Home ಕ್ರೈಂ ನ್ಯೂಸ್ LACಯಲ್ಲಿ ಚೀನಾ ಸೈನ್ಯ ಹಿಂತೆಗೆತ: ಭಾರತೀಯ ಸೇನೆಯ ವಾರ್ಷಿಕ ವರದಿಯಲ್ಲಿ ಸ್ಪಷ್ಟನೆ
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

LACಯಲ್ಲಿ ಚೀನಾ ಸೈನ್ಯ ಹಿಂತೆಗೆತ: ಭಾರತೀಯ ಸೇನೆಯ ವಾರ್ಷಿಕ ವರದಿಯಲ್ಲಿ ಸ್ಪಷ್ಟನೆ

Share
LAC
Share

ನವದೆಹಲಿ: ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಹಾಗೂ ಮಿಲಿಟರಿ ಮಟ್ಟದ ಮಾತುಕತೆಗಳ ಪರಿಣಾಮವಾಗಿ, ಗಡಿ ನಿಯಂತ್ರಣ ರೇಖೆಯ (LAC) ಉತ್ತರ ಗಡಿ ಭಾಗದಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (PLA) ತನ್ನ ಸೈನ್ಯದ ಪ್ರಮಾಣವನ್ನು ಗಮನಾರ್ಹವಾಗಿ ಕಡಿತಗೊಳಿಸಿದೆ ಎಂದು ಭಾರತೀಯ ಸೇನೆಯ ೨೦೨೫-೨೬ರ ವಾರ್ಷಿಕ ವರದಿ ತಿಳಿಸಿದೆ.

ವರದಿಯ ಪ್ರಕಾರ, ೨೦೨೫ರಲ್ಲಿ ನಡೆದ ಮಾತುಕತೆಗಳ ನಂತರ ಗಡಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಎರಡೂ ದೇಶಗಳು ಸಮ್ಮತಿಸಿವೆ. ಪ್ರಸ್ತುತ ಎಲ್‌ಎಸಿ ಹಾಗೂ ಸಾಂಪ್ರದಾಯಿಕ ತರಬೇತಿ ಪ್ರದೇಶಗಳಲ್ಲಿ ಚೀನಾದ ಸುಮಾರು ೧೦ ಕಂಬೈನ್ಡ್ ಆರ್ಮ್ಸ್ ಬ್ರಿಗೇಡ್‌ಗಳಷ್ಟು ಸೈನಿಕರು ಮಾತ್ರ ನಿಯೋಜಿತರಾಗಿದ್ದಾರೆ. ಅಕ್ಟೋಬರ್ ೨೦೨೫ರಲ್ಲಿ ನಡೆದ ೨೩ನೇ ಕೋರ್ಸ್ ಕಮಾಂಡರ್ ಮಟ್ಟದ ಸಭೆ ಮತ್ತು ಗಡಿ ಸಿಬ್ಬಂದಿ ಸಭೆಗಳು ಗಡಿಯಲ್ಲಿ ಶಾಂತಿ ಸ್ಥಾಪಿಸಲು ಸಹಕಾರಿಯಾಗಿವೆ.

ಅದೇ ಸಮಯದಲ್ಲಿ, ಪಾಕಿಸ್ತಾನ ಗಡಿ ಭಾಗದಲ್ಲಿ ಡ್ರೋನ್ ನುಸುಳುವಿಕೆ ಹೆಚ್ಚಾಗಿದ್ದು, ೨೦೨೫ರಲ್ಲಿ ೮೬೩ ಡ್ರೋನ್ ಬೆದರಿಕೆಗಳು ವರದಿಯಾಗಿವೆ. ಇದರಲ್ಲಿ ೨೩೭ ಡ್ರೋನ್‌ಗಳನ್ನು ಭಾರತೀಯ ಪಡೆಗಳು ಹೊಡೆದುರುಳಿಸಿವೆ. ಗಡಿಯಲ್ಲಿ ಚೀನಾದ ಪಡೆಗಳು ಕಡಿಮೆಯಾಗಿದ್ದರೂ, ಭಾರತೀಯ ಸೇನೆಯು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಂಪೂರ್ಣವಾಗಿ ಸಜ್ಜಾಗಿದೆ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *