Home ದಾವಣಗೆರೆ “ಬೆಂಕಿಗೆ ತುಪ್ಪ ಸುರಿಯಬೇಡಿ”: ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಶುರುವಾಯ್ತು ಹೃತಿಕ್ ರೋಷನ್ – ಕಂಗನಾ ರಣಾವತ್, ನೆಟಿಜನ್‌ಗಳಿಗೆ ನಟಿ ಕಂ ಸಂಸದೆಗೆ ಕ್ಲಾಸ್…!
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

“ಬೆಂಕಿಗೆ ತುಪ್ಪ ಸುರಿಯಬೇಡಿ”: ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಶುರುವಾಯ್ತು ಹೃತಿಕ್ ರೋಷನ್ – ಕಂಗನಾ ರಣಾವತ್, ನೆಟಿಜನ್‌ಗಳಿಗೆ ನಟಿ ಕಂ ಸಂಸದೆಗೆ ಕ್ಲಾಸ್…!

Share
ಕಂಗನಾ ರಣಾವತ್
Share

ಮುಂಬೈ: ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಮತ್ತು ನಟ ಋತಿಕ್ ರೋಷನ್ ನಡುವಿನ ಹಳೆಯ ವಿವಾದ ಮತ್ತೆ ಜೀವ ಪಡೆದುಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ “ಸಾರಿ ಋತಿಕ್” (Sorry Hrithik) ಹಾಗೂ “ವಿ ನೀಡ್ ಟು ಅಪೋಲಜೈಸ್ ಟು ಋತಿಕ್” ಟ್ರೆಂಡ್ ಸಂಬಂಧಿಸಿದಂತೆ ಋತಿಕ್ ರೋಷನ್ ಮಾಡಿದ ಕಮೆಂಟ್‌ಗೆ ನಟಿ ಕಂಗನಾ ರಣಾವತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಂಗನಾ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲೇನಿದೆ?

ಋತಿಕ್ ರೋಷನ್ ಅವರ ಹೇಳಿಕೆಗೆ ಸಂಬಂಧಿಸಿದ ಸುದ್ದಿ ವರದಿಯನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ಕಂಗನಾ, “ಆತ್ಮೀಯ ಋತಿಕ್, ನೀವು ನಿಮ್ಮ ಸೂಕ್ತ ಜೋಡಿ ಸಬಾ ಆಜಾದ್ ಅವರನ್ನು ಕಂಡುಕೊಂಡಿರುವುದಕ್ಕೆ ನನಗೆ ಸಂತೋಷವಿದೆ. ನೀವಿಬ್ಬರೂ ಒಟ್ಟಿಗೆ ಚೆನ್ನಾಗಿ ಕಾಣಿಸುತ್ತೀರಿ. ನೀವು ಕಮಿಟೆಡ್ ರಿಲೇಶನ್‌ಷಿಪ್‌ನಲ್ಲಿದ್ದಾಗ ಒಬ್ಬ ಮಹಿಳೆಯನ್ನು ಈ ರೀತಿ ಚೇಷ್ಟೆ ಮಾಡುವುದು ನಿಮಗೆ ಶೋಭೆ ತರುವುದಿಲ್ಲ.”

“ಬದಲಿಗೆ ನಿಮ್ಮ ಹೆಸರು ಬಳಸಿ ನನಗೆ ಕಿರುಕುಳ ನೀಡುತ್ತಿರುವವರನ್ನು ಮತ್ತು ಬುಲ್ಲಿ ಮಾಡುತ್ತಿರುವವರನ್ನು ನೀವು ಖಂಡಿಸಬೇಕು. ಉರಿಯುವ ಬೆಂಕಿಗೆ ತುಪ್ಪ ಸುರಿಯುವುದನ್ನು ಮತ್ತು ನಿಮ್ಮ ಸಂಗಾತಿಗೆ ಮುಜುಗರ ಉಂಟುಮಾಡುವುದನ್ನು ನಿಲ್ಲಿಸಿ. ನಿಮಗೆ ಒಳ್ಳೆಯ ಬುದ್ಧಿ ಬರಲಿ ಎಂದು ಭಾವಿಸುತ್ತೇನೆ” ಎಂದು ಕಂಗನಾ ತೀಕ್ಷ್ಣವಾಗಿ ಬರೆದುಕೊಂಡಿದ್ದಾರೆ.

ಋತಿಕ್ ರೋಷನ್ ಹೇಳಿದ್ದೇನು?

ಇದಕ್ಕೂ ಮುನ್ನ, ಇನ್‌ಸ್ಟಾಗ್ರಾಮ್‌ನಲ್ಲಿ ಇನ್‌ಫ್ಲುಯೆನ್ಸರ್ ಫ್ರೆಡ್ಡಿ ಬರ್ಡಿ “ಜಗತ್ತು ಋತಿಕ್ ರೋಷನ್‌ಗೆ ಕ್ಷಮೆ ಕೇಳಬೇಕು” ಎಂದು ಪೋಸ್ಟ್ ಮಾಡಿದ್ದರು. ಇದಕ್ಕೆ ಕಮೆಂಟ್ ಮಾಡಿದ್ದ ಋತಿಕ್ ರೋಷನ್, “ನನ್ನ ಸ್ನೇಹಿತನೇ, ‘ಬಿ’ ವ್ಯಕ್ತಿಯನ್ನು ಇಷ್ಟಪಡುವುದಿಲ್ಲ ಎಂಬ ಕಾರಣಕ್ಕೆ ‘ಎ’ ವ್ಯಕ್ತಿಯ ಪರವಾಗಿ ನಿಲ್ಲುವುದು ನಮ್ಮ ಸಮಾಜವನ್ನು ಬಾಧಿಸುತ್ತಿರುವ ದೊಡ್ಡ ವ್ಯವಸ್ಥಿತ ಸಮಸ್ಯೆಯ ಸಣ್ಣ ಭಾಗವಾಗಿದೆ. ಸೂಕ್ತ ಸಂದರ್ಭ ಮತ್ತು ಸತ್ಯ ಸಂಗತಿಗಳು ಹೊರಬರುವವರೆಗೆ ನಾನು ಕಾಯುತ್ತೇನೆ. ಅದು ನ್ಯಾಯಯುತವಾಗಿರುತ್ತದೆ” ಎಂದು ಪ್ರತಿಕ್ರಿಯಿಸಿದ್ದರು.

ಈ ಟ್ರೆಂಡ್ ಶುರುವಾಗಿದ್ದು ಹೇಗೆ?

ಇತ್ತೀಚೆಗೆ ವಿದ್ಯಾರ್ಥಿಗಳ ಪ್ರತಿಭಟನೆಗೆ ಸಂಬಂಧಿಸಿದಂತೆ ಕಂಗನಾ ರಣಾವತ್ ಮಾಡಿದ ಹೇಳಿಕೆಗಳು ತೀವ್ರ ವಿವಾದಕ್ಕೆ ಕಾರಣವಾಗಿದ್ದವು. ಈ ವೇಳೆ ಸಿಜೆಪಿ ವಕ್ತಾರ ಸೌರವ್ ದಾಸ್ ಹಾಗೂ ಕಂಗನಾ ನಡುವೆ ವಾಕ್ಸಮರ ನಡೆದಿತ್ತು. ಸೌರವ್ ದಾಸ್ ತಮಾಷೆಯಾಗಿ “ನಾನು ಯುವ ಋತಿಕ್ ರೋಷನ್ ರೀತಿ ಕಾಣಿಸುತ್ತೇನೆ, ಅದಕ್ಕೆ ಕಂಗನಾ ನನ್ನ ಮೇಲೆ ದಾಳಿ ಮಾಡುತ್ತಿರಬಹುದು” ಎಂದು ಹೇಳಿದ್ದರು. ಇದರ ಬೆನ್ನಲ್ಲೇ ನೆಟ್ಟಿಗರು 2016ರ ಕಂಗನಾ-ಋತಿಕ್ ಕಾನೂನು ಸಮರವನ್ನು ನೆನಪಿಸಿಕೊಂಡು ‘ಸಾರಿ ಋತಿಕ್’ ಟ್ರೆಂಡ್ ಆರಂಭಿಸಿದ್ದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles