ನವದೆಹಲಿ: ನೊಯ್ಡಾದ ಅತ್ಯಂತ ಪ್ರಸಿದ್ಧ ‘ಡಿಎಲ್ಎಫ್ ಮಾಲ್ ಆಫ್ ಇಂಡಿಯಾ’ದ ಉನ್ನತ ಮಟ್ಟದ ಸೂಪರ್ಮಾರ್ಕೆಟ್ ‘ಲೆ ಮಾರ್ಚೆ’ ಅಂಗಡಿಯಲ್ಲಿ ಮಹಿಳೆಯೊಬ್ಬರು ವಸ್ತುಗಳನ್ನು ಕದಿಯುವಾಗ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆಯ ವಿವರ:
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ:
ಮಾಲ್ನ ‘ಲೆ ಮಾರ್ಚೆ’ ಸ್ಟೋರ್ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮಹಿಳೆಯನ್ನು ಸಿಬ್ಬಂದಿ ಗಮನಿಸಿ, ಸಿಸಿಟಿವಿ ಫೂಟೇಜ್ ಮೂಲಕ ಆಕೆ ವಸ್ತುಗಳನ್ನು ಕದಿಯುತ್ತಿದ್ದುದನ್ನು ಖಚಿತಪಡಿಸಿಕೊಂಡಿದ್ದಾರೆ.
ಭದ್ರತಾ ಸಿಬ್ಬಂದಿಯಿಂದ ತೆರವು:
ಕಳವು ನಡೆಸಿರುವುದು ಸಸ್ಪೆಕ್ಟ್ ಆದ ತಕ್ಷಣ, ಭದ್ರತಾ ಸಿಬ್ಬಂದಿ ಮತ್ತು ಮಹಿಳಾ ಭದ್ರತಾ ಅಧಿಕಾರಿಗಳು ಆಕೆಯನ್ನು ತಡೆದು ಮಾಲ್ನಿಂದ ಹೊರಗೆ ಕರೆದೊಯ್ದಿದ್ದಾರೆ.
ಹಲವು ಬಾರಿ ಕಳವು ಮಾಡಿದ ಆರೋಪ:
ಸ್ಟೋರ್ ಸಿಬ್ಬಂದಿಯ ಪ್ರಕಾರ, ಈ ಮಹಿಳೆ ಆಗಸ್ಟ್ 15 ರಿಂದ ಇಲ್ಲಿಗೆ ನಿಯಮಿತವಾಗಿ ಬರುತ್ತಿದ್ದು, ಸುಮಾರು 4,000 ರೂ. ಮೌಲ್ಯದ ತುಪ್ಪ, ಎಣ್ಣೆ ಬಾಟಲಿಗಳು ಸೇರಿದಂತೆ ಹಲವು ಸಾಮಗ್ರಿಗಳನ್ನು ಕದ್ದಿದ್ದಾರೆ. ಇದು ಅವರ 5ನೇ ಕಳವು ಯತ್ನವಾಗಿತ್ತು ಎಂದು ತಿಳಿಸಿದ್ದಾರೆ.
ಮುಖ ಮುಚ್ಚಿಕೊಂಡ ಮಹಿಳೆ:
ಸೆಕ್ಯುರಿಟಿ ಗಾರ್ಡ್ಗಳು ಹೊರಗೆ ಕರೆದೊಯ್ಯುವಾಗ, ಮಹಿಳೆಯು ಮೊಬೈಲ್ ಕರೆ ಮಾಡುತ್ತಾ ತನ್ನ ಮುಖವನ್ನು ಫೋನ್ನಿಂದ ಮುಚ್ಚಿಕೊಳ್ಳಲು ಯತ್ನಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.





Leave a comment