Home ದಾವಣಗೆರೆ 38 ಶಾಸಕರನ್ನು ಹೊಂದಿ ಮುಖ್ಯಮಂತ್ರಿ ಪಡೆದ ಪಕ್ಷ ನಮ್ಮದು, ಕಾಂಗ್ರೆಸ್ ಬಿಟ್ಟು ಗೆದ್ದು ಬರಲಿ ನೋಡೋಣ: ಪ್ರಿಯಾಂಕ್ ಖರ್ಗೆಗೆ ಹೆಚ್ ಡಿಕೆ ನೇರ ಸವಾಲ್!
ದಾವಣಗೆರೆನವದೆಹಲಿಬೆಂಗಳೂರು

38 ಶಾಸಕರನ್ನು ಹೊಂದಿ ಮುಖ್ಯಮಂತ್ರಿ ಪಡೆದ ಪಕ್ಷ ನಮ್ಮದು, ಕಾಂಗ್ರೆಸ್ ಬಿಟ್ಟು ಗೆದ್ದು ಬರಲಿ ನೋಡೋಣ: ಪ್ರಿಯಾಂಕ್ ಖರ್ಗೆಗೆ ಹೆಚ್ ಡಿಕೆ ನೇರ ಸವಾಲ್!

Share
ಪ್ರಿಯಾಂಕ್ ಖರ್ಗೆ
Share

ಬೆಂಗಳೂರು: ಜೆಡಿಎಸ್ 38ರಿಂದ 40 ಶಾಸಕರನ್ನು ಹೊಂದಿದಾಗಲೇ ಜಾತ್ಯಾತೀತ ಜನತಾದಳ ಪಕ್ಷವು ಮುಖ್ಯಮಂತ್ರಿ ಸ್ಥಾನ ಪಡೆದಿದೆ. ಪ್ರಿಯಾಂಕ್ ಖರ್ಗೆ ಗೆದ್ದಿರುವುದು ಕಾಂಗ್ರೆಸ್ ನೆರಳಿನಿಂದ. ಈ ಪಕ್ಷ ಬಿಟ್ಟು ಗೆದ್ದು ಬರಲಿ ನೋಡೋಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಬಿಟ್ಟು ಸ್ಪರ್ಧೆ ಮಾಡಿ ಗೆದ್ದು ಬರಲಿ. ಆಮೇಲೆ ಮಾತನಾಡಲಿ. ನಾಲ್ಕೈದು ಜನರನ್ನು ಗೆಲ್ಲಿಸುವುದು ಇರಲಿ. ಆ ಮಂತ್ರಿಯೊಬ್ಬ ಗೆದ್ದು ಬರಲಿ ಎಂದು ಪ್ರಿಯಾಂಕ್ ಖರ್ಗೆಗೆ ಸವಾಲು ಹಾಕಿದರು.

ನೂರು ಶಾಸಕರನ್ನು ಹೊಂದಲು ಆಗಲು ಆಗಿಲ್ಲ ಎಂದು ಹೇಳಿದ್ದಾರೆ. ನಮ್ಮ ಪಕ್ಷವು ಮುಂಬರುವ ಚುನಾವಣೆಯಲ್ಲಿ ತನ್ನ ಶಕ್ತಿ ಏನೆಂಬುದನ್ನು ತೋರಿಸುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು.

ಜೆಡಿಎಸ್ ಪಕ್ಷ ಮುಗಿಸುತ್ತೇವೆಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಇದು ಆಗುವುದಿಲ್ಲ. ಪಕ್ಷಕ್ಕೆ ಕಾಂಗ್ರೆಸ್ ಪಕ್ಷದಿಂದ ಬೇಸತ್ತು ಬರುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಇದು ಮತ್ತಷ್ಟು ಪರಿಣಾಮಕಾರಿಯಾಗಲಿದೆ ಎಂದು ಕುಮಾರಸ್ವಾಮಿ ಹೇಳಿದರು.

Share

Leave a comment

Leave a Reply

Your email address will not be published. Required fields are marked *

Related Articles