ಬಂದಾ: ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ಪೋಷಕರು ಗದರಿಸಿದರೆಂಬ ಕಾರಣಕ್ಕೆ 18 ವರ್ಷದ ಯುವತಿಯೊಬ್ಬಳು ಯಮುನಾ ನದಿಗೆ ಹಾರಿ ಆತ್ಮಹತ್ಯೆಗೆತ್ನಿಸಿರುವ ಆಘಾತಕಾರಿ ಘಟನೆ ನಡೆದಿದೆ. ನದಿಗೆ ಹಾರುವ ಮುನ್ನ ಆಕೆ ಸೇತುವೆಯ ಮೇಲೆ ಡೆತ್‌ನೋಟ್ ಹಾಗೂ ತನ್ನ ವೈಯಕ್ತಿಕ ವಸ್ತುಗಳನ್ನು ಬಿಟ್ಟು ಹೋಗಿದ್ದಾಳೆ.
ವರದಿಯ ಪ್ರಕಾರ, ಯುವತಿ ಇತ್ತೀಚೆಗೆ 12 ನೇ ತರಗತಿ ಪರೀಕ್ಷೆ ಮುಗಿಸಿದ್ದು, ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲೂ ಭಾಗವಹಿಸಿದ್ದಳು. ಆದರೆ, ಆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಿರಲಿಲ್ಲ. ಇದರಿಂದ ಮನನೊಂದಿದ್ದ ಆಕೆಗೆ ಮನೆಯಲ್ಲಿ ಯಾವುದೋ ವಿಷಯಕ್ಕೆ ಪೋಷಕರು ಬೈದಿದ್ದರು. ಇದರಿಂದ ತೀವ್ರ ಬೇಸರಗೊಂಡ ಯುವತಿ ಸೇತುವೆಯಿಂದ ನದಿಗೆ ಧುಮುಕಿದ್ದಾಳೆ.
ಪೊಲೀಸರು ಸೇತುವೆಯ ಮೇಲೆ ನಗದು ಹಾಗೂ ಡೆತ್‌ನೋಟ್ ಅನ್ನು ವಶಪಡಿಸಿಕೊಂಡಿದ್ದಾರೆ. “ನನ್ನ ಈ ತೀರ್ಮಾನಕ್ಕೆ ನಾನೇ ಕಾರಣ, ಯಾರೂ ಹೊಣೆಗಾರರಲ್ಲ” ಎಂದು ಆಕೆ ಡೆತ್‌ನೋಟ್‌ನಲ್ಲಿ ಬರೆದಿದ್ದಾಳೆ. ಪ್ರಸ್ತುತ ಪ್ರವಾಹದ ಹಿನ್ನೆಲೆಯಲ್ಲಿ ನದಿಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅಡೆತಡೆ ಉಂಟಾಗಿದ್ದು, ಪೊಲೀಸರು ಹಾಗೂ ಮುಳುಗುತಜ್ಞರ ತಂಡ ಆಕೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದೆ.





Leave a comment