ಮುಂಬೈ/ಅಮೆರಿಕ: ಪ್ರಸಿದ್ಧ ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಯ ಹೊಣೆ ಹೊತ್ತಿದ್ದ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಸಕ್ರಿಯ ಸಹಚರ ಹ್ಯಾರಿ ಬಾಕ್ಸರ್‌ನನ್ನು ಅಮೆರಿಕದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಅಮೆರಿಕದಲ್ಲಿದ್ದುಕೊಂಡೇ ಬಿಷ್ಣೋಯಿ ಗ್ಯಾಂಗ್‌ನ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದ ಈತನ ವಿರುದ್ಧ ಕೊಲೆ ಹಾಗೂ ಭೀದಿಸಿ ಹಣ ವಸೂಲಿ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಕಳೆದ ಫೆಬ್ರವರಿಯಲ್ಲಿ ರೋಹಿತ್ ಶೆಟ್ಟಿ ಅವರ ಮುಂಬೈ ಮನೆ ಮೇಲೆ ನಡೆದ ಗುಂಡಿನ ದಾಳಿಯ ನಂತರ, ಹ್ಯಾರಿ ಬಾಕ್ಸರ್ ಸಾಮಾಜಿಕ ಜಾಲತಾಣಗಳು ಹಾಗೂ ಆಡಿಯೋ ಸಂದೇಶಗಳ ಮೂಲಕ ಬಾಲಿವುಡ್‌ನ ಹಲವು ಪ್ರಮುಖ ವ್ಯಕ್ತಿಗಳಿಗೆ ಬೆದರಿಕೆ ಹಾಕಿದ್ದನು.
ಈ ದಾಳಿಯು ಗ್ಯಾಂಗ್‌ನ ಚಟುವಟಿಕೆಗಳಿಗೆ ಅಡ್ಡಿಪಡಿಸದಂತೆ ನೀಡಿದ “ಸಣ್ಣ ಟ್ರೈಲರ್” ಎಂದು ಆಡಿಯೋ ಸಂದೇಶದಲ್ಲಿ ಎಚ್ಚರಿಸಲಾಗಿತ್ತು. ಭಾರತೀಯ ತನಿಖಾ ಸಂಸ್ಥೆಗಳ ಮಾಹಿತಿಯ ಆಧಾರದ ಮೇಲೆ ಅಮೆರಿಕದ ಕಾನೂನು ಜಾರಿ ಸಂಸ್ಥೆಗಳು ಕಾರ್ಯಾಚರಣೆ ನಡೆಸಿ ಈತನನ್ನು ವಶಕ್ಕೆ ಪಡೆದುಕೊಂಡಿವೆ.
ಅಮೆರಿಕದಲ್ಲಿ ಬಂಧನ: ಅಮೆರಿಕದಿಂದಲೇ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನೆಟ್‌ವರ್ಕ್ ನಡೆಸುತ್ತಿದ್ದ ಹ್ಯಾರಿ ಬಾಕ್ಸರ್‌ನನ್ನು ಯುಎಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ರೋಹಿತ್ ಶೆಟ್ಟಿ ಮನೆ ಮೇಲಿನ ದಾಳಿ: ಫೆಬ್ರವರಿಯಲ್ಲಿ ನಿರ್ದೇಶಕ ರೋಹಿತ್ ಶೆಟ್ಟಿ ಮನೆ ಹೊರಗೆ ನಡೆದ ಗುಂಡಿನ ದಾಳಿಯ ಹೊಣೆಯನ್ನು ಹ್ಯಾರಿ ಬಾಕ್ಸರ್ ಹಾಗೂ ಆತನ ಸಹಚರರು ಹೊತ್ತುಕೊಂಡಿದ್ದರು.
ಸರಣಿ ಬೆದರಿಕೆಗಳು: ಬಾಲಿವುಡ್ ಮಂದಿಗೆ ಆಡಿಯೋ ಹಾಗೂ ಸೋಶಿಯಲ್ ಮೀಡಿಯಾ ಮೂಲಕ ಸಾಲು ಸಾಲು ಖಂಡಣಿ ಕರೆ ಹಾಗೂ ಬೆದರಿಕೆ ಸಂದೇಶಗಳನ್ನು ಕಳುಹಿಸಲಾಗಿತ್ತು.
ಅಂತರರಾಷ್ಟ್ರೀಯ ಕಾರ್ಯಾಚರಣೆ: ಇತ್ತೀಚೆಗಷ್ಟೇ ಹಿಮಾಂಶು ಭೌ ಹಾಗೂ ನೀರಜ್ ಫರೀದ್‌ಪುರಿಯಾ ಎಂಬ ಗ್ಯಾಂಗ್‌ಸ್ಟಾಗಳನ್ನು ಅಮೆರಿಕದಲ್ಲಿ ವಶಕ್ಕೆ ಪಡೆಯಲಾಗಿದ್ದು, ಅದರ ಬೆನ್ನಲ್ಲೇ ಈ ಪ್ರಮುಖ ಬಂಧನವಾಗಿದೆ.
ವಿದೇಶಗಳಲ್ಲಿ ಕುಳಿತು ಭಾರತದಲ್ಲಿ ಅಪರಾಧ ಎಸಗುತ್ತಿರುವ ಗ್ಯಾಂಗ್‌ಸ್ಟರ್‌ಗಳ ವಿರುದ್ಧ ಭಾರತ ಮತ್ತು ಅಮೆರಿಕ ತನಿಖಾ ಸಂಸ್ಥೆಗಳು ಜಂಟಿಯಾಗಿ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಹ್ಯಾರಿ ಬಾಕ್ಸರ್‌ನನ್ನು ಭಾರತಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗುವ ಸಾಧ್ಯತೆಯಿದೆ.





Leave a comment