Home ಕ್ರೈಂ ನ್ಯೂಸ್ 27 ಬಾರಿ ಇರಿದು ಪ್ರಿನ್ಸಿಪಾಲ್ ಹತ್ಯೆ: ಆ ಆಸ್ಪದದ ‘ಒಂದೇ ಒಂದು ಮಾತು’ ಕೊಲೆಗಡುಕರ ಬಲಿಕೆಡವಿತು, ಕೊಲೆ ಬಳಿಕ ಗೋವಾದಲ್ಲಿ ಮೋಜು ಮಸ್ತಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

27 ಬಾರಿ ಇರಿದು ಪ್ರಿನ್ಸಿಪಾಲ್ ಹತ್ಯೆ: ಆ ಆಸ್ಪದದ ‘ಒಂದೇ ಒಂದು ಮಾತು’ ಕೊಲೆಗಡುಕರ ಬಲಿಕೆಡವಿತು, ಕೊಲೆ ಬಳಿಕ ಗೋವಾದಲ್ಲಿ ಮೋಜು ಮಸ್ತಿ!

Share
ಪ್ರಿನ್ಸಿಪಾಲ್
Share

ತೆಲಂಗಾಣ: ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದ 48 ವರ್ಷದ ಶಾಲಾ ಪ್ರಿನ್ಸಿಪಾಲ್ ಕಲ್ಲು ರೂಪಾ ರೆಡ್ಡಿ ಅವರ ದಾರುಣ ಹತ್ಯೆ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಅದೇ ಶಾಲೆಯ ಇಬ್ಬರು 10ನೇ ತರಗತಿಯ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

ಆಗಸ್ಟ್ 12 ರಂದು ನಲ್ಗೊಂಡದ ಕೊಂಡಮಲ್ಲೇಪಲ್ಲಿಯ ತಮ್ಮ ನಿವಾಸದಲ್ಲಿ ರೂಪಾ ರೆಡ್ಡಿ ಅವರು 27 ಬಾರಿ ಇರಿತಕ್ಕೊಳಗಾಗಿ ಹೆಣವಾಗಿ ಪತ್ತೆಯಾಗಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಸಿಡಿಸಿಟಿವಿ ದೃಶ್ಯಾವಳಿ, ಫೋರೆನ್ಸಿಕ್ ಆಧಾರ ಹಾಗೂ 80ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಿದರು.

‘ಬಾಬು’ ಪದ ತಂದಿಟ್ಟ ಸುಳಿವು:

ತನಿಖೆಯ ವೇಳೆ ಪ್ರಿನ್ಸಿಪಾಲ್ ರೂಪಾ ರೆಡ್ಡಿ ಅವರ ಫೋನ್ ಸ್ವಿಚ್ ಆಫ್ ಆಗುವ ಮುನ್ನ ಅವರು ತಮ್ಮ ಚಿಕ್ಕಮ್ಮನೊಂದಿಗೆ ಮಾತನಾಡುತ್ತಾ ‘ಬಾಬು’ ಎಂದು ಹೇಳಿರುವುದು ಗೊತ್ತಾಯಿತು. ಅವರು ಸಾಮಾನ್ಯವಾಗಿ ಶಾಲೆಯ ಗಂಡು ಮಕ್ಕಳನ್ನು ‘ಬಾಬು’ ಎಂದು ಕರೆಯುತ್ತಿದ್ದರು. ಈ ಒಂದು ಸುಳಿವು ತನಿಖೆಯನ್ನು ಶಾಲೆಯ ವಿದ್ಯಾರ್ಥಿಗಳತ್ತ ತಿರುಗಿಸಿತು. ಶಾಲೆಯಲ್ಲಿ ಗೈರಾಗಿದ್ದ ಐವರು ವಿದ್ಯಾರ್ಥಿಗಳಲ್ಲಿ ಇಬ್ಬರು ಇತ್ತೀಚೆಗೆ ಮೋಜು-ಮಸ್ತಿಗಾಗಿ ಹೆಚ್ಚಿನ ಹಣ ಖರ್ಚು ಮಾಡುತ್ತಿರುವುದು ಪತ್ತೆಯಾಯಿತು.

ದ್ವೇಷ ಮತ್ತು ಕಳುವಿನ ಸಂಚು:

ಹಿಂದೆ ಹಾಸ್ಟೆಲ್ ಬ್ಯಾಗ್‌ನಲ್ಲಿ ಹಣ ಹಾಗೂ ಮೊಬೈಲ್ ಕದ್ದಿದ್ದಕ್ಕೆ ಪ್ರಿನ್ಸಿಪಾಲ್ ಇಬ್ಬರನ್ನೂ ಗದರಿಸಿ, ಹೆತ್ತವರಿಗೆ ದೂರು ನೀಡಿ ಹಾಸ್ಟೆಲ್‌ನಿಂದ ವಜಾಗೊಳಿಸಿದ್ದರು. ಇದರಿಂದ ದ್ವೇಷ ಬೆಳೆಸಿಕೊಂಡಿದ್ದ ವಿದ್ಯಾರ್ಥಿಗಳು ಯೂಟ್ಯೂಬ್‌ನಲ್ಲಿ ‘ಸುಲಭವಾಗಿ ಹಣ ಗಳಿಸುವುದು ಹೇಗೆ’ ಎಂದು ಹುಡುಕಿ ಕಳ್ಳತನಕ್ಕೆ ಸಂಚು ರೂಪಿಸಿದ್ದರು. ಕಳ್ಳತನಕ್ಕೆ ಬಂದಾಗ ಮಂಕಿ ಕ್ಯಾಪ್ ಜಾರಿ ಪ್ರಿನ್ಸಿಪಾಲ್ ಗುರುತಿಸಿದ ಕಾರಣಕ್ಕೆ, ಭಯಗೊಂಡು 27 ಬಾರಿ ಇರಿದು ಕೊಲೆ ಮಾಡಿದ್ದರು. ಬಳಿಕ ₹2.50 ಲಕ್ಷ ಹಣದೊಂದಿಗೆ ಪರಾರಿಯಾಗಿ ಗೋವಾಗೆ ಪ್ರವಾಸ ಕೈಗೊಂಡು ಐಫೋನ್ ಖರೀದಿಸಿದ್ದರು. ಪೊಲೀಸರು ಸದ್ಯ ಆರೋಪಿಗಳಿಂದ ₹1.54 ಲಕ್ಷ ನಗದು ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *