಲಿ ಮೃತರಾಗಿ ಪತ್ತೆಯಾಗಿದ್ದಾರೆ.
ಕುಟುಂಬದ ಗಂಭೀರ ಆರೋಪ: ಇದು ಆತ್ಮಹತ್ಯೆಯಲ್ಲ, ಯುವತಿಯ ಕುಟುಂಬಸ್ಥರೇ (ಬಾವ, ಮಾವ ಹಾಗೂ ಇತರರು) ಕೊಲೆ ಮಾಡಿ ಶವವನ್ನು ನೇತುಹಾಕಿದ್ದಾರೆ ಎಂದು ಮೃತನ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.
ಪೊಲೀಸ್ ತನಿಖೆ ಹಾಗೂ ಪ್ರಕರಣ ದಾಖಲು: ಮೃತನ ಕುಟುಂಬದ ದೂರಿನ ಮೇರೆಗೆ ಮಹಿಳೆ, ಆಕೆಯ ಬಾವ, ಮಾವ ಮತ್ತು ನಾದಿನಿಯರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ಮಹಿಳೆ ಹಾಗೂ ಆಕೆಯ ಬಾವನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ಯುವತಿಯ ತಂದೆ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಆಗಿ ಹಾಗೂ ಪತಿ ರೆವೆನ್ಯೂ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದು, ಈ ಹೈ-ಪ್ರೊಫೈಲ್ ಪ್ರೇಮ ಪ್ರಕರಣ ಹಾಗೂ ಕೊಲೆ ಆರೋಪವು ಸ್ಥಳದಲ್ಲಿ ತೀವ್ರ ಸಂಚಲನ ಮೂಡಿಸಿದೆ.





Leave a comment