SUDDIKSHANA KANNADA NEWS/ DAVANAGERE/ DATE:18-03-2024
ದಾವಣಗೆರೆ: ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಮತ್ತು ವಿನೋಬನಗರ ಶ್ರೀ ಚೌಡೇಶ್ವರಿದೇವಿ ಜಾತ್ರೆಯ ಬಂದೋಬಸ್ತ್ ಪ್ರಯುಕ್ತ ದಾವಣಗೆರೆ ನಗರದಲ್ಲಿ ಒಮ್ಮುಖ ರಸ್ತೆಗಳನ್ನಾಗಿ ತಾತ್ಕಾಲಿಕವಾಗಿ ಮಾಡಲಾಗಿದೆ.
ಮಾರ್ಚ್ 19 ಮತ್ತು 20ರಂದು ದಾವಣಗೆರೆ ನಗರದಲ್ಲಿ ನಡೆಯಲಿರುವ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಮತ್ತು ವಿನೋಬನಗರ ಶ್ರೀ ಚೌಡೇಶ್ವರಿ ದೇವಿಯ ಜಾತ್ರೆಯ ಪ್ರಯುಕ್ತ ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ಸುಗಮ ಸಂಚಾರದ ಪ್ರಯುಕ್ತ ಹಳೇ ಪಿ.ಬಿ ರಸ್ತೆಯ ಅರುಣಾ ಸರ್ಕಲ್ನಿಂದ ಹೊಂಡದ ಸರ್ಕಲ್ ವರೆಗೆ, ಹೊಂಡದ ರಸ್ತೆ ಹಾಗೂ ಹೊಂಡದ ಸರ್ಕಲ್ನಿಂದ ಕೋರ್ಟ್ ಸರ್ಕಲ್ ವರೆಗೆ, ಜಾಲಿನಗರ 2 ನೇ ಮುಖ್ಯ ರಸ್ತೆ ಮತ್ತು ಶಿವಾಲಿ ರಸ್ತೆಗಳನ್ನು ಮಾರ್ಚ್ 18ರಿಂದ 21ರವರೆಗೆ ತಾತ್ಕಾಲಿಕವಾಗಿ ಒಮ್ಮುಖ ರಸ್ತೆಗಳನ್ನಾಗಿ ಮಾಡಲಾಗಿದೆ.
ಜಾತ್ರೆಗೆ ಬರುವ ಸಾರ್ವಜನಿಕರು ಅರುಣಾ ಸರ್ಕಲ್ ನಿಂದ ಹೊಂಡದ ರಸ್ತೆ ಕಡೆಗೆ ಬಂದು ಜಾಲಿನಗರ 2 ನೇ ಮೇನ್ ರಸ್ತೆಯಿಂದ ಶಿವಾಲಿ ರಸ್ತೆಯ ಮೂಲಕ ಕೋರ್ಟ್ ಸರ್ಕಲ್ ಕಡೆಗೆ ಹೋಗಲು ಸೂಚಿಸಿದೆ. ಹಳೇ ಪಿಬಿ ರಸ್ತೆ ಕಡೆಯಿಂದ ಬರುವ ಭಕ್ತಾದಿಗಳು ಅರುಣ ಸರ್ಕಲ್ ಸಮೀಪದ ಹಳೇ ವಾಣಿಹೋಂಡ ಶೋ ರೂಂ ಪಕ್ಕದ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡಿ ಅರುಣ ವೃತ್ತದಿಂದ ಹೊಂಡದ ವೃತ್ತದ ಮಾರ್ಗಾವಾಗಿ ಕಾಲು ನಡಿಗೆಯಲ್ಲಿ ದೇವರ ದರ್ಶನಕ್ಕೆ ತೆರಳಬೇಕು. ಸಂಗೋಳ್ಳಿ ರಾಯಣ ವೃತ್ತದ ಮೂಲಕ ಆರ್.ಟಿ.ಓ ವೃತ್ತಕ್ಕೆ ಬಂದು ಬೂದಾಳ್ ರಸ್ತೆ ಮತ್ತು ಕೊಂಡಜ್ಜಿ ರಸ್ತೆಗೆ ಹೊಂದಿಕೊಂಡಂತೆ ಮಾಡಿರುವ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿ ಕಾಲು ನಡಿಗೆಯಲ್ಲಿ ದೇವರ ದರ್ಶನಕ್ಕೆ ತೆರಳಲು ವ್ಯವಸ್ಥೆ ಮಾಡಲಾಗಿದೆ.
ಈ ಕೆಳಕಂಡ ಸ್ಥಳಗಳಲ್ಲಿ ವಾಹನ ನಿಲುಗಡೆ:
- ದುರ್ಗಾಂಬಿಕ ಕಾಂಪ್ಲೆಕ್ಸ್ ಕೊಂಡಜ್ಜಿ ರಸ್ತೆ
- ದುರ್ಗಾಂಬಿಕ ಶಾಲೆಯ ಆವರಣದ ಒಳಭಾಗದಲ್ಲಿ
- ಜಾಲಿನಗರ ರಸ್ತೆ , ಹೊಂಡದ ವ್ಯತ್ತ ಹತ್ತಿರ, ಎಂ ಎನ್ ಸಿ ಕಾನ್ವೆಂಟ್ ಸ್ಕೂಲ್ ಮುಂಭಾಗ ಕೊಂಡಜ್ಜಿ ರಸ್ತೆ
- ದುರ್ಗಾಂಬಿಕಾ ಮೈದಾನ ( ಕಾಂಪೌಂಡ್ ಹಾಕಿರುವ ಖಾಲಿ ಜಾಗ ) ಬೂದಾಳ್ ರಸ್ತೆ ಇಂದಿರಾ ಕ್ಯಾಂಟಿನ್ ಹತ್ತಿರ
- ಫ್ರೆಶ್ ಬೇಕರಿ ಎದುರು ಗೌರ ಸಂದ್ರ ಮಾರಮ್ಮ ದೇವಾಸ್ಥಾನ ರಸ್ತೆ ( ಬೂದಾಳ್ ರಿಂಗ್ ರೋಡ್ ಸಮೀಪ ) ವಾಹನಗಳ ನಮೂನೆ ದ್ವಿ ಚಕ್ರ ವಾಹನಗಳು ದ್ವಿ ಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳು ದ್ವಿಚಕ್ರ
ವಾಹನಗಳು - ಅನ್ನಪೂರ್ಣ ಲ್ಯಾಬ್ ಮುಂಭಾಗ , ಮುರುಘರಾಜೇಂದ್ರ ಶಾಲೆ ಬಳಿ
- ಚೌಡೇಶ್ವರಿ ದೇವಾಸ್ಥಾನ ಮೈದಾನ , ಶಿವ ನಗರ , ಕೈಲಾಸ ರಸ್ತೆ
ವಿವಿಐಪಿ ವಾಹನಗಳ ಪಾರ್ಕಿಂಗ್
- ಖಡಕ್ ಷಾ ವಲಿ ದರ್ಗಾ ಸಮೀಪ ( ದುಗ್ರಮ್ಮ ದೇವಾಸ್ಥಾನದ ಸಮೀಪ )
- ಕಾಳಿಕಾದೇವಿ ದೇವಾಸ್ಥಾನದ ಮುಂಭಾಗ ( ಹಗೆದಿಬ್ಬ ವೃತ್ತದ ಸಮೀಪ )
- ದೇವರಾಜ್ ಆರಸ್ ಬಡಾವಣೆ ಮೈದಾನ, ಸ್ವಿಮ್ಮಿಂಗ್ ಫೂಲ್
- ದ್ವಿ ಚಕ್ರ ವಾಹನಗಳು ದ್ವಿ ಚಕ್ರ ವಾಹನಗಳು ನಾಲ್ಕು ಚಕ್ರ ವಾಹನಗಳು ಹಳೇ ವಾಣಿಹೊಂಡ ಶೋ ರೂಂ ಪಕ್ಕದ ಖಾಲಿ ಜಾಗ
- ವಿಶ್ವ ಭಾರತಿ ವಿದ್ಯಾಪೀಠದ ಹತ್ತಿರ ಖಾಲಿ ಜಾಗ, ನಲ್ಲೂರು
- ಶಾಂತರಾಮ್ ರಸ್ತೆ, ಎಂಸಿಸಿ ಎ ಬ್ಲಾಕ್
- ಜಿಯೋ ಅಫೀಸ್ ಹತ್ತಿರದ ಖಾಲಿ ಜಾಗ
- ನಲ್ಲೂರು ಶಾಂತರಾಮ್ ರಸ್ತೆ, ಎಂಸಿಸಿ ಎ ಬ್ಲಾಕ್