Home ದಾವಣಗೆರೆ ರಣಬಾಲಿ ಶೂಟಿಂಗ್ ಪೂರ್ಣಗೊಳಿಸಿದ ರಶ್ಮಿಕಾ ಮಂದಣ್ಣ: ಸೆಟ್‌ನಲ್ಲಿ ಪತಿ ವಿಜಯ್ ದೇವರಕೊಂಡಗೆ ಆಲಿಂಗನ!
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

ರಣಬಾಲಿ ಶೂಟಿಂಗ್ ಪೂರ್ಣಗೊಳಿಸಿದ ರಶ್ಮಿಕಾ ಮಂದಣ್ಣ: ಸೆಟ್‌ನಲ್ಲಿ ಪತಿ ವಿಜಯ್ ದೇವರಕೊಂಡಗೆ ಆಲಿಂಗನ!

Share
ರಶ್ಮಿಕಾ ಮಂದಣ್ಣ
Share

ಮುಂಬೈನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ತಮ್ಮ ಬಹುನಿರೀಕ್ಷಿತ ‘ರಣಬಾಲಿ’ (Ranabaali) ಸಿನಿಮಾದ ತಮ್ಮ ಭಾಗದ ಚಿತ್ರೀಕರಣವನ್ನು ಅಧಿಕೃತವಾಗಿ ಪೂರ್ಣಗೊಳಿಸಿದ್ದಾರೆ. 19ನೇ ಶತಮಾನದ ಬ್ರಿಟಿಷ್ ಆಡಳಿತ ಅವಧಿಯ ಹಿನ್ನೆಲೆಯಲ್ಲಿ ಮೂಡಿಬರುತ್ತಿರುವ ಈ ಪೀರಿಯಡ್ ಆಕ್ಷನ್ ಡ್ರಾಮಾ ಚಿತ್ರದಲ್ಲಿ ರಶ್ಮಿಕಾ ‘ಜಯಮ್ಮ’ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಶೂಟಿಂಗ್ ಪೂರ್ಣಗೊಂಡ ಹಿನ್ನೆಲೆಯಲ್ಲಿ ಚಿತ್ರತಂಡ ರಶ್ಮಿಕಾ ಅವರಿಗೆ ವಿಶೇಷವಾದ ಬೀಳ್ಕೊಡುಗೆ ನೀಡಿದೆ. ನಿರ್ದೇಶಕ ರಾಹುಲ್ ಸಾಂಕೃತ್ಯನ್, ನಟ ಹಾಗೂ ರಶ್ಮಿಕಾ ಅವರ ಪತಿ ವಿಜಯ್ ದೇವರಕೊಂಡ ಸೇರಿದಂತೆ ಇಡೀ ಚಿತ್ರತಂಡ ಸೆಟ್‌ನಲ್ಲಿ ನಟಿಗೆ ಆತ್ಮೀಯವಾಗಿ ಅಪ್ಪುಗೆ ನೀಡಿ ಶುಭ ಹಾರೈಸಿದೆ. ಈ ಕ್ಷಣದ ವೀಡಿಯೊವನ್ನು ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, “ಜಯಮ್ಮ ಪಾತ್ರದ ಶೂಟಿಂಗ್ ಮುಗಿದಿದೆ, ಸೆಟ್‌ನಲ್ಲಿ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ” ಎಂದು ಬರೆದುಕೊಂಡಿದೆ.

‘ಗೀತಾ ಗೋವಿಂದಂ’ ಹಾಗೂ ‘ಡಿಯರ್ ಕಾಮ್ರೇಡ್’ ಯಶಸ್ವಿ ಸಿನಿಮಾಗಳ ನಂತರ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಒಂದಾಗುತ್ತಿರುವ ಮೂರನೇ ಚಿತ್ರ ಇದಾಗಿದೆ. ಅಷ್ಟೇ ಅಲ್ಲದೆ, ಇವರಿಬ್ಬರ ಮದುವೆಯ ನಂತರ ತೆರೆಮೇಲೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಮೊದಲ ಸಿನಿಮಾ ಇದಾಗಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. 1854 ರಿಂದ 1878ರ ರಾಯಲಸೀಮಾ ಭಾಗದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಹಾಲಿವುಡ್ ನಟ ಅರ್ನಾಲ್ಡ್ ವೋಸ್ಲೂ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ‘ರಣಬಾಲಿ’ ಸಿನಿಮಾ ಮುಂಬರುವ ಅಕ್ಟೋಬರ್ 16 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

Share

Leave a comment

Leave a Reply

Your email address will not be published. Required fields are marked *

Related Articles