ಉತ್ತರ ಪ್ರದೇಶ: ಪೊಲೀಸ್ ಅಧಿಕಾರಿಗಳು, ಹಿರಿಯ ಖಾಕಿ ಸಿಬ್ಬಂದಿ ಹಾಗೂ ಪತ್ರಕರ್ತರಂತೆ ನಟಿಸಿ ಹನಿಟ್ರ್ಯಾಪ್ ಮೂಲಕ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಸುಲಿಗೆ ಮಾಡುತ್ತಿದ್ದ ಐದು ಜನರ ಗ್ಯಾಂಗ್ ಒಂದನ್ನು ಉತ್ತರ ಪ್ರದೇಶದ ಮೀರತ್ ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ಇಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಘಟನೆಯ ವಿವರ:
ಬಾಧಿತ ಯುವಕ ನೀರಜ್ ಪಾಲ್ ಎಂಬುವವರು ನೀಡಿದ ದೂರಿನ ಮೇರೆಗೆ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳಾದ ಶಶಾಂಕ್ ಶರ್ಮಾ, ರಾಹುಲ್ ಪಾಲ್ ಮತ್ತು ಆಕಾಶ್ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಯುವತಿಯ ಹೆಸರಿನಲ್ಲಿ ನಕಲಿ ಪ್ರೊಫೈಲ್ ರಚಿಸಿಕೊಂಡು ನೀರಜ್ ಅವರೊಂದಿಗೆ ಸಲುಗೆಯಿಂದ ಮಾತನಾಡಿದ್ದರು. ನಂತರ ಖಾಸಗಿ ಫೋಟೋಗಳನ್ನು ಹಂಚಿಕೊಂಡು, ನೇರವಾಗಿ ಸಿಗುವಂತೆ ನೀರಜ್ ಅವರನ್ನು ಕರೆಸಿಕೊಂಡಿದ್ದರು.
ನೀರಜ್ ನಿಗದಿತ ಸ್ಥಳಕ್ಕೆ ತಲುಪಿದ ತಕ್ಷಣ, ಅಲ್ಲಿಗೆ ಬಂದ ಇಬ್ಬರು ವ್ಯಕ್ತಿಗಳು ತಮನ್ನು ಪೊಲೀಸರು ಹಾಗೂ ಪತ್ರಕರ್ತರು ಎಂದು ಪರಿಚಯಿಸಿಕೊಂಡು ಬೆದರಿಕೆ ಹಾಕಿದ್ದಾರೆ. ಸುಳ್ಳು ಪ್ರಕರಣ ದಾಖಲಿಸುವುದಾಗಿ ಹೆದರಿಸಿ 2 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಲ್ಲದೆ, ಸ್ಥಳದಲ್ಲೇ ಗೂಗಲ್ ಪೇ ಮೂಲಕ 10,000 ರೂಪಾಯಿ ವರ್ಗಾಯಿಸಿಕೊಂಡಿದ್ದಾರೆ. ಅಲ್ಲದೆ ಯುವಕನ ವಿಡಿಯೋ ರೆಕಾರ್ಡ್ ಮಾಡಿ, ಡಿಪ್‌ಫೇಕ್ ತಂತ್ರಜ್ಞಾನ ಬಳಸಿ ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ್ದಾರೆ.
ಖಾಕಿ ಉಪಕರಣಗಳು ಜಪ್ತಿ:
ಸಂತ್ರಸ್ತನ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಹಿರಿಯ ಪೊಲೀಸ್ ಅಧೀಕ್ಷಕರ ನೇತೃತ್ವದ ತಂಡ, ರಾಹುಲ್ ಪಾಲ್ ಮತ್ತು ಆಕಾಶ್ ಎಂಬಿಬ್ಬರನ್ನು ಬಂಧಿಸಿದೆ. ಆರೋಪಿಗಳಿಂದ ನೋಂದಣಿ ಸಂಖ್ಯೆಯಿಲ್ಲದ ಮಾರುತಿ ಆಲ್ಟೋ ಕಾರು, ವಾಕಿ-ಟಾಕಿ, ಲಾಠಿ, ಪೊಲೀಸ್ ಸೀಲ್, ನೇಮ್ ಪ್ಲೇಟ್, ಲ್ಯಾಪ್‌ಟಾಪ್ ಹಾಗೂ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ “ಆರೋಪಿಗಳು ನಕಲಿ ಪೊಲೀಸ್ ಠಾಣೆಯನ್ನೇ ನಡೆಸುತ್ತಿದ್ದರು” ಎಂಬ ವದಂತಿಯನ್ನು ಮೀರತ್ ಪೊಲೀಸರು ತಳ್ಳಿಹಾಕಿದ್ದು, ಆರೋಪಿಗಳು ಕೇವಲ ಬಾಡಿಗೆ ಕಚೇರಿಯನ್ನು ಬಳಸಿಕೊಳ್ಳುತ್ತಿದ್ದರು ಎಂದು ಸ್ಪಷ್ಟಪಡಿಸಿದ್ದಾ






Leave a comment